ಪುಟ:ನಭಾ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 107 ನಿನ್ನಲ್ಲಿ ಸುಳ್ಳಾಡಿದರೆ ಪಾಪಸಂಘಟನೆಯಾಗುವುದಿಲ್ಲ. ಹುಚ್ಚ! ನೀನು ಮನಸ್ಸಿನಲ್ಲಿಯೇ ನಾನಾವಿಧವಾದ ದುರಾಲೋಚನೆಗಳನ್ನು ಮಾಡುತಿರ ಬಹುದು. ಇ೦ತಹದಲ್ಲ; ಇದಕ್ಕಿಂತ ಬಲವತ್ತರವಾದ, ಕಠೋರವಾದ, ಬಿಕ್ಕಟ್ಟಾದ ಸಂದರ್ಭವು ಒದಗಿದರೂ ನಾನು ಸತೀತ್ವವನ್ನು ಮಾತ್ರ ಕಳೆದು ಕೊಳ್ಳು ವಳಲ್ಲವೆಂಬುದನ್ನು ಚೆನ್ನಾಗಿ ತಿಳಿ. ನಾನು ಇಂದು ನಿನಗಾಗಿ ಪಲಾ ಯನಮಾಡಿರುತ್ತೇನೆ. ನಾನೆ, ಹೇಗೆ, ಇರುತ್ತೇನೆಂಬ ಸಂಗತಿಯು ಕೊಡ ನಿನಗೆ ತಿಳಿಯದು. ಆದರೆ, ರಾಜಶೇಖರ : ನಿನ್ನ ವಿಷಯವಾಗಿ ನಾನು ಅತ್ಯಂತ ಚಿಂತಿಸುತ್ತೇನೆ, ಕುಲಕ್ಕೆಲ್ಲಾ ಏಕಮಾತ್ರ ಆಲಂಬಪ್ರಾಯನಾಗಿ ರುವ ನೀನು ದುರಾಲೆ ಚನೆ೦ದ ಪಾತಾಳಕ್ಕೆ ಬೀಳಬೇಕೆಂದಿರುವೆ! ಇನ್ನು ಮುಂದಾದರೂ ಇಂತಹ ದುರಾಲೋಚನೆಗಳನ್ನು ದೂರಮಾಡಿ, ಯೋಗ್ಯಳಾದ ಕನ್ನೆಯನ್ನು ವಿವಾಹ ಮಾಡಿಕೊ೦ಡು ಸುಖವಾಗಿ ಬಾಳು! ಆಗಮಾತ್ರ ಸೀನು ಸುಟಿಯಾಗುವೆ. ದೇವರ ಕೃಪೆಯಿಂದ ಹಾಗಾದರೆ, ಆಗ ನಾನೊಮ್ಮೆ ನಿನ್ನನ್ನು ನೋಡಬೇಕೆಂಬ ಅಪೇಕ್ಷೆಯು ಮಾತ್ರ ಬಲವ ತರವಾಗಿದೆ. ನಿನ್ನ ವಿಷಯದಲ್ಲಿ, ನನಗೊ೦ದೆಡೆ ಮಹತ್ತರ ರೋಷವೂ ಮತ್ತೊಂದೆದೆ ಮಹಾ ಸಂಕಟವೂ ಉಂಟಾಗಿದೆ. ನಿನಗೆ ಕೆಡಕನ್ನು ಮಾಡಲು ನಾನೆಂದೂ ಅಪೇಕ್ಷಿಸೆನು. ಹಾಗೆ ನಾನು ಯೋಚಿಸಿದ್ದರೆ ಕ್ಷಣದಲ್ಲೇ ನಿನ್ನನ್ನು ತೋಟದಿಂದ ಹಾಗೆಯೇ ಹಿಡಿದ, ಪೋಲೀಸರ ವಶ ಪಡಿಸುತ್ತಿದ್ದೆನು. ನನಗದು ಇಷ್ಟ ಇಲ್ಲ, ಅಣ್ಣ! ನೀನಿನ್ನು ಪಾಪಿಯಾಗಬೇಡ. ನಾನಿಷ್ಟು ಸ್ವಾತಂತ್ರ್ಯವನ್ನು ವಹಿಸಿದುದಕ್ಕೆ ಮತ್ತೆ ಮತ್ತೆ ಕ್ಷಮೆ ಬೇಡುವೆನು. ರಾಜಶೇಖರ ಬುದ್ದಿ ಕಲಿತುಬಾಳು! ನಿನ್ನ ನಾಶಕ್ಕೆ ನೀನೇ ಕಾರಣನಾಗ ಬೇಡ! ಇ೦ತು ನಿನ್ನ ಹಿತಾ ಕಾಂಕ್ಷಿಣಿ ನಭೆ » ಪತ್ರವನ್ನು ಮೇಜಿನಮೇಲೆ ಹಾಗೆಯೇ ಇಟ್ಟು ಕುಳಿತಳು, ಬೀದಿ ಯ ಬಾಗಿಲು ಜಡವಸ್ತುವಾದರೂ ನೀಚನ ಆಗಮನವನ್ನು ಸೂಚಿಸಿತು. ನಭೆಗೆ ಹೆದರಿಕೆಯಾಗಲಿಲ್ಲ; ಹೃದಯದಲ್ಲಿ ಚಂಚಲವಿಲ್ಲ, ಕ್ಷಣಾರ್ಧದಲ್ಲಿ