ಪುಟ:ನಭಾ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಸತೀಹಿತೈಷಿಣೀ. ಸಹೋದರಿ ! ಇಂದು ನಾನು ನಿನ್ನ ಸ್ವಾಮಿಯನ್ನು ನೋಡಲು ಹೋಗಿದ್ದೆನು, ನನ್ನನ್ನು ನೋಡಿದೊಡನೆಯೇ ಉತ್ತಮಣಾವಸ್ಥೆಯಲ್ಲಿ ದ್ದರೂ ಆ ನಮ್ಮ ಶ್ರೀನಿವಾಸನು ಉನ್ಮತ್ತನಂತೆ ನನ್ನನ್ನು ಆಲಿಂಗಿಸಿ ಕೊಂಡು ಅತ್ತನು. ಆತನ ಪ್ರತಿವಾಕ್ಯ, ಪ್ರತಿಶಬ್ಬದಲ್ಲಿಯೂ ನಿನ್ನ ನಾಮವೇ ಅಡಗಿದ್ದಿತು. ಅಂತಹ ಅಮೋಘರತ್ನ ಧಾರಣಾಯೋಗ್ಯತೆ ನಿನಗಿಲ್ಲವಾಯ್ತು, ನಿನ್ನ ಅಭ್ಯುದಯವನ್ನೇ ನಿರೀಕ್ಷಿಸುತ್ತಿದ್ದ ಮಾತೃದ್ರೆ ವಕ್ಕೆ ಉಂಟಾದ ಶೋಕಕ್ಕೂ, ನಿನ್ನ ಭವಿಷ್ಯಜೀವನದ ದುಃಸ್ಥಿತಿಗೂ ಶಾಂತಿಯಿದೆಯೆ ? ಸಹೋದರಿ ! ರುಗ್ಧ ಶಯ್ಯಾಗತಳಾದ ನಿನ್ನ ಮಾತೃವು ಈ ಶೋಕ ಜನಕ ವರ್ತಮಾನವನ್ನು ಕೇಳಿ, ವಾಘಾತದಿಂದ ಸಮೂಲವಾಗಿ ಬೀಳುವ ವೃಕ್ಷದಂತೆ ನಾಶವಾದರೂ ಆಗಬಹುದು, ಸಾಧ್ಯವಾದ ಮಟ್ಟಿಗೂ, ದೀರ್ಘವೂ, ಧೃಢವೂ ಆದ ಪ್ರಯತ್ನ ದಿಂದ ನಿನ್ನ ಮುಂದಣ ಮಾರ್ಗವನ್ನು ಸುಗಮವಾಡಿಕೆ ! ನಿನ್ನ ಅಣ್ಣ. ನಿರಂಜನ.” ನಭೆಯು ಪತ್ರಗಳನ್ನು ಮಡಿಸಿ ಉಡಿಯಲ್ಲಿಟ್ಟು ಕುಳಿತಳು, ಈವ ರೆಗೆ ಮಲಗಿದ್ದ-ಮುದುಕಿಯು ಮುಂದೆ ತಡೆಯಲಾರದೆ ಹುಚ್ಚಿಯಂತೆ“ನಿರ್ಭಾಗ್ಯ ? ಹೊರಡು. ಇನ್ನು ನೀನೀಭೂಮಿಯಲ್ಲಿದ್ದು ಫಲವಿಲ್ಲ.” ಎಂದು ಕೂಗಿಕೊಂಡಳು. ನಭೆಯು ಕಣ್ಣೀರುತುಂಬಿ... ಅಮ್ಮಾ ! ಭೂಮಿಯಲ್ಲಿರಬಾರದು~ ನಿಜ; ಆದರೆ, ಮತ್ತೆಲ್ಲಿಗೆ ಹೋಗಲಿ ? ಮೃತ್ಯುವು ನನ್ನಿಚ್ಛೆಗೆ ಬರುವುದೇ ? ಅದು ಕಾಲ ಬಂದಾಗ ಬರುವುದು. ರೋಗಿ:-ನಿರ್ಭಾಗ್ಯ ! ನಿನ್ನ ಗಂಡನಿಗೂ ಕಾಲವಾಗಿದ್ದಿತೊ ? ನಭಾ:-ಆಗಿದ್ದು ದರಿಂದಲೇ ಹೋದರು, ನನ್ನ ಕಾಲ ಪರಿಪಕ್ಕೆ ವಾದಂದು ನಾನೂ ಹೋಗುವೆನು. ರೋಗಿ:-ನಿನ್ನ ಅನುಭವವು ಇಷ್ಟಕ್ಕೆ ಸಾಕು; ಬೇಕೆಂದರೆ ಮೃತ್ಯು ಬರುವುದಿಲ್ಲವೆ ?