ಪುಟ:ನಭಾ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಗಳಿಂದ ಪರಿಷ್ಕೃತವಾದ ಪುಸ್ತಕವೇ ನಿಜವಾದ ಪುಸ್ತಕವೆಂಬುದೇ ನಮ್ಮ ಮ ತವ, ಇಂತಹ ಉತ್ತಮ ತರದ ಪುಸ್ಥಕಗಳನ್ನು ಬರೆಯುವ ಭಾಗ್ಯಶಾಲಿ ಗಳು, ರಾಷ್ಟ್ರದ ಅಭ್ಯುದಯ ಕಾಲವು ಬಂದೊದಗಿದಾಗ ಮಾತ್ರ ಅವತರಿ ಸುವರೆಂದು ಇತಿಹಾಸವು ಬೋಧಿಸುತ್ತಿದ್ದರೂ ಪುಸ್ತಕದ ನಿಜವಾದ ಉದ್ದೇಶ ವೇನೆ೦ಬ ತತ್ವವನ್ನು ಮನಸ್ಸಿನಲ್ಲಿ ದೃಢವಾಗಿ ನಿಲಿಸಿಕೊಂಡು, ಸ್ವಶಕ್ಕನು ಸಾರವಾಗಿ ಶುದ್ಧ ಭಾವದಿಂದ ಪುಸ್ತಕವನ್ನು ಬರೆಯುವ ಅಧಿಕಾರವ್ರ, ತಮ್ಮ ವಿಚಾರಗಳನ್ನು ಪ್ರಕಟಿಸಲು ಸಮರ್ಥರಾದ, ಸಾಕ್ಷರರಿಗೆಲ್ಲ ನಿಃಸಂದೇಹ ವಾಗಿ ಇರುವುದು, ಏಕೆಂದರೆ, ಗಗನದಲ್ಲಿ ಆತಂಕವಿಲ್ಲದೆ, ಸ್ವಚ್ಛೆ ಯಾಗಿ ಸಂಚರಿಸುವ ಪತ್ನಿ ರಾಜನಾದ ಗರುಡನನ್ನು ನೋಡಿ, ಕೇವಲ ಅಲ್ಪ ವಾದ ಶನ್ನ ರೆಕ್ಕೆಯ ಶಕ್ತಿಯೆಷ್ಟೆಂದು ನಾಚಿಕೆ ಪಟ್ಟು ಗುಬ್ಬಿಯು ಹಾರುವ ದನ್ನೇನೂ ಬಿಟ್ಟು ಬಿಡುವುದಿಲ್ಲ. ಈ ವಿಚಾರವನ್ನೆ ಮಾಡಿ ನಾವು ಕೂಡ ಮೇಲೆ ಹೇಳುಟ್ಟ ಧೈಯವನ್ನೇ ಮುಂದಿರಿಸಿಕೊಂಡು ಶಕ್ಕನುಸಾರವಾಗಿ ಲೋಕಹಿತಕರವಾದ ಸೇವಾ ಕಾರ್ಯ ದಲ್ಲಿ ಪ್ರಯತ್ನಿ ಸಲು ನಿಶ್ಚಯಿಸಿ ಮುಂದರಿಸಿದೆವು. ಈ ಉದ್ದೇಶದಿಂದ ಮುಂದೆ ಬಂದವರಾದ ನಾವು ನೂತನವಾದ ಆವ ಹೊಸವಿಚಾರಗಳನ್ನು ಪ್ರಕಟಿಸಿ ಹೊಸಶಿಕ್ಷಣವನ್ನು ಕೊಡಬಹುದೆಂದು ಹಲವರು ಆಕ್ಷೇಪಿಸಬಹುದು. ಈ ಆಕ್ಷೇಪಕ್ಕೆ ಸಮಾಧಾನಕಾರಕವಾದ ಉತ್ತರವನ್ನು ಕೊಡುವುದು ಕಠಿನವಾದ ಮಾತಲ್ಲ. ಈವರೆಗೆ ಸರ್ವ ಸಾಧಾ ರಣವಾಗಿ ಸ್ತ್ರೀಯರ ಸ್ವಭಾವವ ಯಾವಬಗೆಯದಾಗಿರುವುದು, ಅವರಲ್ಲಿ ಸ್ವಭಾವಜನ್ಯವಾಗಿ ನೆಲೆಗೊಂಡಿರುವ ಸುಗುಣ ದುರ್ಗುಣಗಳಾವುವು, ಅವ ರಿಗೆ ಆವಬಗೆಯ ಶಿಕ್ಷಣವನ್ನು ಕೊಟ್ಟರೆ ಅವರಲ್ಲಿರುವ ಜನ್ಮಸಿದ್ದ ವಾದ ಸುಗು ಣಗಳು ವಿಕಾಸಹೊಂದಿ ದುರ್ಗುಣಗಳು ಅಳಿದುಹೋಗುವುವ, ಆಯುಷ್ಯ ದಲ್ಲಿ ಅವರ ದೈಯವು ಆವಬಗೆಯದಾಗಿರಬೇಕು, ಈಗಿನ ಅವರ ಸಾಮಾ ಜಿಕ ಸ್ಥಿತಿಯಲ್ಲಿ ಅನಾವ ಸುಧಾರಣೆಗಳಾಗುವುದು ಇಷ್ಟವಾದುದು, ಇವೇ ಮೊದಲಾದ ಸ್ತ್ರೀಯರ ಹಿತಾಹಿತದ ಅನೇಕ ಪ್ರಶ್ನೆಗಳ ವಿಚಾರವನ್ನು ಪುರು ನರೇ ಮಾಡುತ್ತ ಬಂದಿದ್ದು ಬೇರಬೇರೆಯವರು ತಮತಮಗೆ ಸರಿತೋರಿದಂತೆ * ಭಿನ್ನ ವಾದ ತಮ್ಮ ಅಭಿಪ್ರಾಯಗಳನ್ನು ಪ್ರಕಟಪಡಿಸುತ್ತಲಿರುವರು.