ಪುಟ:ನಭಾ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭ - 101 ತಿರಸ್ಕೃತನಾದನೆಂಬ ವರ್ತಮಾನವ ಅವಳಿಗೆ ಮೊದಲೇ ತಿಳಿದಿದ್ದುದರಿಂದ ಅವಳು ಮನೆಗೆ ಸೇರಿಸಲಿಲ್ಲ, ರಾಜಶೇಖರನು ಭ್ರಾಂತನಾಗಿ ಏನುಮಾಡ ಬೇಕೆಂಬುದನ್ನು ತಿಳಿಯದೆ ಹುಚ್ಚನಂತೆ ಅಲೆಯಲಾರಂಭಿಸಿದನು. - ಸುಮಾರು ಎರಡುವಾರ ಅಲೆದು ಅನ್ನ ನೀರಿಲ್ಲದೆ ಬೇಸತ್ತನು. ದುಷ್ಟರ ಮನಸ್ಸಿನಲ್ಲಿ ಪದೇ ಪದೇ ನಾನಾವಿಧವಾದ ದುರಾಲೋಚನೆಗಳು ಹೊರಡುತ್ತಲೇ ಇರುವುವು, ಅವಕ್ಕೆ ತಕ್ಕಂತೆಯೇ ಅವರ ದುಷ್ಕಾರ್ಯ ಗಳೂ ಪ್ರತಿಕ್ಷಣದಲ್ಲಿ ಯ ಸಲಹೊಂದುವಂತೆ ಕಾಣುವುವು. ಹಾಗೆಯೇ ರಾಜಶೇಖರನಿಗೆ ಒಂದು ಆಲೋಚನೆಯು ಭಾಸವಾಯ್ತು ( ನಭೆಯನ್ನು ಕಂಡರೆ ಶರಾವತಿಗೆ ಆಗುವುದಿಲ್ಲ. ಶರಾವತಿಯು ಸಭೆಯನ್ನು ಪ್ರಯತ್ನ ಪುರಸ್ಸರವಾಗಿಯೂ ದ್ವೇಷಿಸುವಳು. ಅವಳ ಕೇಡನ್ನು ಹಾರೈಸುವಳು.. ಆದುದರಿಂದ ನಾನು ಅವಳ ಬಳಿಗೆ ಹೋಗಿ ನಭೆಯ ವಿಚಾರದಲ್ಲಿ ನನಗಿ ರುವ ದೃಡ ಸಂಕಲ್ಪವನ್ನು ತಿಳಿಸಿದರೆ, ಸಹಾಯ ಮಾಡದಿರಳು, ಆದುದರಿಂದ ಅಲ್ಲಿಗೆ ಹೋಗಿ ಕಾರ್ಯ ವನ್ನು ಸಾಧಿಸುವಂತೆ ಪ್ರಯತ್ನ ಪಡುವುದೇ ಮೇಲು, ” ಎಂದು ದೃಢಮಾಡಿಕೊಂಡು ಶಂಕರಪೇಟೆಗೆ ಹೊರಟನು. ಶಂಕರನಾಥ ಶರಾ ವತಿಯರಿಗೆ ರೋಗವೆಂಬ ವರ್ತಮಾನವೂ, ಚಿದಾನಂದ ರಮಾಮಣಿಯರು ಅಲ್ಲಿಗೆ ಬಂದಿರುವರೆಂಬ ಸಂಗತಿಯೂ ತಿಳಿದುಬಂದಿತು. ಕೂಡಲೇ ಅವನ ಮನಸ್ಸಿನಲ್ಲಿ ಆಲೋಚನಾತರಂಗಗಳು ಹೊರಡಲಾರಂ ಭವಾದುವು:- ( ದೇವರು ನನಗೆ ಸಹಾಯ ಮಾಡನೇ ? ಈಗ ಅಲ್ಲಿ ನಭೆಯೊಬ್ಬಳೇ ಇರುವಳು, ಹುಡುಗರು ಏನೂ ಮಾಡಲಾರರು. ನನ್ನ ಕಾರ್ಯವನ್ನು ಸಾಧಿಸಿಕೊಳ್ಳಲು ಇದಕ್ಕಿಂತ ಉತ್ತಮವಾದ ಸಮಯವು ದೊರಕದು, ಈಗಲೇ ಅಲ್ಲಿಗೆ ಹೋಗಿ ಸವಿಮಾತು ಗಳಿ೦ದಲೋ, ದುಡ್ಡಿ ನಿಂದಲೋ, ಬಲವದ್ದಂಧನದಿಂದಲೋ, ನಭೆಯನ್ನು ವಶಪಡಿಸಿಕೊಂಡು, ಅವಳೊಡನೆ ದೇಶಾಂತರ ಹೊರಡುವುದೇ ಸರ್ವೋತ್ತಮವಾದುದು.” ಎಂದು ನಿಶ್ಚಯಿಸಿ ಹೊರಟನು. ಸಂಧ್ಯಾಕಾಲದಲ್ಲಿ ನಭಾಮಣಿಯು ರಮಾನಂದ ಭಗವಾನಂದರೊಡನೆ ಉದ್ಯಾನದಲ್ಲಿ ಹೊತ್ತು ಕಳೆಯುತ್ತಿದ್ದಳು. ಶಂಕರಪೇಟೆಯಿಂದ ಪತ್ರವು ಬಂದು ತಲಪಿತು; ನೋಡಿದಳು.