ಪುಟ:ನಭಾ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

104 ಸತೀಹಿತೈಷಿ ದೆಹ ಪಾತಕಕ್ಕಿಂತ ಅದು ಮೇಲೆಂದು ದೃಢವಾಗಿಯೂ ಹೇಳಬಲ್ಲೆ ನು; ಮಾಡು, ಆ ಕೆಲಸವನ್ನು ಮೊದಲು ಮಾಡು, ಆದರೆ ನೀನು ಮಾತ್ರ, ಇನ್ನೂ ಕೆಲವು ಕಾಲ ಜೀವಿಸಿ ಫಲಾನುಭವವಾಡುತ್ತಿರಬೇಕಾದೀತು? ರಾಜ:- ಏನು? ನಿನ್ನ ಸತೀತ್ವಕ್ಕೆ ಕುಂದು ತರದೆ, ಆ ಕೆಲಸವನ್ನು ಮಾಡುವೆನೆಂದು ತಿಳಿದಿರುವೆಯೋ? ಹಾಗೆ ಭಾವಿಸದಿರು, ಹೆಚ್ಚು. ವಾತಾಡಲು ಅವಕಾಶವಿಲ್ಲ. ಬೇಗಹೇಳು ಸವತಿಸದಿದ್ದರೆ ಬಲಾತ್ಕಾರ ದಿಂದ ನಿನ್ನ ಮಾನಹಾನಿಮಾಡಿ ಬಳಿಕ ನಿನ್ನನ್ನು ಕೊಂದು ನಾನೂ ಸಾಯುವೆನು. ಸಭೆಗೆ ಹೃದಯವು ತಲ್ಲಣಿಸಿತು. ಮುಂದೇನು ಮಾಡಬೇಕೆಂಬುದು ತೋರಲಿಲ್ಲ. ಬೀಸುವ ದೊಣ್ಣೆ ಏಟು ತಪ್ಪಿದರೆ ಸಾಸಿರವರ್ಷದ ಆಯು (ು ” ಎಂಬ ಗಾದೆಯನ್ನು ನೆನೆದು ಆಗಿನ ಆಸತ್ತನ್ನು ದಾಟಲು ಉಪಾ ಯವನ್ನು ಯೋಚಿಸಿ ನಡುಗುತ್ತ ಹೇಳಿದಳು:-((ರಾಜಶೇಖರ ಆಲೋ ಚಿಸಬೇಡ, ನಿನ್ನ ಕಾರವು ಈದಿನ ರಾತ್ರಿ ಕೈ ಕೊಡುವುದು, ನೀನು ಈ ದಿನ ಈ ಊರಿನಲ್ಲಿಯೇ ಇರು.” ರಾಜಶೇಖರನಿಗೆ ಆನಂದದಿಂದ ಹುಚ್ಚು ಹಿಡಿದಂತಾಯಿತು. ಅವನು ಹುಚ್ಚನಂತೆ 'ಈದಿನ ನನ್ನ ಸಂಕಲ್ಪವನ್ನು ಸಿದ್ಧಿಗೊಳಿಸುವಿಯೋ ? ಸರಿ; ಸರಿ.” ಎಂದು ಮೂರು ಬಾರಿ ಕೇಳಿ ಅವಳಿ೦ದ ಆಣೆಯನ್ನು ತೆಗೆದು ಕೊಂಡು ಅವಳ ಕೇಶಗುಚ್ಛವನ್ನು ಬಿಟ್ಟು ನಿಂತನು. ನಭೆ ಸಮಾಧಾನದಿಂದ ರಾಜಶೇಖರ ಹೊರಡು, ನಿನ್ನ ಕೆಲಸಗೆ. ಇನ್ನೆಲ್ಲ ತೀರಿಸಿಕೊಂಡು ರಾತ್ರಿ ಘಂಟೆಯ ವೇಳೆಗೆ ಬಾ! ನಾನು ಬೀದಿ ಯ ಬಾಗಿಲ ಕಿರುಮನೆಯಲ್ಲಿಯೇ ಇರುವೆನು ಆಮೇಲೆ ನಾವೆಲ್ಲಾದರೂ ಹೊರಟುಹೋಗೋಣ” ಎಂದು ಹೇಳಿದಳು. ಅವಳ ಆ ಮುಖಭಾವವನ್ನು ನೋಡಿ ಭ್ರಾಂತನಾದ ರಾಜಶೇಖರನು ಅವಳ ಮಾತೆಲ್ಲವೂ ನಿಜವೆಂದೇ ನಂಬಿ ಆನಂದದಿಂದ ಅಲ್ಲಿಂದಾಚೆಗೆ ಹೊರಟುಹೋದನು. « ಚಿಂತೆಗೂ ಚಿತೆ'ಗೂ ಸ್ವಲ್ಪವೇ ವ್ಯತ್ಯಾಸವಾದರೂ ಅವೆರಡೂ