ಪುಟ:ನಭಾ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭರಿ 105 ಮಾಡುವಕಾರವು ಪರಸ್ಪರ ಸಂಬಂಧವನ್ನು ದೆಂದು ಹಿರಿಯರಾಡುವ ಮಾ ತಂದಿಗೂ ಸುಳ್ಳಾಗದು. ಚಿತೆಯು ಮೃತನಾದವನ ಜಡದೇಹವನ್ನು ಸುಡುವುದಾದರೆ ಚಿಂತೆಯು ಜೀವವಿರುವರನ್ನೇ ಸುಡುವ ಚಿಂತೆಯಾಗಿರುವು ದು, ಚಿತಯು ದೇಹದ ಮೇಲ್ಯಾಗವನ್ನೆಲ್ಲ ದಹಿಸಿ ಬೂದಿಮಾಡಿ ಅನಂ ತರ ಹೃದಯವನ್ನು ಸುಡುವುದಾದರೆ, ಚಿ೦ತೆಯು ಹೃದಯದಿಂದಲೇ ಮನುಷ್ಯನನ್ನು ಸುಡಲಾರಂಭಿಸುವುದು, ಹೃದಯಮಧ್ಯದಲ್ಲಿ ಆರಂಭ ವಾಗಿ ದೇಹವಾದ್ಯಂತವನ್ನೂ ಅಂತರಂಗದಲ್ಲಿಯೇ ಸುಡುತ್ಯ, ಬಾಯಿ ಮೂಗುಗಳಿಂದ ನಿಟ್ಟುಸಿರೆಂಬ ಹೊಗೆಯನ್ನು ಹೊರಡಿಸುತ್ತೆ ಸುಡುವುದು. ಮೊದಲು ಇದು ವಿದಳನ್ನು ಕಾಯಿಸಿ ಕರಗಿಸಿಬಿಡುವುದು; ರಕ್ತವನ್ನು ಶೋಷಿಸುವುದು, ಅನಂತರ ಆವಿಯಾಗಿ ಅದನ್ನು ಹಾರಿಸುವುದು, ಹಾ! ಚಿಂತೆ!! ನಿನ್ನ ಪ್ರತಾಪವೂ ಅತಿಯಾದುದೇ! ನಭೆಗೆ ಚಿ೦ತೆಯು ಅತಿಯಾಯಿತ್ತು, ಅವಳೇನುಮಾಡಬೇಕೆಂಬು ದನ್ನು ತಿಳಿದು ನಿರ್ಧರಿಸಲು ಶಕ್ತಳಾಗಲಿಲ್ಲ. ಮನೆಗೆ ಹೋದಳು. ಆಳು ಗಳಲ್ಲಿ ಒಬ್ಬಿಬ್ಬರು ಹೊರತು ಉಳಿದವರೆಲ್ಲರೂ ಹೊರಟುಹೋಗಿದ್ದರು; ಇದ್ದವರೂ ಅವರ ಕೆಲಸದಲ್ಲಿ ಆಸಕ್ತರಾಗಿದ್ದರು. ನಭೆಗೆ ವಿಚಾರಾಧಿಕ್ಯ ದಿ೦ದ ಆಯಾಸವು ಹೆಚ್ಚಾಗಿದ್ದಿತು, ಜಾಗ್ರತೆಯಾಗಿ ಸಹೋದರರಿಗೆ ಊಟ ಮಾಡಿಸಿ ಅವರನ್ನು ಸಂತೈಸಿ ಮಲಗಿಕೊಳ್ಳುವಂತೆ ಹೇಳಿದಳು, ಬಾಗಿಲುಗ ಳನ್ನು ಹಾಕಿ ದೇವರಮುಂದೆ ಕುಳಿತು ಪ್ರಾರ್ಥಿಸಲಾರಂಭಿಸಿದಳು:- ( ಸ್ವಾಮಿ ? ದಯಾಮಯ! ಅನಾಥನಾಥ!! ನಾನು ಅನಾಥಳಾಗಿ ಅನ್ಯ ಮಾರ್ಗವನ್ನು ತಿಳಿಯದವಳಾಗಿರುವೆನು, ಮಾನಾವಮಾನಗಳನ್ನು ಸಮಾ ನವಾಗಿ ನೋಡುವ ಶಕ್ತಿಯನ್ನು ನೀನು ಕೊಟ್ಟಿದ್ದರೂ, ಸತೀತ್ವ ರಕ್ಷಣೆಗೆ ಬೇಕಾದ ಸಹಾಯಗಳನ್ನೊದಗಿಸಿದ್ದರೂ, ಇಂತಹ ಕಠೋರಸಮಯ ದಲ್ಲಿ ಏನುಮಾಡಬೇಕೆಂಬ ಬುದ್ದಿಯನ್ನು ಕೊಡಲಿಲ್ಲವು, ಆತ್ಮಹತ್ಯೆ ಪಾಪಪ್ರದವಾದುದೆಂದು ಹಿರಿಯರಾಡುವರು. ಅದಕ್ಕೆ ಸತ್ಯಾಜ್ಯ ಪ್ರತಿಬಂಧಕವಾಗಿರುವುದು, ಸ್ವಾಮಿ? ಜಗನ್ನಾಥ!! ಈಗೇನು ಮಾಡಲಿ? ಇಹಪರ ಸಾಧನಕ್ಕೆ ಬೇಕಾದ ಸತೀತ್ವವು ಭಂಗಹೊಂದಿದಮೇಲೆ ನಾರಿಯು ಇದ್ದರೇನು? ಸತ್ತರೇನು? ದಯಾಮಯ? ಕಾಪಾಡು! ಕಾಪಾಡು!!??