ಪುಟ:ನಭಾ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 27 ಯುವಕನು ಬಂದು ನಿಂತನು. ಚಿಂತಾಂಗನಾಲಿಂಗನದಿಂದ ಪರವಶ ಳಾಗಿದ್ದ ನಭೆಯನ್ನೂ, ಶಿರೋಜಬಂಧನದ ವಿಧಾನವನ್ನೂ ನಿರುತ್ಸಾಹ ಸೋಚಕವಾದ ಅವಳ ಸ್ಥಿತಿಯನ್ನೂ ನೋಡಿ, ಆ ಯುವಕನು ಕನಿಕರ ದಿಂದ « ಅಯ್ಯೋ, ನಭಾ !!” ಎಂದು ಕೂಗಿ ಅಲ್ಲಿಯೇ ಇಲ್ಲ ನಾಗಿ ಕುಳಿತುಬಿಟ್ಟನು. ನಭೆಯು ಎಚ್ಚೆತ್ತು ಗಾಬರಿಯಿಂದ ಆ ಯುವಕನಿಗೆ ಶರಗಿನಿಂದ ಗಾಳಿಯನ್ನು ಬೀಸುತ್ತ ಅಣ್ಣಾ ! ಅಣ್ಣಾ !! ” ಎಂದು ಕೂಗಿದಳು, - ನಭೆಯ ಶೈತ್ಯೋಪಚಾರಗಳಿಂದ ಎಚ್ಚೆತ್ತ ಆ ಆಗಂತುಕನು ಕಣ್ಣೀ ರು ಸುರಿಸುತ್ತ ಕುಳಿತನು, ನಭೆಯು ಅಣ್ಣಾ ! ನಿರಂಜನ ! ಇದೇಕೆ ಹೆಂಗಸಿನಂತೆ ಅಳುವೆ? ನೀನೇ ಅತ್ತರೆ, ಮುಂದಿನ ಪರಿಣಾಮವೇನು ?” ಎಂದಳು. ನಿರಂಜನ:-ಸೌಭಾಗ್ಯದ ಅಧಿದೇವತೆಯಂತೆ ಪ್ರಕಾಶಿಸುತ್ತಿದ್ದ ನಿನ್ನನ್ನು ನೋಡಿದ್ದ ಈ ಕಣಗಳಿಂದಲೇ ಈಗ ಈ ರೀತಿ ನೋಡಬೇಕಾ ಯಿತಲ್ಲಾ-ನಭಾ ! ನಿರ್ಭಾಗ್ಯನಾದ ನನಗೆ ದೇವರೇಕೆ, ಈ ಗತಿಯನ್ನು ಕೊಟ್ಟಿರಬಹುದು? ನಭಾ:- ಅಣ್ಣಾ ! ಅಶಾಶೋಭಗಳನ್ನು ತೊರೆಯಬೇಕಾದುದು ಪ್ರತಿಯೊಬ್ಬರ ಕರ್ತವ್ಯವಲ್ಲವೆ ? ಇವುಗಳೆಲ್ಲವೂ ಸುಖವೆಂದೇ ತಿಳಿಯ ಬೇಕು, ಭಗವಂತನ ಲೀಲೆಯಿದು! ಸಮಾಧಾನದಿಂದ ಅನುಭವಿಸಬೇಕು. ನಿರಂಜನ:-ನಿನ್ನನ್ನು ನೋಡಿದರೆ, ನನಗೆ ಬಹು ಸಂಕಟವಾಗು ವುದು, ನೋಡಿ ಸಹಿಸುವುದಕ್ಕೆ ಅಸಾಧ್ಯವು. ನಭಾ:-ಅಣ್ಣಾ! ಸಹಿಸಲಾರೆನೆಂದರೇನು ? ಧೈರ್ಯ೦ ಸರ್ವತ್ರ ಸಾಧನಂ” ಎಂದಿಲ್ಲವೆ ? ಕರ್ತವ್ಯದಲ್ಲಿ ನಿರತರಾದವರು ಎಂತಹ ಕಷ್ಟ ಕಾಲವು ಪ್ರಾಪ್ತವಾದರೂ ಎದೆಗುಂದದೆ ಧೈರ್ಯದಿಂದ ಹಿಡಿದ ಕಾರ್ಯ ವನ್ನು ಸಾಧಿಸಬೇಕಲ್ಲವೆ? ಆ ವಿಷಯವಿರಲಿ, ನೀನು ಯಾವಾಗ ಬಂದೆ? ನಿರಂಜನ:- ಈಗಲೇ ಬಂದೆನು. ನಭಾ:-ಕಾಂತರಾಜಪೇಟೆಯಿಂದಲೆ? ಎಲ್ಲರೂ ಕ್ಷೇಮವಷ್ಟೆ ?