ಪುಟ:ನಭಾ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಸತೀಹಿತೈಷಿಣೀ. - ನಭೆಯು ಎರಡನೆಯ ಕಾಗದವನ್ನು ಬಿಚ್ಚಿದಳು; ನೋಡಿದಳು ನಾಲ್ಕು ಭಾಗಗಳಲ್ಲಿಯ ಶೋಕದರ್ಶಕವಾದ ಕಪ್ಪುಮಸಿಯ ರೇಖೆ ಗಳು ! ದೇಹದಲ್ಲಿ ಸ್ಮತಿಯಿಲ್ಲದೆ ;- ಅಮ್ಮಾ ! ನಿರ್ಧ ರವಾಯ್ತು, ಇದ. ಮೈದುನನ ಪತ್ರವ, ನಿನ್ನ ಮಗಳು ಇಂದಿನಿಂದ ಅನಾಥೆಯಾದಳು. " ಎ೦ದು ಕ೦ಪಿತ ಸ್ವರದಿಂದ ತೊದಲುತ್ಯ ದೆಲ್ಲಮೆಲ್ಲನೆ ಓದಿದಳು:- 'ತಾ ? ಇದೇ ನನ್ನ ಪ್ರಥಮ ಪತ್ರವ, ಇದರಲ್ಲಿಯೇ ಹೃದಯಬೇಧವೂ ಚಿರದುಃಖಕರವೂ ಆದ ವರ್ತಮಾನವನ್ನು ತಿಳಿಸುವ ದೈವದುರ್ವಿ ಪಾಕದ ಕಾಲವು ಪಾಪಿಯಾದ ನನ್ನ ಭಾಗಕ್ಕೆ ಸಂಘಟಿಸಿದುದಕ್ಕಾಗಿ ಎಷ್ಟು ವಿಷ ದಿಸ ಮಾಡುವುದೇನನ್ನು ? - ನಮ್ಮ ಮಾತಾಪಿತೃಗಳ ವೃದ್ಧಾಪ್ಯದಲ್ಲಿ ಅವರ ಆನಂದಕ್ಕೆ ಆಧಾರ ನಾಗಿಯ ಜೀವನಾಧಾ ರಸೂತ್ರನಾಗಿಯೂ ಇದ್ದ ನಮ್ಮ ಅಣ್ಣನು ಮೃತನಾದನು. ಮಾತಾಪಿತೃಗಳು ಸಂಕಟಸಾಗರದಲ್ಲಿ ಮುಳುಗುವಂತಾದರು, ನತ ದೃಷ್ಟನಾದ ನಾನು ನನ್ನ ಮೇಲೆಗೆ ಕಾರಣಕರ್ತನೂ, ಸದ್ಯೋಧಕನೂ, ಪರಮೋತ್ಕೃಷ್ಟಬಂ ಧುವೂ ಆಗಿದ್ದ ಆ ನನ್ನ ಭ್ರಾತೃರತ್ನ ವನ್ನು ಕಳೆದ. 'ಕೊಂಡು ಜಡನಾಗಿರುವೆನು, ಅತ್ತಿಗೆಯಾದ ನಿನ್ನ ಆಗಮವನ್ನೇ ಇದಿರು ನೋಡುತಿದ್ದ ಆ ನಿನ್ನ ನಾದಿನಿಯು ಆಶಾಪಾಶವಿಚ್ಛೇದನದಿಂದ ಆಶ್ರ ಧಾರೆಯನ್ನು ಸುರಿಸುತಿರುವಳು. ತಾಯಿ ! ನಿನ್ನ ಜೀವಿತೇಶ್ವರನು ಇಂನ ಈಗ ಒಂದೇಒಂದು ಘಳಿಗೆಗೆ ಮುಂಚೆ ನಿನ್ನ ಧ್ಯಾನದಲ್ಲಿಯೇ ಅನಾಗಿದ್ದಂತೆ ಪರಂಧಾನ ವನ್ನು ಹೊಂದಿದನು, ಕೈಯಲ್ಲಿ ಶಕ್ತಿಯಿರುವವರೆಗೂ, ನಿನಗೆ ಪತ್ರ ವನ್ನು ಬರೆದನು. ಪ್ರಾಣಹೋಗುವವರೆಗೂ ನಿನ್ನ ಧ್ಯಾನವನ್ನೇ ಮಾಡು ತಿದ್ದನು, - ತಾಯಿಾ! ನನಗೆ ಕೈಯೋಡದು, ಕಣ್ಣುಗಳಲ್ಲಿ ನೀರು ತುಂಬಿ ದೃಷ್ಟಿ ಯನ್ನು ಕುಂದಿಸಿ, ಪತ್ರವನ್ನು ಮಲಿನಗೊಳಿಸುತಲಿದೆ. ಲೇಖನಿಯ ನಡು ಗುತಲಿದೆ ಮನವು ಉತವಿಕೃತವಾಗಿದೆ. ಆದರೂ, ಬರೆಯುವೆನು ಕ್ಷಮಿಸು!