ಪುಟ:ನಭಾ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 23 ನಾದಕಾರಣ ಸಾವಕಾಶವಾಗಿದೆ. ಕ್ಷಮೆಯಿರಲಿ. ಏನುಬೇಕೆಂದಿದ್ದರೂ ಅದನ್ನು ಈಗ ಹೇಳಬಹುದು, ನಡೆಯಿಸಿಕೊಡಲು ಸಿದ್ಧನಾಗಿರುತ್ತೇನೆ, ಶರಾವತಿಯು ಮುಖವನ್ನು ತಿರುಗಿಸಿಕೊಂಡು ಹೇಳಿದಳು:-'ನಾನು ಹೇಳುವುದೇನು ? ನೀವು ಕೇಳುವುದೇನು ? ಹೇಳಿದುದಕ್ಕಾಯಿತಲ್ಲ ? ಶರಾವತಿಯ ಮಾತಿಗೆ ಶಂಕರನಾಥನು ಭ್ರಾಂತನಾಗಿ : ಇಲ್ಲ, ನೀನು ಹೇಳಿದಂತೆಯೇ ನಡೆಯಿಸಿಕೊಡುತ್ತೇನೆ. ” ಎಂದು ಹೇಳುತ್ತ, ಪಡಸಾಲೆಯಲ್ಲಿದ್ದ ಒಂದು ಕಿರುಮನೆಗೆ ಕರೆದುಕೊಂಡು ಹೋದನು. ನಡುವೆಯಲ್ಲಿಯೇ ನಿಂತು, ಈ ವ್ಯಾಪಾರವನ್ನು ನೋಡುತ್ತಿದ್ದ ನಭೆಯು ಮನಸ್ಸಿನಲ್ಲಿಯೇ ಆಲೋಚಿಸಿದಳು:-( ಏನು ? ಯಾರಲ್ಲಿ ಇಷ್ಟು ಆಗ್ರಹ ? ಸತಿಯ ಸರಸ್ವವಾದ ಪತಿಯಲ್ಲಿಯೆ ? ಪರದೇವತಾ ಸ್ವರೂಪನಾದ ಪತಿಯಲ್ಲಿ ಇಂತಹ ಆಗ್ರಹವೆ ? ರಾಮ ! ರಾಮ !! ಪ್ರಪಂಚದ ಸ್ಥಿತಿಯು ಎಷ್ಟು ಕಠೋರ ? ಇಂದಿನ ಆಚರಣೆಗಳು, ಮಾತು ಗಳು, ಇವನ್ನು ನೋಡಿದರೆ ನನಗೇನೋ ಶಂಕೆಯಾಗುತ್ತಿದೆ. ಇಂದು ಇವರು ನನ್ನ ವಿಷಯವನ್ನೆ ಕುರಿತು ಚರ್ಚಿಸಬಹುದು ; ಮಾತನಾಡ ಬಹುದು, ಆದುದರಿಂದ ನಾನು ಇವರ ಸಂಭಾಷಣೆಯನ್ನು ಕೇಳಲೇ ಬೇಕು. ” ಎಂದು ನಿಶ್ಚಸಿ ಬಾಗಿಲಿನಬಳಿಯಲ್ಲಿಯೇ ನಿಂತು, ಕೇಳಲು ಪಕ್ರಮಿಸಿದಳು, ಅವರ ಸಂಭಾಷಣೆಯು ಈ ಪರಿಯಾಗಿದ್ದಿತು, ಶಂಕರ:-ಅಹುದು, ಒಂಭತ್ತು ದಿನಗಳು ಕಳೆದುಹೋದುವು, ಆದರೇನು ? ಶರಾವತಿ:-ಮುಂದಿನ ಕೆಲಸಕ್ಕೆ ಏನು ಏರ್ಪಡಿಸಿರುವಿರಿ? ಶಂಕರ:-ಮುಂದಿನ ಕೆಲಸವೇನು ? ಶರಾವತಿ:-ಹುಡುಗಿಯ ವಿಚಾರ. ಶಂಕರ:-ಹುಡುಗಿಯ ವಿಚಾರವೇನು ? ಶರಾವತಿ:-ಅಲಂಕಾರ ವಿಸರ್ಜನ ಶಂಕರ:- ಉಳಿದಿರುವುದೇನು ? ದಿದೆ. ಶರಾವತಿ:-ತಲೆಯೊ ?