ಪುಟ:ನಭಾ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 21 ತೃತೀಯ ಪರಿಚ್ಛೇದ. ( ಕೌತು ಕ ವ್ಯಾ ಪಾ ರ )


ನಭೆಯ ಅದೃಷ್ಟ ಸೂರನು ಅಸ್ತಂಗತನಾದನೆಂಬುದನ್ನು ಸೂಚಿ ಸುವಂತೆ ದಿನನಾಥನು ಅಸ್ತ್ರನಾದನು, ನಭೆಯು ಚಿಂತಾಂಗನೆಯ ಸಹ ವಾಸದಿಂದ ಮಲಿನವಾಗುತ್ತಿದ್ದುದನ್ನು ತೋರ್ಪಡಿಸಲು ದಿಶಾಂಗನೆಯು ಕೃಷ್ಣವರ್ಣವನ್ನು ತಾಳಿದಳು. ನಭೆಯ ತಾಯಿಯು ಮೃತಳಾಗಿ ಇಂದಿಗೆ ಹತ್ತು ದಿನಗಳು, ಒಂಭತ್ತು ದಿನಗಳು ಕಳೆದುಹೋಗಿವೆ. ರಾತ್ರಿ ಒಂಭತ್ತು ಘಂಟೆಗಳು ಹೊಡೆದು ಹೋಗಿದ್ದರೂ ಶಂಕರನಾಥನು ಮನೆಗೆ ಬಂದಿರಲಿಲ್ಲ. ಶರಾವತಿಯು ಸತಿಗೆ ಪ್ರಸಾದವನ್ನು ಅನುಗ್ರಹಿಸುವುದಕ್ಕಾಗಿ ಬಾಗಿಲಿನಲ್ಲಿಯೇ ನಿಂತಿರುವಳು. ನಭೆಯು ಅಂಗಳದ ಹಿಂಭಾಗದಲ್ಲಿದ್ದ ಕಿರುಮನೆಯಲ್ಲಿ ಕುಳಿತಿರುವಳು. ಅವಳ ಅಂಗದಲ್ಲಿ ಆಭರಣವಿದ್ದ ಕುರು ಹಾಗಲೀ, ಉತ್ಸಾಹ-ಶಾಂತಿಗಳಾಗಲೀ, ಕಂಡುಬರುತ್ತಿರಲಿಲ್ಲ. ತಾಯಿ ಯು ಮೃತಳಾದ ಮೂರನೆಯ ದಿನವೇ ಎಲ್ಲ ಸಂಪತ್ತನ್ನೂ ವಿಕ್ರಯ ಪತ್ರದ ಮೂಲಕ ಶರಾವತಿದೇವಿಯವರಿಗೆ ಸಮರ್ಪಿ ಸಿಯಾಯಿತು. ಮನೋನಿಗ್ರಹವೊಂದೇ ಅವಳ ಆಭರಣಸರ್ವಸ್ವವಾಗಿತ್ತು.

ಪಾಠಕ ಮಹಾಶಯ! ಧನಪಿಶಾಚಗ್ರಸ್ತರಿಗೆ ಮಾತಾ, ಪಿತೃ, ಗುರು, ಭ್ರಾತೃ, ಬಂಧುಗಳಲ್ಲಿ ಅವಶ್ಯಕವಾಗಿರಬೇಕಾದ ಮರ್ಯಾದೆಯಾಗಲೀ ನ್ಯಾಯಾನ್ಯಾಯ ವಿಮರ್ಶನಶಕ್ತಿಯಾಗಲೀ ಇರುವುದೇನು ? ಹಣದ ಮಹಾತ್ಮಯಿಂದಲೇ, ಅಪರಾಧಿಯು ನಿರಪರಾಧಿ: ಮೂಢನು ವಿದ್ಯಾ ವಂತ, ಧನಮಹಿಮೆಯು ಹೀಗಿರುವುದರಿಂದಲೇ ಹಣವೆಂದರೆ ಹೆಣವೂ ಬಾಡುವದು, ” ಎಂದು ಹಿರಿಯರಾಡುವರು. - ಇಂದಿನವರೆಗೂ ನಭೆಯ ತಾಯಿಗೆ ಆಪರಕ್ರಿಯೆಗಳು ಸಾಂಗವಾಗಿ ನಡೆದಿವೆ, ಇಷ್ಟಾದರೂ, ನಭೆಯ ವಿಷಯವಾದ ಪ್ರಸ್ತಾಪವು ಇನ್ನೂ ನಡೆದಿಲ್ಲ, ವಿಷವೃಕ್ಷವನ್ನು ಬಹು ಎಚ್ಚರದಿಂದ ಕಾಪಾಡಬಲ್ಲವಳಾದ ಶರಾ ವತಿಯ ಹೃದಯದಲ್ಲಿ, ನಿಗೂಢವಾಗಿದ್ದ ಆ ಬಲವದುದ್ದೇಶವು ಇಂದು