ಪುಟ:ನಭಾ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 97 ಬಂದು ಅದಕ್ಕೆ ಅಡ್ಡಲಾಗಿ ನಿಂತು ಕಣ್ಣುಗಳನ್ನು ಮತ್ತಷ್ಟು ಕೆಂಪಗೆ ಮಾಡಿಕೊಂಡು ತಿರುಗಿಸುತ್ತೆ ( ನಭಾ ! ಈಗ, ಸಂದೇಹವಿಲ್ಲವೊ ? » ಎಂದನು. - ನಭೆಗೆ ಅತ್ಯಾಗ್ರಹವುಂಟಾಯಿತು, ಆದರೂ ತಾಳ್ಮೆಯನ್ನೇ ವಹಿಸಿ ದಳು; ದರ್ಪಿತ ಸ್ವರದಿಂದ ಹೇಳಿದಳು:- “ಕಾಮಾತುರರಿಗೆ ಈ ನಡ, ತಯು ಸರಿಯಾದುದೇ ? ಅದು ಅವರ ದೊಷವಲ್ಲ. ಆ ವಿಷಯವನ್ನು: ನಾನು ಬಲ್ಲೆನು, ನೀನು ನನ್ನ ಸತೀತ್ವಕ್ಕೇನೂ ಕುಂದನ್ನು ತರಲಾರೆ. ವೃಥಾ ಕಷ್ಟ ನಿಷ್ಟುರಗಳೇಕೆ? ವಯಸ್ಸು, ಗುಣ, ವಿದ್ಯೆ, ಕುಲಶೀಲಗಳಲ್ಲಿ ನಿನಗನುಕೂಲಳಾದೊಬ್ಬಳನ್ನು ವಿವಾಹವಾಗಿ ಸೌಖ್ಯದಿಂದ ಬಾಳಿಕೊಂ ಡಿರು, ಚಿರಸನ್ಯಾಸವ್ರತಧಾರಿಣಿಯಾದ ವಿರಾಗಿಣಿಯಲ್ಲೇಕೆ ನಿನಗೆ ಹಾಸ್ಯ ಏನೊದಗಳು ?? ರಾಜ:-ನನಗೆ ತತ್ವಬೋಧೆಯು ಬೇಕಾಗಿಲ್ಲ, ನಾನು ಹೇಳು ವಂತ ನೀನು ಕೇಳುವೆಯೋ ಇಲ್ಲವೋ? ನಭಾ:- ಮೂರ್ಖ, ನಾನು ಇಲ್ಲಿಂದ ಹೋಗುವುದು ದೊಡ್ಡದಲ್ಲ. ನೀನು ಎಚ್ಚರಿಕೆಯಿಂದ ಇರು, ಹೋಗಲನುವಾಗಿರುವ ನನ್ನ ನ್ನು ನೀನು ಹಿಡಿದು ನಿಲ್ಲಿಸಲಾರೆ. ನಿನ್ನೀ ವಿಪರೀತ ಪ್ರಜ್ಞೆಗೆ ಧಿಕ್! ಧಿಕ್!! ನಿನ್ನಂತ ಹರ ಪಾಂಡಿತ್ಯ ಪ್ರಭೆಗೆ ಧಿಕ್ಕಾರವಿರಲಿ, ಹೋಗು, ಹುಡ್ಗ ! ನಿನಗಷ್ಟು ಉನ್ಮಾದವಿದ್ದರೆ, ವಿಧವಾಶ್ರಮದ ಸ್ವಯಂಪ್ರಭುತ್ವದವರ ಮರೆಹೊಗು, ನಡೆ !” ನಭೆಯು ಬಾಗಿಲನ್ನು ತೆಗೆಯಲು ಕೈನೀಡಿದಳು. ರಾಜಶೇಖರನು ಹುಚ್ಚನಂತ ಅವಳ ಕೈಗಳನ್ನು ಹಿಡಿದು ನಿಲ್ಲಿಸಲು ಪ್ರಯತ್ನ ಪಟ್ಟನು. ನಭೆಯ ಶರೀರವು ರಕ್ತವರ್ಣವನ್ನು ತಾಳಿತು, ಆದರೂ ಹೃದಯದಲ್ಲಿದ್ದ ಶಾಂತಿರಸವು ಮಾತ್ರ ಕಡಮೆಯಾಗಲಿಲ್ಲ. ಸತೀತ್ವ ರಕ್ಷಣಾಸಕ್ತಿಯು ಪ್ರಬಲ ಮದುದರಿಂದ ಅವಳು ರಾಜಶೇಖರನ ಬಾಹುಗಳನ್ನು ಬಲವಾಗಿ ಹಿಡಿದೆ ಳೆದು ಮಂಚದಮೇಲೆ ನೂಕಿ ಕದಕ್ಕೆ ತಾನೇ ಅಡ್ಡವಾಗಿ ನಿಂತು, ಆ ಭ್ರಾಂತ! ಎಂತಹ ಬಲಿಷ್ಟನಾದರೂ ಕಾಮಾತುರನಾದರೆ, ನಿತ್ಯ ಕನಾಗು 'ನನೆಂಬುದಕ್ಕೆ ನಿದರ್ಶನ ದೊರೆತುದೆ? ಹುಚ್ಚ! ಇಂತಹ ಅಕೃತ್ಯಕ್ಕೆ ನಿನ್ನ