ಪುಟ:ನಭಾ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

18 ಸತೀಹಿತೈಷಿಣೀ. ಶಂಕರ:- ಬಿಡಲಾಗುವುದಿಲ್ಲ; ಜನರಾದರೂ ಏನೆಂದಾರು ? ಹಿಂದಾ ಡರೂ ನಿಂದಿಸರೆ? ಶರಾವತಿ-ನಿಂದಿಸುವರ ನಾಲಿಗೆಯು ಹುಣ್ಣಾಗಲಿ; ಆದಾಯ ವಿಲ್ಲದ ಕೆಲಸಕ್ಕೆ ಎಂದೂ ಕೈಯೊಡ್ಡಲಾಗದು. ನಭೆಯ ಹೃದಯವು ಕಳಚಿಬಿದ್ದಂತಾಯಿತು, ತಲೆತಿರುಗಲಾರಂಭ ವಾಯಿತು, ಕೈ ಕಾಲುಗಳು ತರತರನೆ ನಡುಗಿದುವು. ಮನಸ್ಸಿನ ಸ್ಥಿತಿ ಯನ್ನು ಹೇಳಲಾಗದಂತಾಯಿತು, ಆದರೂ ನಭೆಯು ಬಹುಕಷ್ಟದಿಂದ 4 ಅಮ್ಮಾ ! ಆದಾಯವೆಂದರೆ ಅರ್ಥವೇನು,” ಎಂದಳು, ಶರಾವತಿ:- ಅರ್ಥವೋ ಅನರ್ಥವೋ ? ಕಷ್ಟಕ್ಕೆ ತಕ್ಕ ಫಲವು ದೊರೆಯಲೇ ಬೇಕು. ಹತ್ತು ದಿನವೂ ಮೂರುಸಾರೆ ತಣ್ಣೀರಿನಲ್ಲಿ ಮುಳುಗಿ ಸಾಯಬೇಡವೆ? ನಭಾ:-ಫಲವಿದ್ದೇ ಇರುವುದು, ಇಹದ ಫಲದಿಂದ ತೃಪ್ತಿಯಿಲ್ಲ ದಿದ್ದರೆ, ಪರದಲ್ಲಿ... ಶರಾವತಿ:-ನಿನ್ನ ಪರವನ್ನು ಸುಡು ! ಇಲ್ಲಿ ಸತ್ತರೂ ಚಿಂತೆಯಿಲ್ಲ. ಪರ-ಅ೦ತೆ, ಸರ! " ನಭೆಯು ಮಾತನಾಡಲಾರದೆ ನಿಟ್ಟುಸಿರು ಬಿಟ್ಟಳು. ಶಂಕರ:-ಈಗ ಇಪ್ಪತ್ತು ರೂಪಾಯಿಗಳನ್ನು ಕೊಟ್ಟಿರುವಳು. ಶರಾವತಿ:-ಅದೇನು, ಸುಟ್ಟು ಬರುವುದರಲ್ಲಿ ಮುಗಿಯುವುದು. ಶಂಕರ:- ಮುಂದಿನ ಖರ್ಚಿಗೆ ನೋಡುವ !” ಎಂದು ಹೇಳಿ ರುವಳು. ಶರಾವತಿ:-ನೋಡುವುದೇನು, ತೋಡುವುದು; ಸರಿಯಾದ ರೀತಿ ಯಲ್ಲಿ ಎಲ್ಲವೂ ವ್ಯವಸ್ಥೆಯಾಗದಿದ್ದರೆ, ಅದರ ಪ್ರಸ್ತಾಪವೇ ಬೇಡ ; ನಡೆಯಿರಿ. ಈ ಸಂಭಾಷಣೆಯನ್ನು ಕೇಳುತ್ತ, ಅಲ್ಲಿಯೇ ನಿಂತಿದ್ದ ನರಮನೆಯ ವೃದ್ದಳು ಧರ್ಮ, ದಯೆ, ದಾಕ್ಷಿಣ್ಯ, ಪರೋಪಕಾರ, ಔದಾರಗಳೇ ಮೊದ ಲಾದ ಸದ್ಗುಣಗಳಿಗೆ ಜನ್ಮಸ್ಥಾನವೆನ್ನಿ ಸಿರುವ ಭಾರತಮಾತೆಯ ಉದರ ಪಲ್ಲಿ ಇಂತಹ ದುಷ್ಟಯರು ಇನ್ನೂ ಇರುವುದಕ್ಕಾಗಿ ಚಿಂತಿಸಿ, ಬೆದ