ಪುಟ:ನಭಾ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಭರಿ. 5 ಸತ್ತವರಿಗೆ ಅಳಬೇಕೆ? ನಿನ್ನ ಮುಂದಿನಮಾರ್ಗವನ್ನು ಸುಗಮಮಾಡಿಕೊ; ಈ ಮೋಹಪಾಶವನ್ನು ಇಲ್ಲಿಯೇ ಖಂಡಿಸಿಬಿಡು, ದೇವರನ್ನು ನೆನೆ. ರೋಗಿ:- ಕಣಗಳನ್ನು ಚೆನ್ನಾಗಿ ಬಿಟ್ಟು ಮಗಳ ಮುಖವನ್ನೆ ನೋಡುತ್ತ-'ನಾ, ನಿನ್ನ ಜ್ಞಾನ-ಭಕ್ತಿ-ವೈರಾಗ್ಯಗಳು ನನಗಿಲ್ಲವಲ್ಲಾ ! ನೀನು ನನಗೆ ಬುದ್ದಿ ಹೇಳುವಷ್ಟು ಶಕ್ತಳಾದುದು ಸುಕೃತವಲ್ಲದೆ ಬೇರಿಲ್ಲ. ನಭಾ:- ಅಮ್ಮಾ! ಇದೆಲ್ಲಾ ನಿನ್ನ ಆಶೀರ್ವಾದದಿಂದ ಬಂದುದು. ರೋಗಿ:-ನಭಾ! ಈಗ ನೆನಪಿಗೆ ಬಂತು, ಮೊನ್ನೆ ನಿನ್ನ ಗಂಡನಿಂದ ಬಂದ ಕಾಗದದ ವಿಚಾರವೇನು? ನಭಾ:-ಆಗಲೇ ಹೇಳಿದೆನಲ್ಲ? ರೋಗಿ:-ಚೆನ್ನಾಗಿ ನೆನಪಿಲ್ಲ, ಇನ್ನೊಂದು ಸಾರೆ ಹೇಳು. ನಭಾ:-ಅವರಿಗೆ ಅಯ್ಯ ತ್ತು ರೂಪಾಯಿ ಸಂಬಳವಾಯಿತಂತೆ! ರೋಗಿ:- ದೇವರು ಎಷ್ಟು ಕೊಟ್ಟರೆ, ಅಷ್ಟರಲ್ಲಿಯೇ ತೃಪ್ತರಾಗ ಬೇಕು, ಹೇಗೂ ನಿನ್ನ ಸಂಸಾರವು ನೆಟ್ಟಗಿದ್ದರೆ ನನಗೆ ಅದೇ ಬ್ರಹ್ಮಾಂಡ ನಭಾ:- ಎಲ್ಲವೂ ಭಗವದಿಚ್ಛೆ. ರೋಗಿ:- ಸಭಾ, ನಿನ್ನನ್ನು ಕರೆದುಕೊಂಡು ಹೋಗಲು ಅನ ರಾವಾಗ ಬರುತ್ತಾರಂತೆ? ನಭಾ:- ಜಾಗ್ರತೆಯಾಗಿಯೇ ಬಂದು ನಮ್ಮಿಬ್ಬರನ್ನೂ ಕರೆದು ಕೊಂಡು ಹೋಗುವರಂತೆ ! ಈ ವಿಷಯವನ್ನು ನಿನಗೆ ತಿಳಿಸೆಂದೂ ಬರೆ ದಿರುವರು ರೋಗಿ:-(ನಭೆಯ ಕೈಹಿಡಿದು) 'ಮಗು, ಆ ಮಹರಾಯ ಬಂದರೆ ಆತನ ವಶಕ್ಕೆ ನಿನ್ನನ್ನು ಒಪ್ಪಿಸಿ ನಾನು ಸುಖವಾಗಿ ಪ್ರಾಣಬಿಡುವೆನು.” ಎಂದಳು. ನಭೆ:- ಅಮ್ಮಾ! ದೇವರಿದ್ದಾನೆ, ಚಿಂತಿಸಬೇಡ, ರೋಗಿ:-ಮಗು, ನಿನ್ನಿನಿಂದಲೂ ನನಗಾಗಿ ಉಪವಾಸವಿದ್ದೀಯೆ ; ಈಗಲಾದರೂ ಒಳಗೆ ಹೋಗಿ ಅಡಿಗೆ ಮಾಡು, ಊಟಮಾಡುವೆಯಂತೆ. ನಭಾ:- ಅಮ್ಮ, ಮತ್ತೇನು ಮಾಡಬೇಕಾಗಿತ್ತು ? ಜ್ಞಾನವಿಲ್ಲದೆ ಸಾಯುವ ಸ್ಥಿತಿಯಲ್ಲಿ ಮಲಗಿದ್ದ ನಿನ್ನನ್ನು ಬಿಟ್ಟು ನಾನು ಹೇಗೆ ಅಡಿಗೆ