ಪುಟ:ನಭಾ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

li ಶ್ರೀ | ' ಲಕ್ಷ್ಮೀನೃಸಿಂಹ ಪ್ರಸನ್ನ ! ನಭಾ. -ಇಸಿ ಸರ್ವಸ್ಯ ದೈವಸ್ಯ ಪತಿಃ ಪರಸ್ತಾತ್ | ಪರೋsನತ೦ಸಃ ಪತಿರೇವನಾಯ್ಯಾತಿ 11 ಸರ್ವತ್ರ ಪೂಜ್ಯಃ ಪತಿರೇವಸತ್ಯಾತಿ 1 - ಸತೀತ್ವಮೇಕಂ ಮಹದಂಗನಾನಾಂ || < ೧೫%. ಪ್ರಥಮ ಪರಿ ಚ್ಛೆ ದ. ( ಮೊ ಹ ಶೃ೦೩ ಲೆ) ಜಗದುಜೀವನನಾದ ದಿನನಾಥನು ನಿತ್ಯದಂತೆ ಈ ದಿನವೂ ವಿಶಾಲ ವಾದ ಗಗನಾಂಗಣದಲ್ಲಿ ತಲೆದೋರಿದನು. ಆದರೆ ಇಂದು, ದುರಾಗ್ರಹ ಚಿತ್ತರೂ ಕರ್ತವ್ಯವಿಮುಖರೂ ಆದ ಪಾಪಿಗಳಂತಹ ಕಾರ್ಮುಗಿಲು ಭಗವಂತನಾದ ಸೂರ್ಯ ನಾರಾಯಣನ ಪ್ರಭೆಯನ್ನು ಭಂಗಮಾಡುವ ಉದ್ದೇಶದಿಂದ ಸುತ್ತಲೂ ಆವರಿಸಿಕೊಂಡು ಅಡ್ಡಸುತ್ತಿದ್ದಿತು. ಆದರೂ ನಿಂದಿಸುವವರು ನಿಂದಿಸಲಿ, ಹೊಗಳುವವರು ಹೊಗಳಲಿ; ಲಕ್ಷ್ಮಿ ಕೈವಶವಾಗಲಿ ಅಥವಾ ಬಿಟ್ಟು ಹೋಗಲಿ, ಇಂದೇ ಮೃತ್ಯ ಸನ್ನಿ ಹಿತವಾದರೂ-ಆಗಲಿ, ಹಿಡಿದ ನ್ಯಾಯವಾದ ಕಾರ್ಯವನ್ನು ಬಿಡದೆ, ಈ ಜನ್ಮದಲ್ಲಿ ಸಾಧ್ಯವಾಗದಿದ್ದರೆ ಮುಂದಿನ ಜನ್ಮದಲ್ಲಿಯಾದರೂ ನಾಧಿಸಿಯೇ ಸಾಧಿಸುವೆವೆಂಬ ಧೀರರಿಗೆಲ್ಲ ಮಾರ್ಗದರ್ಶಕನಾದ ಸಹಸ್ರಕಿರಣನು, ಪ್ರಾತ್ಯವಾಗುತ್ತಿದ್ದ ವಿಘ್ನ ಪರಂಪರೆಯನ್ನು ಧೈಯ್ಯ