ಪುಟ:ನಭಾ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

106 ಸತೀಹಿತೈಷಿಣೀ ಗಡಿಯಾರವ ಎಂಟು ಘಂಟೆಯನ್ನು ಹೊಡೆಯಿತು. ಸಭೆಯ ಹೃದಯದಲ್ಲಿ ಯ ಢಣಢಣ” ವೆಂದು ಏನೋ ಹೊಡೆಯಲಾರಂಭವಾ ಯು, ದಿಕ್ಕುತೋರದು, ಆದರೂ ಆಲೋಚಿದಳು:- (' ಈಗ ಏನು ಮಾಡಲಿ? ಬ್ರಹ್ಮನು ಹೆಂಗಸಿಗೆ ರೂಪವೆಂಬ ವಸ್ತುವೊಂದನ್ನೇಕೆ ಇಟ್ಟನು? ರೂಪಿನಿಂದ ಮೋಹವ ಹುಟ್ಟುವುದು, ಮೋಹದಿಂದ ಕಾಮಕ್ರೋಧಾ ದಿಗಳು ಹೆಚ್ಚಿ ಪ್ರಪಂಚದಲ್ಲಿ ಅನರ್ಥ ಗಳನ್ನು ಮಾಡುತಿರುವುವಲ್ಲವೆ? ಈಗ ಆ ನೀಚನು ಬಾರದಿರನು, ಬಂದರೇನುಮಾಡ? ಬಾಗಿಲುಗಳನ್ನೇನೋ ಹಾಕಿರುವೆನು; ಆದರೂ ಅವನು ಬಲವಂತದಿಂದ ಒಳಗೆ ಪ್ರವೇಶಿಸಿ ಮಾನ ಹಾನಿಮಾಡಲೆಳಸಿದರೆ ಗತಿಯೇನು? ಮತ್ತಾರಿಗಾದರೂ ತಿಳಿಸಿ ಆಪದದಿಂದ ಪಾರಾಗುವೆನೆಂದರೆ ಅವನು ಅಪಾಯಕ್ಕೊಳಗಾಗುವನು, ಅಂತದರಿಂದ ಇಲ್ಲಿ ಚಿಕ್ಕಮ್ಮನಿಗೂ ಅಲ್ಲಿ ಅವನ ತಾಯಿಗೂ ದುಃಖವಾಗುವುದು. ಹಾಗೆ ಮಾಡಲು ಇಷ್ಟವಿಲ್ಲ. ನಾನು ಗೃಹ, ಸ್ವಜನ, ಸುಖಸಾಧನಗಳನ್ನು ತೊರೆದು ಕಷ್ಟ ಪಟ್ಟರೂ ನನ್ನಿಂದ ಇತರರಿಗೆ ದುಃಖವುಂಟಾಗುವಂತೆ ಮಾಡಲೊಲ್ಲೆನು, ಎಂದು ಮತ್ತೆ ಚಿಂತಿಸಿ 'ಹೆಂಗಸರಿಗೆ ರೂಪವೆಂಬ ದೊ೦ದು ಇರದಿದ್ದರೆ ಬ್ರಹ್ಮನನ್ನು ನಿಷ್ಪಕ್ಷಪಾತಿಯೆಂದೆನ್ನ ಬಹುದಾಗಿತ್ತು. ಹಾ ! ದೇವ! ಆ ನೀತನು ಈಗ ಬಂದು ಬಲವಂತದಿಂದ ಗೃಹವನ್ನು ಪ್ರವೇಶಿಸಿದರೆ, ನಾನೇನು ಮಾಡಲಿ? ನನಗೆ ಪಲಾಯನವಲ್ಲದೆ ಬೇರೆ ಗತಿ ಯಿಲ್ಲ. ಅವನು ಇಲ್ಲಿಗೆ ಹಣಕಾಸುಗಳಿಗಾಗಿ ಬರುವುದಿಲ್ಲ. ನಾನು ಇಲ್ಲದಿದ್ದರೆ, ಅವನು ಉಳಿದುದನ್ನು ಮುಟ್ಟದೆಯೇ ಹೋಗುವನು. ನಾನು ಪಲಾಯನಮಾಡಿದರೂ ಇಲ್ಲಿರುವರಿಗೆ ತಿಳಿಯಬೇಕು. ಆದುದರಿಂದ ಒಂದು ಕಾಗದವನ್ನು ರಾಜಶೇಖರನ ಹೆಸರಿಗೆ ಬರೆದಿಟ್ಟು ಹೋಗುವೆನು.” ಹೀಗೆ ಯೋಚಿಸಿ, ಆಲೋ ಚನಾಂತ್ಯದಲ್ಲಿ ಪತ್ರವನ್ನು ಬರೆದಳು. CC ರಾಜಶೇಖರ! ನನ್ನ ಮಾತಿಗೆ ನೀನು ಮರುಳಾಗುವೆಯೆಂಬ ನಂಬುಗೆಯಿಂದಲೇ ನಾನು ಸುಳ್ಳು ಹೇಳಿ ನಿನ್ನನ್ನು ಮೋಸಗೊಳಿಸಿದೆನು, ನೀನು ಕಾಮುಕ; ಮತ್ತು ಕಳ್ಳ, ಆದುದರಿಂದ ನಿನ್ನಲ್ಲಿ ನಾನು ಅಪರಾಧವಾಡಿದಂತಾಗಲಿಲ್ಲ.