ಪುಟ:ನಭಾ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 19 ಗಾಗಿ, ಇದೇನಮ್ಮ? ಇದು ನ್ಯಾಯವಾದ ವ್ಯಾಪಾರವೆ? ಈ ಮಾತ ನಾಡಲು ನಾಲಿಗೆ.........” ಎಂತೆನ್ನು ವಷ್ಟರಲ್ಲಿಯೇ ಶರಾವತಿಯು ಹುಬ್ಬುಗಳನ್ನು ಗಂಟುಹಾಕಿ ಹಲ್ಲು ಕಡಿಯುತ್ತ, 4 ಬಲ್ಲೆ ನಮ್ಮ ಬಲ್ಲೆನಿಮ್ಮ ವಿವೇಕವನ್ನು :-ಹೊರಡಿರಿ, ನಮ್ಮ ಹಣೆಯ ಬರಹ! ಮಾತನಾ ಡಲೇನು ಖರ್ಚು? ಕೈಯಲ್ಲಿ ಕೆಲಸ ಮಾಡಿದರೆ ತಿಳಿದೀತು. ಈ ಇಪ್ಪತ್ತು ರೂಪಾಯಿಗಳನ್ನು ತೆಗೆದುಕೊಂಡು ನೀವೇ ಕೆಲಸ ನಡೆಯಿಸಿ; ನೋಡುವ, ” ಎಂದು ಕೂಗಿದಳು, ವೃದ್ದಳು ಮುಂದೆ ಮಾತಾಡಲಿಲ್ಲ. ನಭೆಗೆ ಆಗ ಉಂಟಾದ ಸಂಕಟವನ್ನು ವಿವರಿಸಿ ಹೇಳುವಂತಿರ ಲಿಲ್ಲ, ಬಿಸಿಬಿಸಿಯಾದ ಕಣ್ಣೀರನ್ನು ಸುರಿಸುತ್ತ, ಕಂಪಿತ ಸ್ವರದಿಂದ ( ಅಮ್ಮ! ನನಗೆ ಅರ್ಥಾ ರ್ಜನೆಯಿಂದ ಫಲವೇನು ? ಸನ್ಯಾಸಿನಿಯಾಗುವ ನನಗೆ ಒಂದು ಹಿಡಿ ಪಿಂಡ, ಒಂದು ತುಂಡು ಬಟ್ಟೆ ಯಾದರೆ ಸಾಕು. ಉಳಿದ ಸರ್ವಸ್ವವೂ ನಿಮ್ಮದೇ ಆಗಿದೆ. ” ಎಂದಳು. - ಶಂಕರ:-ಎಂದಿದ್ದರೂ ಹುಡುಗಿಯು ನಮ್ಮವಳು. ಶರಾವತಿ:-ಈಗ ಹಾಗೆಯೇ ! ಆಮೇಲೆ ಅವಳಾರೋ-ನಾವಾರೋ! ಅದೆಲ್ಲ ಆಗದು, ಏನಮ್ಮ! ಎಲ್ಲವನ್ನೂ ಬರೆದು ಕೊಟ್ಟರೆ, ಕೆಲಸ ಮಾಡು ವರು; ಇಲ್ಲವಾದರೆ ಆಗದಮ್ಮ! ಈ ಕಲಿಕಾಲದ ವೈರಾಗ್ಯವನ್ನು ನಾನು ಬಲ್ಲೆ. ಸಭೆಯು ಬಹುಕಷ್ಟ ದಿಂದ ಹೃದಯದ ವೇಗವನ್ನು ತಡೆದು ಸ್ಪರ ಭಾವದಿಂದ ಹೇಳಿದಳು:- ( ಅಪ್ಪ : ಕ್ಷಣಿಕವೈರಾಗ್ಯವ ನನಗೆ ತಿಳಿ ಯದು; ಮಾವಿನಬೀಜದಿಂದ ಬೇವಿನ ಗಿಡವು ಹುಟ್ಟುವುದಿಲ್ಲ. ಮಾವು ಮಾವೇ; ಬೇವು ಬೇವೇ; ನನ್ನ ತಂದೆಯಲ್ಲಿದ್ದ ದೃಢಸಂಕಲ್ಪ, ಧೈಯ್ಯಾದಿಗ ಳಲ್ಲಿ ಸ್ವಲ್ಪವಾದರೂ ನನ್ನಲ್ಲಿ ಇಲ್ಲದೆ ಇಲ್ಲ. ನಾನು ಹುಡುಗಿಯೆನಿಸಿ ಕೊಂಡರೂ ಬೊಂಬೆಯಾಟವಾಡುವ ಮಗುವಲ್ಲ. ತಕ್ಕಮಟ್ಟಿಗೆ ತಿಳಿದು ಕೊಳ್ಳುವಷ್ಟು ವಯಸ್ಸಾಗಿದೆ. ಇಂದಿನ ಕಾಠ್ಯವು ನಡೆಯಲಿ; ಕಾಗದ ಪತ್ರಗಳನ್ನು ಮಾಡಿಕೊಡುವೆನು, ಆಲೋಚಿಸಬೇಡಿ, ಅಮ್ಮನ ಆಸ್ತಿಯೆಲ್ಲವೂ ನಿಮ್ಮದಾಗುವುದೇ ಹೊರತು ನನ್ನ ರಾಗದು. "