ಪುಟ:ನಭಾ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ili ಸನಾತನ ಧರ್ಮ ಭಿಮಾನಿಗಳೆಂದು ಹೇಳಿಕೊಳ್ಳುವ ಹಲವರು, 'ನಸೀ ಸ್ವಾತಂತ್ರ್ಯ ಮರ್ಹತಿ" ಎ೦ಬ ಮನುವಿನ ವಾಕ್ಯವನ್ನು ಮುಂದೆ ಮಾಡಿ ಸ್ತ್ರೀ ಯರನ್ನು ಆಮರಣಾಂತ ಪರವಶತೆಯ ಸಂಕದಲ್ಲಿ ನೂಕಲು ಯತ್ನಿಸುತ್ತಿದ್ದರೆ, ವ್ಯಕ್ತಿ ಸ್ವಾತಂತ್ರ್ಯದ ಪುರಸ್ಕರ್ತೃಗಳಾದ ಹಲವರು ಸ್ತ್ರೀಯರಿಗೆ ಸ್ವಾತಂತ್ರ್ಯ ಸಾಮ್ರಾಜ್ಯವನ್ನು ಸಂಪಾದಿಸಿಕೊಡಲು ಉದ್ಯುಕ್ತರಾಗಿರುವರು, (ಪುರುಷ ರಂತೆ ಸ್ತ್ರೀಯರಿಗೆ ಶಿಕ್ಷಣವನ್ನು ಕೊಟ್ಟರೆ ಅವರ ಆಚಾರವಿಚಾರಗಳು ಭ್ರಷ್ಟ ವಾಗಿ ಅವರು ಸೈರವೃತ್ತಿಯವರಾಗುವರೆಂದು* ಹಲವರು ಪ್ರತಿವಾದಿಸು ಆದ್ದರೆ, .'ಸ್ತ್ರೀಯರ ಶಿಕ್ಷಣದ ಅಭಾವಕ್ಕಾಗಿಯೇ ಕುಟುಂಬಸುಖವು ನಷ್ಟ ವಾಗಿರುವುದಲ್ಲದೆ ಅರ್ಧಸಂಖ್ಯಾಕರಾದ ಸ್ತ್ರೀಯರ ಅಜ್ಞಾನಮಲಕವಾಗಿ ರಾಷ್ಟ್ರದ ಪ್ರಗತಿಯ ಹೆಜ್ಜೆ ಮುಂದರಿಸದಂತಾಗಿರುವುದೆಂದು” ಹಲವರು ಕನಿ ಕರಸಡುತ್ತಲಿರುವರು. ಸಾರಾಂಶವೇನಂದರೆ, ಸ್ತ್ರೀಯರ ಉನ್ನತಿ ಅವನತಿಗಳ ಪ್ರತಿಯೊಂದು ವಿಚಾರದಲ್ಲಿಯ ಪುರುಷ ಲೇಖಕರಲ್ಲಿ ಈ ರೀತಿಯಾಗಿ ಭಿನ್ನಮತವ ಕೆಂಡುಬರುತ್ತಲಿರುವುದು, ಈ ಬಗೆಯ ಭಿನ್ನ ಮತವು ಪುರುಷವರ್ಗದವ ರಲ್ಲಿ ಕಂಡುಬರುವುದಕ್ಕೆ ಸ್ತ್ರೀಯರ ಬುದ್ದಿ, ಮನಸ್ಸು, ಅಂತಃ ಕರಣಗಳ ಪ್ರಾಕೃತಿಕ ರಚನೆ ಸ್ವಭಾವಗಳ ನಿಷಯ ಕವಾಗಿಯೂ ಸಾ$ರಾರು ವರ್ಷ ಗಳಿಂದ ಅನುವಂಶಿಕವಾಗಿ ಅವರ ಮನಸ್ಸಿನಮೇಲೆ ಉಂಟಾಗಿರುವ ಸಂಸ್ಕಾರ ವಿಷಯಕವಾಗಿಯೂ ಪುರುಷರಿಗಿರುವ ಅಪೂರ್ಣ ವಾದ ಪರಿಚಯವೇ ಕಾರಣವಾಗಿರುವುದೆಂಬುದು ನಮ್ಮ ಮತವಾಗಿರುವುದು. ಸ್ವಲ್ಪದರಲ್ಲಿ ಹೇಳುವುದೆಂದರೆ, ಆರ್ಯ ಸ್ತ್ರೀಯರ ಸ್ವಾಭಾವಿಕವಾದ ಧೈಯವ ಆವುದಾಗಿರಬೇಕು, ಅವರ ಬೌದ್ಧಿಕ-ಮಾನಸಿಕ-ಆತ್ಮಿಕ ಉನ್ನ ತಿಯಾಗಬೇಕಾದರೆ ಅವರಿಗೆ ಆವಬಗೆಯ ಶಿಕ್ಷಣದ ಅವಶ್ಯಕತೆಯಿರುವುದು ಈಗಿನ ಸಮಾಜಸ್ಥಿತಿಯಲ್ಲಿ ಅವರ ಪ್ರಗತಿಗೆ ವಿರೋಧಕರವಾಗಿರುವ ಆಚಾರ ವಿಚಾರಗಳಾವುವು ಮತ್ತು ಅವುಗಳನ್ನು ಆವ ಬಗೆಯಾಗಿ ಸುಧಾರಿಸಬೇಕು. ಈ ಮುಂತಾದ ವಿಷಯಗಳನ್ನು ತರ್ಕಿಸುವ ಅಧಿಕಾರವು ವಿಚಾರಪರರಾದ ಸ್ತ್ರೀಯರಿಗೆ ವಿಶೇಷವಾಗಿರುವುದು, ಅಂಥ ವಿಚಾರಶಕ್ತಿಯು ನಮ್ಮಲ್ಲಿಲ್ಲ ದಿದ್ದರೂ ಪ್ರಚಲಿತ ಸ್ಥಿತಿಯಲ್ಲಿರುವ ನಮ್ಮ ಸಮಾಜದ ಸುಸ್ಥಿತಿ ದುಸ್ಥಿತಿಗಳ