ಪುಟ:ನಭಾ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 5 ಅದೇನು ಹೇಳು; ಅಗತ್ಯವಾಗಿ ಮಾಡುತ್ತೇನೆ. ನಭಾ:-ನನ್ನ ಚಿಕ್ಕಪ್ಪ ಶಂಕರನಾಥನ ಬಳಿಗೆ ಹೋಗಿ... ವೃದ್ದೆ:-ಆತನು ನಿಮ್ಮಮ್ಮನ ಜನ್ಮದೈತಿ. ಅಂಥವನಿಂದ ನಿನ ಗೇನು ಸಹಾಯವಾದೀತು ? ನಭಾ:- ದ್ವೇಷಾಸೂಯಾದಿಗಳನ್ನು ಸಾಧಿಸುವುದು ಆರಿಗೂ ಒಳ್ಳೆ ಯದಲ್ಲ. ನನಗಾರೂ ಅಹಿತರಿಲ್ಲ, ದಯೆಯಿಟ್ಟು ಆತನ ಬಳಿಗೆ ಹೋಗಿ, (ಅಪ್ಪಾ, ಇಂದು ನಿನ್ನ ಮಗಳು ಅನಾಥೆ; ಅನನ್ಯಗತಿಕಳಾಗಿ ನಿನ್ನ ಮರೆ ಹೊಕ್ಕಿರುವಳು. ಇಬ್ಬರೂ ದಯೆಯಿಟ್ಟು ಹಿಂದಿನ ದ್ವೇಷಗಳನ್ನೆಲ್ಲ ತೊರೆ ಗು ಸಹಾಯ ಮಾಡಬೇಕೆಂದು ಬೇಡುವಳು.” ಎಂದು ಹೇಳಿರಿ. • ಆರಿಗೆ ಆವಕ್ಷಣಕ್ಕೇನು ಪ್ರಾಪ್ತವಾಗುವುದೋ ಬಲ್ಲವರಾರು ? ಈ ಅಸ್ಥಿರವಾದ ಪ್ರಪಂಚದಲ್ಲಿ ಆವುದು Aರ ? ಆದರೂ ಮೂಢನಾದೆ. ಮಾನವನು ಹೊನ್ನು ಹೆಣ್ಣು ಮಣ್ಣುಗಳಿಗೆ ಮರುಳಾಗಿ ಆಚರಿಸಬಾರದೆ, ಸ್ಮರಿಸಲೂ ಯೋಗ್ಯವಲ್ಲದ ಕೃತ್ಯಗಳನ್ನು ಮಾಡಿ ಪಾ ಸೌಭಾಗಿಯಾಗುವನು, ಸಾವಿನಂಜಿಕೆಯಿಲ್ಲದವನು ಆವ ಧರ್ಮವನ್ನೂ ಆರ್ಚಿಸಲಾರನು, ಪ್ರತಿ ಕ್ಷಣದಲ್ಲಿ ಯ ಮೃತ್ಯುವು ಸನ್ನಿ ಹಿತವಾಗಿರುವದೆಂದು ತಿಳಿದಿರುವನಿಂ ದಲೇ ಪ್ರಪಂಚಕ್ಕೇನಾದರೂ ಉಪಯೋಗವುಂಟು.” ಇದನ್ನು ವಿಚಾರ ಮಾಡುತ್ತ ವೃದ್ದೆಯು ಶಂಕರನಾಥನ ಮನೆಗೆ ಹೋದಳು. ಸ್ವಲ್ಪ ಹೊತ್ತಿನಲ್ಲಿ ಇಬ್ಬರೂ ಬಂದು ಮನೆಯ ತಲೆಬಾಗಿಲಲ್ಲೇ ನಿಂತರು, ಒಳ ಹೊಗಲಿಲ್ಲ. ನಭೆಯು ಎದ್ದು ನಿಟ್ಟುಸಿರನ್ನು ಬಿಟ್ಟ ಅಂಗವಸ್ತ್ರವನ್ನು ಸರಿಪಡಿಸಿ ಕೊಂಡು ಹೊರಟುಬಂದು ಬಾಗಿಲಲ್ಲಿಯೇ ನಿಂತಿದ್ದ ಚಿಕ್ಕಪ್ಪನ ಕಾಲು ಗಳನ್ನು ಬಲವಾಗಿ ಹಿಡಿದು, ಅವುಗಳಮೇಲೆ ತಲೆಯನ್ನಿಟ್ಟು, ಕಣ್ಣೀರು ಸುರಿಸುತ್ತ ಅಪ್ಪಾ! ಸತ್ತಿರುವ ಅಮ್ಮನಮೇಲಿದ್ದ ದ್ವೇಷವನ್ನು ಇನ್ನು ನನ್ನ ಮೇಲಿಡಬೇಡ. ನಾನು ಪಾಪಿ! ಕ್ಷಮೆ ಬೇಡುವೆನು ಇಂದು ನಾನು ನನ್ನ ಸರ್ವಸ್ವವನ್ನೂ, ಮಾತೃವನ್ನೂ ಕಳೆದು ಕೊಂಡಿದ್ದರೂ, ಚಿರದುಃಖಿ ಯಾಗಿದ್ದರೂ ಹೃದಯವನ್ನು ಗಟ್ಟಿ ಮಾಡಿಕೊಂಡು ನಿನ್ನ ಕಾಲು ಹಿಡಿದು ಬೇಡುತ್ತಿದ್ದೇನೆ, ಈಗ ನನಗೆ ನೀನೇ ದಿಕ್ಕು; ಈ ಶವವನ್ನು ಸಾಗಿಸಲು