ಪುಟ:ನಭಾ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 25 ಕೊಂಡು, ತಲೆಯನ್ನೂ ಬೋಳಿಸಿಕಳಿಸಿದರೆಂಬ ಅಪವಾದಕ್ಕೆ ಗುರಿಯಾ ಗಲೆ? ಸದ್ಯಕ್ಕೆ ಈ ಕೆಲಸವು ಬೇಡ, ನನ್ನಿಂದ ಈ ಕೆಲಸವಾಗಲಾರದು. ಶರಾವತಿಗೆ ಕೋಪವಧಿಕವಾಯಿತು, ಹೇಳಿದಳು:-(ಹಾಗಾದರೆ, ಅನುಭವಿಸಿರಿ ! ಹಿರಿಯರ ಕೀರ್ತಿಗೆ ಭಂಗತರುವ ಕೆಲಸಮಾಡುವಿರಿ. ನಿಮ್ಮ ದಯೆಯಿಂದಲೇ ಕುಲಕ್ಕೆ ಅಪವಾದ ಬರುವುದು, ತಿಳಿದಿರಲಿ ! ಶಂಕರ:-ಸುಮ್ಮನೆ ಕೂಗಿದರಾಯಿತೆ ?” ಶರಾವತಿಗೆ ಕೋಪವು ಮಿತಿಮೀರಿತು, ಅಲ್ಲಿಂದ ಎದ್ದು ನಾವು ಕೂಗಿಕೊಳ್ಳು ವರು, ನಾವು ಕೆಲಸಕ್ಕೆ ಬಾರದವರು, ತಾವೇ ಸರ್ವ ಜ್ಞರು, ಬೇಕಾದುದನ್ನು ಮಾಡಿರಿ, ” ಎನ್ನುತ್ತ ಹೊರಟುಹೋದಳು. ನಭೆಯು ಈ ಸಂವಾದವನ್ನು ಆಮೂಲಾಗ್ರವಾಗಿ ಕೇಳಿ ಪರಿತಪಿ ಸುತ “ ಹಾ, ವಿಧಾತ ! ನಿನ್ನ ವಿಲಾಸದ ಮಹಿಮೆಯು ಹೀಗೆಯೂ ಇರು ವುದೆ ? ಆಗಲಿ, « ಅವಶ್ಯಮನುಭೋಕ್ತವ್ಯಂ ಕೃತಂಕರ್ಮ ಶುಭಾ ಶುಭಂ” ಎಂಬಂತೆ ನಮ್ಮ ಕರ್ಮಕ್ಕೆ ತಕ್ಕ ಫಲವನ್ನು ನಾವೇ ಅನುಭವಿ ಸಬೇಕಲ್ಲವೆ ? ಹಾ ! ಹರಿ ! ಹರಿ !! ಏನು ಮಾಡಿದೆ ? ಎಂದು ಹೇಳಿಕೆ ಳ್ಳುತ್ರ ತನ್ನ ಸ್ಥಳಕ್ಕೆ ಹೊರಟುಹೋದಳು. ಚ ತು ರ್ಥ ಪರಿಚ್ಛೇದ. ( ಕ್ರೋಧಾನಲದೆ ಮಧ್ಯದಲ್ಲಿ ) -ಇ> da ಕಾಲಪುರುಷನು ಸ್ವತಂತ್ರನು ಹೇಗಿದ್ದರೂ ಕಾಲ ಕಳೆದು ಹೋಗುವುದು, ಅಳುತಿರಲು, ನಗುತಿರಲಿ, ಚಿಂತಿಸುತ್ತಿರಲಿ, ಸುಮ್ಮನಿರಲಿ, ಕೆಲಸಮಾಡುತಿರಲಿ, ಒಂದೆಡೆ ಮೂಲೆಯಲ್ಲಿ ಸಸ್ಯ ತಿಕ್ಕುತ ಕುಳಿತಿರಲಿ, ದುಃಖಪಡುತಿರಲಿ, ಸಂತೋಷದಿಂದ ಇರಲಿ, ಹೇಗಿದ್ದರೂ ಕಾಲಪುರು ಷನು ಆರನ್ನೂ ಲಕ್ಷಿಸದೆ ಎಲ್ಲರನ್ನೂ ಜಯಿಸಿ, ಮುಂದೆ ನಡದೇಬಿಡುವನುಅವನು ನಿಷ್ಪಕ್ಷಪಾತಿ. ( ಸೋಮಾರಿಯು ಕಡಿಮೆ, ಕೆಲಸಗಾರನು ಹೆಚ್ಚು,