ಪುಟ:ನಭಾ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ನಭಾ 103 ನಭಾ:- ಹೇಳುವುದೇನು? ಅಂದೇ ನನ್ನ ಇಷ್ಟ ವನ್ನು ಸ್ವಷ್ಟ ಪಡಿ ಸಿರುವೆನು. ರಾಜಶೇಖರ (ಹಠಮಾಡಿ ಕೆಡಬೇಡ. ಈ ಸಮಯವು ಎಂತಹ ದೆಂಬುದನ್ನು ನೋಡು, ಸಮ್ಮತಿಸದಿದ್ದರೆ ಮುಂದೇನಾಗುವುದೆಂಬುದನ್ನು ಆಲೋಚಿಸು. ತಪ್ಪಿಸಿಕೊಂಡು ಹೋಗುವುದಾದರೆ ಪ್ರಮಾದವು ತಪ್ಪದು. ಇದೋ, ನಾನು ಎಂದಿನಂತೆ ಇಂದು ಬರಿಯ ಕೈಯಲ್ಲಿ ಬಂದಿಲ್ಲ. ನೋಡು.” ಎಂದು ಹೇಳುತ್ತೆ ಒಳಗಿನ ಜೇಬಿನಲ್ಲಿದ್ದ ಪಿಸ್ತೂಲನ್ನು ತೆಗೆದು ತೋರಿಸಿದನು. ಸಭೆಗೆ ಹೆದರಿಕೆಯಾಯಿತು, ಆದರೂ ಅವಳು ಸಾಮಾನ್ಯಸ್ತ್ರೀಯಲ್ಲ; ದೃಢವಾಗಿ ನಿಂತು ಹೇಳಿದಳು:- 14 ಮೂರ್ಖ ! ನನಗೆ ತಪ್ಪಿಸಿಕೊಳ್ಳುವ ಇಷ್ಟವುಂಟಾದರೆ, ನೀನಾಗಲೀ, ನಿನ್ನ ಪಿಸ್ತೂಲಾಗಲೀ, ನಿನ್ನ ದರ್ಪ ಯುನುಡಿಗಳಾಗಲಿ ನಿಲ್ಲಿ ಸಲಾರವು. ಈಗ ನಾನು ಓಡಿಹೋಗುವ ಸಂದರ್ಭ ವಾದರೂ ಏನು? 1) ರಾಜ:- ಚೆನ್ನಾಗಿಯೇ ಹೇಳಿದೆ ಇಲ್ಲಿ ಯಜಮಾನರಾರೂ ಇಲ್ಲ. ಶಂಕರಪೇಟೆಯಿಂದ ಬರುವುದಕ್ಕೂ ವಿಳಂಬವಾಗುವುದು. ನೀನು ನನ್ನ ಮಾತನ್ನು ಕೇಳುವುದಾದರೆ, ಎಲ್ಲಿಯಾದರೂ ಸುಖವಾಗಿರಬಹುದು. ಅಥವಾ ಮತ್ತೆಲ್ಲಿಯಾದರೂ ಹೋಗಿ 'ಆನಂದದಿಂದ ಕಾಲವನ್ನು ಕಳೆಯ ಬಹುದು, ಏನು ಹೇಳುವೆ? ನಭಾ:-ಹೋ! ನಿಜ? ನಿನ್ನ ಆಲೋಚನೆಯು ಬಹಳ ಒಳ್ಳೆಯದು. ಆದರೆ, ನಾನು ಎಲ್ಲಿ ಗೂ ಬರಲಾಗುವುದಿಲ್ಲ, ಇಲ್ಲಿಯೇ ನಾವಿಬ್ಬರೂ ಇದ್ದು ಕಾರ್ಯವನ್ನು ಸಾಧಿಸಬಹುದು. ಹೇಗಾದರೂ, ರಾಜ:- ನೋಡು, ಪ್ರತಿಯಾಡುವೆ, ಜೋಕೆ! ನೀನು ನನ್ನ ಇಷ್ಟ ದಂತೆ ನಡೆಯದಿದ್ದರೆ, ಇಗೋ, ನೀನುಸಾಯುವೆ. ನಭಾ:- ನಾನು ಸಾಯಲು ಸಿದ್ದಳಾಗಿಯೇ ಇರುವೆನು, ನಿನ್ನ ಮನಬಂದಂತೆ ಮಾಡಬಹುದು, ಹುಟ್ಟಿದವರು ಸಾಯಲೇಬೇಕು. ಸರರ ಸುಖಕ್ಕಾಗಿ ಪ್ರಾಣತ್ಯಾಗಮಾಡುವುದೂ ಪುಣ್ಯಪ್ರದವಾದುದು, ಪತಿ