ಪುಟ:ನಭಾ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3) ಸತೀಹಿತೈರ್ಷಿಣಿ. ನಿರುವನು. ಆದರೆ, ನಿಮ್ಮವನು ಅರೆಗಳಿಗೆಯ ಸುಮ್ಮನಿರಳು, ನೀನು ಇಲ್ಲಿ ಒಂದು ದಿನವಾದರೂ ಇದ್ದರೆ, ಇಲ್ಲಿಯ ವಿದ್ಯಮಾನಗಳೆಲ್ಲವೂ ತಿಳಿದು ಬರುವುವು. - ನಿರಂಜನ:-ನಿನ್ನ ಸ್ಥಿತಿಗಳನ್ನು ತಿಳಿಯಲೋಸುಗವೇ ಬಂದಿರು ವೆನು, ಅದಕ್ಕಾಗಿಯೇ ಚಿಕ್ಕಪ್ಪನು ಕಳಿಸಿರುವನು. - ಇವರು ಈ ರೀತಿ ಮಾತನಾಡುತಿರುವಾಗಲೇ ಹಿತ್ತಿಲಕಡೆ ಬಾವಿಯ ಬಳಿ ಇಬ್ಬರು ಹೆಂಗಸರು ಏನೇನೋ ಮಾತನಾಡಿಕೊಳ್ಳುವಂತೆ ಕೇಳ ಬಂದಿತು. ಆ ಸುಳಿವನ್ನು ತಿಳಿದ ನಭಾ ನಿರಂಜನರು ಸುಮ್ಮನಾದರು. ಆ ಸ್ತ್ರೀಯರ ಸಂಭಾಷಣೆಯಲ್ಲಿ ಕೆಲವು ವಿಷಯಗಳು ಮಾತ್ರ ನಮ್ಮ ಕಿವಿಗೆ ಬಿದ್ದುವು. ಏನು, ಶರಾವತಿಯಮ್ಮನವರೆ! ಕೆಲಸವಾಯಿತೆ? " “ಏನು ಕೇಳಿದಿರಿ? ಕೆಲಸವೆ? ಎಂದಿಗೆ ಮುಗಿವುದು, ನನ್ನ ಹೆಣ ವೆತ್ತಿದಾಗ ! ಹಾಳು ಕೆಲಸವಿದ್ದೇ ಇದೆಯಮ್ಮ ! ನಾನು ಸತ್ತ ದಿನವೇ ಆಗುವುದು.” - “ ಸಾಯುವವರೆಗೆ ಎಲ್ಲರೂ ಕೆಲಸ ಮಾಡಲೇಬೇಕು. " * ಸುಮ್ಮನೆ ಕುಳಿತಿರುವ ಪುಣ್ಯಾತ್ಮರಿಲ್ಲವೇನಮ್ಮಾ? " “ಸುಮ್ಮನೆ ಯಾರು ಕುಳಿತಿರುವರು.” ( ಓದುಬರಹ ಬಲ್ಲ ರಂಡೆಯರು, ಸೊಗಸುಗಾರ್ತಿಯರು; ನಾವೂ ಓದುಬರಹ ಕಲಿತಿದ್ದರೆ, ಕುಳಿತಿರಬಹುದಾಗಿತ್ತು ! ಇಲ್ಲವಲ್ಲಮ್ಮ!” 'ಹಾಗೆಂದರೇನಮ್ಮ ? ನಿಮ್ಮ ಮಗಳು ವಿದ್ಯೆ ಕಲಿತರೂ, ಕೆಲಸ ಗಳನ್ನು ಮಾಡುತ್ತಿಲ್ಲವೆ? ಯಾರ ಮಗಳು? ನನಗಂತಹ ಛಾ ಗ್ಯವೆಲ್ಲಿಯದು?” (ಏಕಮ್ಮ? ನಭೆ ನಿಮ್ಮ ಮಗಳಿಗಿಂತ ಹೆಚ್ಚಾಗಿ ನೀವು ಹೇಳಿದಂತೆ ಕೇಳಿಕೊಂಡಿಲ್ಲವೆ??? “ ಏನಮ್ಮ ? ನೀವೂ ಸರಿಯೆ? ನಾನು ಪ್ರಾಣವನ್ನು ಬಿಡುತ್ತಿದ್ದರೂ ಅವಳು ನೋಡುವುದಿಲ್ಲ, ೨ « ಇನ್ನೂ ಹುಡುಗಿ, ತಿಳಿಯದು; ಕೆಲಸಗಳನ್ನು ಕಲಿಸಬೇಕು.”