ಪುಟ:ನಭಾ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

109 ಸತೀಹಿತೈಷಿಣೀ ಬಾಗಿಲು ತೆರೆದು ಪ್ರವೇಶಕ್ಕೆ ಅವಕಾಶವಾಗುವದೆಂಬ ಸೂಚನೆಯು ತಿಳಿ ದುಬಂದಿತು, ಹಿತ್ತಿಲಬಾಗಿಲನ್ನು ತೆಗೆದುಕೊಂಡು ಪಲಾಯನಮಾಡಿಯೇ ಬಿಟ್ಟಳು. ರಾಜಶೇಖರನು ಮನೆಯೊಳಕ್ಕೆ ಬರಲು ಸಾಹಸಪಟ್ಟನು, ಕಾವಲು ಗಾರರು ತಡೆದರು. ಅವನು ಅವರೊಡನೆ ವಾಕ್ಕಲಹಕ್ಕೆ ತೊಡಗಿದನು. ಅಷ್ಟರಲ್ಲಿಯೇ ಬೀದಿಯ ಬಾಗಿಲಿನಲ್ಲಿ ನಡೆಯುತ್ತಿದ್ದ ಕೋಲಾಹಲವು ನಿದ್ರಿಸುತ್ತಿದ್ದ ರಮಾನಂದ ಭಗವಾನಂದರಿಗೂ ತಿಳಿದುಬಂದಿತು. ಎದ್ದು ನೋಡಿದರು; ದೀಪವು ಉರಿಯುತಿದೆ; ಮೇಜಿನಮೇಲೆ ಪತ್ರವಿದೆ: ನಭೆಯು ಮಾತ್ರ ಇಲ್ಲ. ಗಾಬರಿಗೊಂಡಿದ್ದು ನೋಡಿದರು, ಪತ್ರವನ್ನೋದಿದರು. ರಾಜಶೇಖರನು ಅಷ್ಟರಲ್ಲಿ ಒಳಗೆಬಂದು ಮನೆಯಲ್ಲೆಲ್ಲಾ ಅರಸಿದನು. ಭಗವಾನಂದನು ಪೋಲಿಸರನ್ನು ಕರೆತಂದು ರಾಜಶೇಖರನನ್ನು ಅವರ ವಶಪಡಿಸಿದನು. ತಂದೆಗೆ ವರ್ತಮಾನವನ್ನು ತಂತಿಯಮೂಲಕ ತಿಳಿಸಿದನು. ರಾಜಶೇಖರನು ಶೋಕರೋಪಾದಿಗಳಿಂದ ನೊಂದುಬೆಂದನು, ಮತ್ತೇನು ಮಾಡಬಲ್ಲನು ? ( ಈಗಿನ್ನೇನುಮಾಡಬೇಕು ? ” ನಭೆಯಲ್ಲಿಹೋದಳು ? ಎಂಬಿವೇ ಅವನಾ ಅಪ್ಯಾಕ್ಷರ ಸಪ್ತಾಕ್ಷರ ಮಂತ್ರಗಳಾಗಿದ್ದವು. ಸಹೃದಯರೆ ! ಸಭೆಯಲ್ಲಿ ಹೋದಳು? ರಾಜಶೇಖರನಿಗೇನಾಯಿತು? ಎಂಬಿವನ್ನು ತಿಳಿಯಲು ಕುತೂಹಲಿಗಳಾಗಿರುವಿರೇನು ? ಕ್ಷಮೆಯಿರಲಿ! ಅವು ದು ಎಲ್ಲಿದ್ದರೂ ಹೇಗಿರಬೇಕೋ ಹಾಗೆಯೇ ಇರುವುದಲ್ಲವೆ? ಒಳ್ಳೆಯದು ಒಳ್ಳೆಯದೇ ; ಕೆಟ್ಟು ದು ಕೆಟ್ಟ ದೇ, ಈಗ ನಾವೇನು ಮಾಡುವ? ನಭಾ ನೈಷಣೆಗಾಗಿ ಹೋಗಿರುವವರು ಇನ್ನೂ ಬಂದಿಲ್ಲ; ವಿರಾಗಿಣಿ' ನಾಮಾಂ ಕಿತ ಗ್ರಂಥದಲ್ಲಿ ಅವಳ ವಿಚಾರವನ್ನು ನಾವು ತಿಳಿಸಬೇಕು, ಆವರೆಗೂ ಪಾಠಕರು ವಿರಾಮವೀಯಬೇಕು, ಪ್ರಿಯಸಹೋದರಿಯರೆ! ತಾವಾ ರಾದ ರೂ ನಭೆಯ ವಿಷಯದಲ್ಲಿ ಅನೇಕ ವಿಕಲ್ಪಾರ್ಥ ಗಳನ್ನು ಕಲ್ಪಿಸುವುದಾದರೆ, ಅದು ನಮ್ಮ ಆಥವಾ ನಮ್ಮ ಲೇಖನಿಯ ದೊಷವಾಗಲಾರದು. ನಭೆ ಯು ನನ್ನ ಅಭಾಗಿನೀಸೋದರಿಯರ ಆದರ್ಶಳಾದರೆ, ಭಾರತಮಾತೆಗೆ ಈಗಿನ ಕಷ್ಟವಿರದು, ಇನ್ನು ನಮ್ಮ ಭಾತ್ಯ ಬಂಧುಗಳು ಮಾತ್ರ ಬಗೆಬ ಗೆಯಾಗಿ ಟೀಕಿಸುವವರಾಗಿರಬಹುದು, ಅದು ಅವರ ಸ್ವಭಾವ! ಸದ್ಯಕ್ಕೆ