ಪುಟ:ನಭಾ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಸತೀಹಿತೈಷಿಣೀ. ಶಂಕರನಾಥನು ಭ್ರಾಂತನಾದನು. ಅವನ ತಲೆ ತಿರುಗಲಾರಂಭ ವಾಯಿತು, ಸುಮ್ಮನೆ ಕುಳಿತನು. ಶರಾವತಿ:-ಸುಮ್ಮನೆ ಕುಳಿತರೆ ಅರ್ಥವೇನು ? ಶಂಕರ:- ಹಾಗೆಯೇ ಇರಕೂಡದೇಕೆ ? ಶರಾವತಿಯು ಕೈಯಿಂದ ಹಣೆಯನ್ನು ಕುಟ್ಟಿಕೊಳ್ಳುತ್ತ ನಿಮ್ಮ ಆಚಾರವು ಹಾಳಾಗಲಿ ! ದೇವರು ನಿಮಗೇಕೆ ಇ೦ತಹ ಬುದ್ದಿಯನ್ನು ಕೊಟ್ಟನೋ? ಗಂಡನಿಲ್ಲದವಳಿಗೆ ಹಾಳು ಮೈಲಿಗೆ ಕೂದಲ:ಬೇರೆ ಕೇಡು.” ಶಂಕರ:- ಪಾಪ ! ಹುಡುಗಿಗೆ ಇನ್ನೂ ಚಿಕ್ಕ ವಯಸ್ಸು, ಅದರ ಯ-ತಾಯಿ, ಗಂಡ-ಇಬ್ಬರ ವಿಯೋಗದುಃಖದಿಂದ ಪರಿತಪಿಸುತಿ ರುವಳು, ಅವಳಿಗೆ ಈ ಕೂರಶಿಕ್ಷೆಯನ್ನೂ ಕೊಡುವುದೆಂತು ? ಶರಾವತಿ:-ಬೇಡವೆಂದು ಹೇಳುತ್ತೀರಿ, ನೀವು ಗಂಡಸರು ಹೇಗೆ ಬೇಕಾದರೂ ಮಾಡಬಹುದು, ನಮಗೆ ಒಳಗೆ ಬೇಗೆಹತ್ತಿಕೊಂಡು ಚೇಯುವುದಲ್ಲ ? ಶಂಕರ:-ಬೇಯುವುದೆಲ್ಲಿ ? ಬೇಗೆಯಾಗುವುದು ? ಶರಾವತಿ:-ತಿರುತಿರುಗಿ ಯಾವುದೆಂದು ಕೇಳುವಿರಾ ? ಹೆಂಗಸಿಗೆ ಅಲಂಕಾರಶಾವುದು ? ಕೂದಲಲ್ಲವೆ ? ಈಗಿನ ಅಂಗಸೌಷ್ಟವ, ವಯಃ ಪ್ರಾಬಲ್ಯಗಳಿಗೆ ಕೇಶಸೌಂದರವೂ ಸೇರಿದರೆ, ಮುಂದಿನ ವಿಲಾಸಗಳು ಹೇಗೆ ತಿರುಗಬಹುದೆಂಬುದನ್ನು ಆಲೋಚಿಸಿರಿ. ದುರಾಚಾರಕ್ಕೆ ಕೇಶ ರಾಶಿಯು ಬಲವತ್ತರ ಸಹಕಾರಿಯಲ್ಲವೆ ? ಹಾಗಾದರೆ ನಿಮ್ಮ ಕುಲಕ್ಕೆ ಕೊಡಲಿಯ ಕಾವು ಬಿದ್ದಂತಾಗುವುದಿಲ್ಲವೆ ? ಇಷ್ಟಕ್ಕೂ ಗಂಡನೇ ಹೋದ ಮೇಲೆ ಅದೇಕೆ ?ಆಚಾರಕ್ಕೂ ಇಲ್ಲ, ಧರ್ಮಕ್ಕೂ ಇಲ್ಲ | ಶಂಕರ:-ಆಗಲಿ, ಈಗಲೇ ಬೇಡ. ಅದಕ್ಕೆ ಬೇರೆ ಕಾಲವು. ಬರುವುದು. ಶರಾವತಿ:-ಈಗಲೇ ಏಕೆ ಆಗಬಾರದು ? ಕಾಲಬರುವುದಾವಾಗ ? ಶಂಕರ:-ಇನ್ನು ಐದಾರುತಿಂಗಳಾದರೂ ಹೋಗಲಿ. ಶರಾವತಿ:-ಈಗಲೇ ಆಗಬಾರದೇಕೆ ? ಶಂಕರ:-ನೀನೇಹೇಳು, ಅವಳ ಸ್ಥಿರಚರ ಆಸ್ತಿಗಳನ್ನೆಲ್ಲಾ ಕಿತ್ತು