ಪುಟ:ನಭಾ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 13 ನಭಾ:-ಅಮ್ಮ ! ಬರುವ ಕಷ್ಟವು ಎಂದಿದ್ದರೂ ತಪ್ಪದು, ನನಗೆ ಪ್ರಾಪ್ತವಾಗಬೇಕಾಗಿದ್ದ-ಭಗವತ್ಸಂಕಲ್ಪದಂತೆ ಬರಬೇಕಾಗಿದ್ದ-ವಿರೂ ಪವೇನೆ ಬಂದುಬಿಟ್ಟಿತು. ಇಂದು ಸತ್ತರೆ, ಬರುವ ಲಾಭವೇನು ? ಮುಂದೆ ಸತ್ತರೆ, ಆಗುವ ನಷ್ಯವೇನು ? ಈಗ ಸತ್ಯ ಮಾತ್ರಕ್ಕೆ ಅನುಭವವು ತಪ್ಪಿ ಹೋದೀತೆ ? ರೋಗಿ:- ಈಗಲೇ ಸಾಯಿ, ಅದೇ ಒಳ್ಳೆಯದು. ನಭಾ:-ಹೇಗೆ ? ರೋಗಿ:-ಮಗು ! ಕಾಲವು ಕೆಟ್ಟ ಹಾಳಾಗಿದೆ. ಎಲ್ಲೆಲ್ಲಿಯೂ ದುರಾಚಾರವು ಹೆಚ್ಚಿ, ಮಾನ, ಕೀರ್ತಿಗಳು ಉಳಿವಂತಿಲ್ಲ. ವೃಥಾ ದುಷ್ಟರ ಅಪವಾದಕ್ಕೆ ಸಿಕ್ಕಿ ನರಳಬೇಕಾಗುವದು.

  • ನಭೆಗೆ ಮುಂದೆ ದುಃಖವು ತಡೆಯಲಾರದುದಾಗಿ ಕಂಡುಬಂ ದಿತು. ತಾಯಿಯ ಮುಖವನ್ನೇ ನೋಡುತ್ತ ಗದ್ದ ದಕಂಠದಿಂದ ಹೇಳಿ ದಳು;- ಅಮ್ಮಾ ! ನಿನ್ನ ನುಡಿಗಳೆಲ್ಲವೂ ನಿಜವೇ ಆದರೂ, ನಿನ್ನ ಅಂತ್ಯ ಕಾಲದ ಆಶೀರ್ವಾದದಿಂದ ಈ ನಿನ್ನ ಮಗಳು ಸನ್ಯಾಸಿನಿ ! ಚಿರಸನ್ಯಾ ಸಿನಿ ! ಇವಳು ಇನ್ನು ಮುಂದೆ ಸ್ವ ಸುಖಾಭಿಲಾಷೆಯಿಂದ ವಿಷಯೋಪ ಭೋಗಗಳಿಗೆ ಸ್ವಲ್ಪವಾದರೂ ಕಂಬನಿಗರೆಯಳು, ಮನವನ್ನು ಲೋಭಾ ದಿಗಳಿಗೆ ವಶಪಡಿಸಿ ಕರ್ತವ್ಯವಿಮುಖಳಾಗುವುದಿಲ್ಲ. ಪ್ರಮಾಣ ಮಾಡು ತೇನೆ.

« ಅಮ್ಮಾ! ಸತ್ಯದಲ್ಲಿ ಬಲವೂ, ಧಮ್ಮದಲ್ಲಿ ಜಯವೂ, ಜ್ಞಾನದಲ್ಲಿ ವೈರಾಗ್ಯವೂ, ವೈರಾಗ್ಯದಲ್ಲಿ ಭಕ್ತಿಯ, ಭಕ್ತಿಯಲ್ಲಿಯೇ ನಿತ್ಯಮುಕ್ತಿ ಸುಖವೂ ಇರುವ ಪರ್ಯ೦ತ, ನಿನ್ನ ಮಗಳು ಇಹಸುಖಕ್ಕೆ ಮನವನ್ನು ಕೊಡಳೆಂದು ಇಂದು ಭರವಸೆಯನ್ನು ಕೊಡಬಲ್ಲಳು, ಕುಲ, ಕೀರ್ತಿ, ಧರ್ಮಾದಿಗಳಿಗೆ ಎಷ್ಟು ಮಾತ್ರಕ್ಕೂ ಅಪಮಾನವನ್ನು ತಾರಳು. ನೀನು ನಿನ್ನ ಮಾರ್ಗವನ್ನು ಸುಗಮವನ್ನಾಗಿ ಮಾಡಿಕೊ ! ಈಗ ನಾನು ಸಾಯ ತಾರೆ, ಮುಂದೆ ಅಂತಹ ಸಂದರ್ಭವು ಬಂದಾಗ ಸಾಯುತ್ತೇನೆ, ದೇವರ ಚಿತ್ರದಲ್ಲಿ ದ್ದಂತಾಗಲಿ; ಬಂದುದನ್ನೆಲ್ಲಾ ಅನುಭವಿಸುತ್ತೇನೆ. ಈಗ ಇದಕ್ಕೂ ಹೆಚ್ಚಿಗೆ ಹೇಳಲಾರೆ.