ಪುಟ:ನಭಾ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಸತೀಹಿತೈಷಿಣೀ, ಶರಾವತಿಯು ಸಮ್ಮತಿಸಿದಳು, ಹಣವನ್ನು ಸಾಗಿಸಿದರು, ವೃದ್ಧೆಯು ಆಶ್ಚರ್ಯಚಕಿತಳಾಗಿ ಈ ಪೃಥ್ವಿಯಲ್ಲಿ ದ್ರವ್ಯವು ಎಂತಹದೆಂಬುದನ್ನು ಪ್ರತ್ಯಕ್ಷವಾಗಿ ಗ್ರಹಿಸಿ ಹೊರಟುಹೋದಳು, ಶರಾವತಿಯ ಮಗಳನ್ನು ಮನೆಗೆ ಕರೆದುಕೊಂಡು ಹೋದಳು. ಸಹೃದಯರೆ ! ಕ್ಷಮಿಸಿರಿ, ಕಧಾರಂಭದಲ್ಲಿಯೇ ನಿಮ್ಮ ಹೃದಯ ವನ್ನು ಶೋಕಮಯವಾಗಿ ಮಾಡಿದ ನಮ್ಮ ತಪ್ಪನ್ನು ಕ್ಷಮಿಸಿರಿ, • ಶ್ರೇಯಾಂಸಿ ಬಹುವಿಫ್ಘಾನಿ, ” ಎಂಒಂತೆ ಶ್ರೇಯಸ್ಸು ಬರಲು ಅನೇಕ ವಿಘ್ನು ಗಳಿದ್ದೇ ಇರುವುವು, ವಿಷ್ಣು ಗಳೆಲ್ಲವನ್ನೂ ತಳ್ಳಿ, ಹಿಡಿದ ಕಾರವನ್ನು ಸಾಧಿಸುವವರೇ ಧೀರರು. ಅವರೇ ಶೂರರು, ಅವರೇ ಮಹಾತ್ಮರು. ಪಾಠಕರೆ! ಇಂತಹ ವಿಷಮಯಬೀಜವೂ, ಬೀಜದಾತೃವಾದ ವೃಕ್ಷವೂ, ಭಾರತವರ್ಷದಲ್ಲಿ ಕಡಿಮೆಯಾಗಿಲ್ಲ. ಇಂತಹ ವಿಷವೃಕ್ಷವನ್ನು ಬೆಳೆಯಿ ಸುತಿರುವ ಎಷ್ಟೊ ಗೃಹಗಳಿವೆ. ಇಂತಹ ಗೃಹಗಳಲ್ಲಿ ಏನಾಗದು? Gಉತ್ತಮಳಾದ ಸ್ತ್ರೀಗಿಂತ ಉತ್ತಮವಾದ ವಸ್ತುವಿರದಂತ ಕೆಟ್ಟ ಹೆಂಗಸಿ ಗಿಂತ ಕೆಟ್ಟ ವಸ್ತುವು ಈ ಸೃಷ್ಟಿಯಲ್ಲಿ ಇನ್ನೊ೦ದಿರದು.” ಎಂಬ ಪ್ರಶ್ನೆಗೆ ಸಮಂಜಸವಾದ ಉತ್ತರವು ನಿಮ್ಮ ಅನುಭವದಲ್ಲಿ ಕಂಡು ಬಂದಿರುವುದೆ? ಅದರಂತಹ ಕೆಟ್ಟ ವಸ್ತುವ, ಅದರಂತಹ ನೀಚಪದಾರ್ಥವು ಈ ಸೃಷ್ಟಿ ಯಲ್ಲಿಯೇ ಇರಲಾರದೆಂದು ನನಗೆ ತೋರುವುದು, ಆ ವಸ್ತುವಿನ ಹೃದಯವು ಪಾಷಾಣ; ಮನಸ್ಕೋ ಪಾಷಾಣ, ಆ ಪಾಷಾಣಮಯ ವಸ್ತುವಿನ ಅನಿರ್ವಚನೀಯ ಕೃತ್ಯಗಳಿಂದಲೇ ಎಷ್ಟೋ ಸಂವಾರ, ಎಷ್ಟೊ ಮನೆ, ಎಷ್ಟೋ ಮನೆತನ, ಎಷ್ಟೊರಾಜ್ಯ, ಎಷ್ಟೋ ದೇಶಕೋಶಗಳು ನಾಶವಾಗಿ ಹೋಗಿವೆ, ಅದರಿಂದಲೇ, ಆವತಾರ ಪುರುಷನಾದ ಶ್ರೀರಾಮ ಚಂದ್ರನು' ಕೂಡ ವನವಾಸವನ್ನು ಅನುಭವಿಸಿದನು. ಎಲೆ, ಅಬಲಾ ದೌರ್ಜನ್ಯವೆ, ನಿನ್ನ ಪ್ರಬಲತರ ಶಾಸನಕ್ಕಾಗಿ ಧಿಕ್ಕಾರ ಧಿಕ್ಕಾರ, ಧಿಕ್ಕಾರ!!!