ಪುಟ:ನಭಾ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 11 ತಾಯಿ : ಕಾಕ್ಯವೇನೋ ನಡೆದುದು, ಉತ್ಪತ್ತಿಯೊಡನೆಯೇ ಲಯವು ಸಿದ್ಧವಾಗಿಯೇ ಇರುವುದು, ಎಲ್ಲರೂ ಸಾಯಲೇ ಬೇಕು; ಈಗಣ ದುರಂತವಾದ ಶೋಕಸಂತಾಪಗಳನ್ನು ಧೈರ ಓರಗಳಿಂದ ತಡೆಯಬೇಕಾದುದೇ ಧರ್ಮ ವು. ಅಧೀರರಾದರೆ, ಜಗತೃಷ್ಟಿಕರ್ತನ ಉದ್ದೇಶಕ್ಕೆ ವಿರೋಧವಾಗಿ ಸುಖಬಾಹಿರರಾಗಬೇಕಾಗುವುದು. ಶಾಂತಿಯೇ ಸರ್ವತ್ರ ಶ್ರೇಷ್ಠವಾದುದು, ಕ್ಷಮೆಯೇ ಜೀವಧಾರಣೆಗೆ ಮಲಾಧಾರವಾದುದು. - ಅತ್ತಿಗೆ ! ನಾನು ಬದುಕಿದ್ದರೆ, ನನ್ನ ಕರ್ತವ್ಯವನ್ನು ನೆರವೇರಿಸು ವೆನು, ಮುಖ್ಯ ತಾಳ್ಮೆಯಿಂದ ದೇಹಧಾರಣ ಮಾಡಿರಬೇಕೆಂದು ಬೇಡು ವೆನು. ಇತಿ-ನಿನ್ನ ಮೈದುನ, ಮುರಳೀನಾಥ ಶರ್ಮ ಪತ್ರ ಪಠನವನ್ನು ಮುಗಿಸಿದ ಕೂಡಲೇ ನಭೆಯ ಮುಖದಲ್ಲೊಂದು ಬಗೆಯ ವಿಜಾತೀಯ ಕಾಂತಿ ಕಂಡುಬಂದುದು. - ರೋಗಿಗೆ ಶ್ವಾಸವು ಹೆಚ್ಚಿತು, ಪ್ರಾಣಗಳು ಹೊರಡಲು ಸಿದ್ದವಾಗಿ ದ್ದುವ, ಅತಿ ಪ್ರಯಾಸದಿಂದ ಅಸ್ತವವಾಗಿ-“ನಭಾ ? ಮನ-ಕಲ್ಲುಮಾಡು, ನಿನ್ನ ಅಣ್ಣ, ಏನು ?” ಎಂದಳು. ನಭೆಗೆ, ತಾಯಿಯ ದುರವಸ್ಥೆಯನ್ನು ನೋಡಿ ಬುದ್ಧಿ ಶೂನ್ಯವಾ ಗಲು;-ld ಅಮ್ಮಾ ! ನೀನೂ ಸಾಯುವೆ ! ನಿನ್ನಾ ಶೆಯನ್ನೇಕೆ ಭಂಗಸ ಡಿಸಲಿ ? ಎಲ್ಲವೂ ನನ್ನ ದುಷ್ಕರ್ಮ ಫಲ ಅನುಭವಿಸಲೇಬೇಕು, ಕೇಳು, ಓದುತ್ತೇನೆ.” (ಎಂದು ಓದಿದಳು. ) .'ತಂಗಿ, ಎಲ್ಲವೂ ದೈವೇಚ್ಛೆ ವೈಧವ್ಯದ ದುಃಖವನ್ನು ತಡೆಯಲಾ ರೆನೆಂದು ಆತ್ಮಹತ್ಯವನ್ನು ಮಾತ್ರ ಮಾಡಿಕೊಳ್ಳಬೇಡ, ಸದಸದ್ವಿಚಾರವನ್ನು ಅವಲಂಬಿಸು. ಇದಕ್ಕೂ ಹೆಚೂ ಬರೆಯಲಾರೆ. ಈ ವಿಷಮಯಸಮಯದಲ್ಲಿ ನಿನ್ನನ್ನು ಏನೆಂದು ಸಂಬೋಧಿಸಲಿ ? ನೀನು ಬಹುಮಾನಿತಯಾಗುವಿಯಂಬ ಸಂತೋಷವಾರ್ತೆಯನು, ತಿಳುಹ ಬೇಕೆಂದಿದ್ದ ನಾನು, ಸರ್ವನಾಶಕರವಾದ ಅಪ್ರಿಯ ವಾರ್ತೆಯನ್ನೆ ತಿಳುಹ ಬೇಕಾಗಿ ಬಂದ ಈ ದುರ್ದಿನವನ್ನೂ, ಈ ಶುಷ್ಕ ಲೇಖನಿಯನ್ನೂ, ಎಷ್ಟುಏನೆಂದು ಶಪಿಸಲಿ ? ಏತರಿಂದ ಶಾಂತನಾ ಗಬೇಕು ?