ಪುಟ:ನಭಾ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೇ. ಮಾಡಬಹುದಾಗಿತ್ತು? ಊಟವಾರಿಗೆಬೇಕು? ರೋಗಿ:- ಇರಲಿ, ಈಗ ಹೋಗಿ ಅಡಿಗೆ ಮಾಡಿ ಊಟಮಾಡು , ನನಗೂ ಸಂಕಟವಾಗು ವುದು, ಹಾಗೆಯೇ ಸ್ವಲ್ಪ ಗಂಜಿಯನ್ನು ಮಾಡಿ ಕೊಡು. ಈ ಸಭೆ, ಥಟ್ಟನೆದ ಮೊ ಹಶೃಂಖಲಾಬದ್ಧಳಾಗಿರುವ ತಾಯಿ ಉಳಿದು ಕೊಳ್ಳು ವಳೆ೦ಬ ಸಂತೋಷದಿಂದ- “ ಈಗಲೇ ಗಂಜಿ ಮಾಡಿ ತಿರುವೆನು” ಎಂದು ಹೇಳಿ ಮಡಿಯಡಲು ನ್ಯಾನಗೃಹಕ್ಕೆ ನಡೆದಳು. ದ್ವಿತೀಯ ಸ೦ಕ್ಷೆ : ದ. ( ವಿಷಮಯಘಟನೆ ) ('~ ನಭೆ ಸ್ನಾನಗೃಹಕ್ಕೆ ಹೋದ ಒಂದೆರಡು ಘಳಿಗೆಯೊಳಗೆ ಅಂಚೆ ಯವನು ಬಂದು, ಕೆಲವು ಕಾಗದಗಳನ್ನು ರೋಗಿಯ ಹಾಸಿಗೆಯ ಮೇಲೆ ಹಾಕಿ ಹೊರಟುಹೋದನು, ನಭೆಯು ಗಂಟೆಯನ್ನು ಮಾಡಿಕೊಂಡು ಒಂದು ತಾಯಿಗೆ ಕೊಟ್ಟಳು. ರೋಗಿಯ ಮಡಿಯುಡದೆ ಕುಡಿಯಲು ಮೊದಲು ಒಪ್ಪಲಿಲ್ಲ. 'ಆಪತ್ಕಾಲದಲ್ಲಿ ಮರ್ಯಾದೆಯ ಕಡೆಗೂ ಲಕ್ಷ ಕೊಡದಿರಬಹುದು. ” ಎಂಬ ಆರವಚನಾಧಾರದಿಂದ ನಭೆ ತಾಯಿಗೆ ಬಹುವಾಗಿ ಹೇಳಲು ಅದರಿಂದ ತೃಪ್ತಳಾಗಿ ಕುಡಿದಳು, ಅನಂತತೆ ನಭೆಗೆ ಹಾಸುಗೆಯ ಮೇಲೆ ಬಿದ್ದಿದ್ದ ಮೂರು ಕಾಗದಗಳೂ ಕಂಡ. ಬಂದುವು. ಆತುರ ದಿಂದ ಅವುಗಳನ್ನು ತೆಗೆದುಕೊಂಡು ನೋಡಿದಳು. ಮೂರೂ ತನಗೆ ಬಂದುವೆಂದೇ ತಿಳಿದಳು, ಒಂದು ತನ್ನ ಪತಿಯ ಹಸ್ತಾ ಕರವೆಂದು ಬೋಧೆಯಾಯ್ತು, ಮತ್ತೆರಡರಲ್ಲಿ ಒಂದು ನಿಜಭಾತೃಹಾ ಕ್ಷರವಿರಬಹುದೆಂಬ ಸಂದೇಹ! ಉಳಿದುದು ಎಂದೂ ನೋಡದ ಹಸ್ತಾ ಕ್ಟರ! ಚಕಿತೆಯಾದಳು. ಅದನ್ನು ನೋಡಿದ ರೋಗಿ;- 'ನಭಾ! ಅದಾ ರವ? ಅಷ್ಟು ಕಾಗದಗಳು? ” ಎಂದಳು. ನಭಾ:-ಇದೇ ನಿನ್ನ ಅಳಿಯಂದಿರದು.