ಪುಟ:ನಭಾ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32: ಸತೀಹಿತ್ಯ . ಅಂದೇ, ನಮ್ಮ ಮನೆಗೆ ಅಪವಾದವೂ ಅಪಕೀರ್ತಿಯ ತಪ್ಪಿದುದಲ್ಲ ವೆಂದು ಚೆನ್ನಾಗಿ ತಿಳಿದೆನು, ಮನೆ ಹಾಳಾಯಿತಮ್ಮ! ನನಗಂತೂ ನರಕ ದಲ್ಲಿದ್ದಂತೆಯೇ ಆಗಿದೆ.

  • ಅಯ್ಯೋ ಪಾಪ! ನಿಮ್ಮ ಹಣೆಯ ಬರಹ ! ಯಾರಿದ್ದರೇನು ? ನಿಮ್ಮ ಭಾಗಕ್ಕೆ ಯಾರೂ ಇಲ್ಲದಂತಿದೆಯಮ್ಮ !”

« ಯಾರಸುದ್ದಿ ನನಗೇಕೆ ? ಹಾಳಾಗಲಿ ! " ನಿರಂಜನನಿಗೆ ಕೋಪವು ಅತಿಯಾಯಿತು. ದೇಹವೆಲ್ಲವೂ ಕಂಪಿತ ವಾಗಿ ಬೆಮರಿತು, ಪೆಟ್ಟು ತಿಂದ ಸರ್ಪದಂತೆ ಬುಸುಗುಟ್ಟುತ್ತ ಮೇಲಕ್ಕೆದ್ದು C«ಹಾಳಾಗಲೇ? ಕೆಟ್ಟ ನಾಲಗೆ ! " ಎಂದು ಹೊರಹೊರಡಲನುವಾದನು. ನಭೆ ಅವನ ಕೈಯನ್ನು ಹಿಡಿದು ಕೇಳಿದಳು:- « ಅಣ್ಣಾ! ಇದೇನು? ಎಲ್ಲಿಗೆ ಹೋಗುವೆ ?” ನಿರಜಂನ:- ನಭೆ! ಬಿಡು. ಇನ್ನು ನನ್ನನ್ನು ತಡೆಯದೆ ಬಿಡು. ವೃಥಾಲಾಪದಿ೦ದ ಕಾಲವನ್ನು ಕೊಲ್ಲುವ ನಾಲಗೆಗೆ ತಕ್ಕ ಶಿಕ್ಷೆ ಕೊಡುವೆನು. ನಭಾ:- ಬಿಡುವೆನು; ನಿಧಾನಿಸು, ಈಗ ಬೇಡ. ನಿರಂಜನ:-- ಇಲ್ಲ; ನಾನು ನಿಧಾನಿಸಲಾರೆನು. - ನಭೆ ಕೈಯನ್ನು ಬಿಟ್ಟಳು; ನಿಟ್ಟುಸಿರು ಬಿಡುತ್ತೆ, “ ಅಣ್ಣಾ! ನನಗೆ ಹಿತವಾದುದನ್ನು ಮಾಡಲಾರೆಯಾ ?” ಎಂದಳು. ನಿರಂಜನನು ಕುಳಿತುಕೊಂಡುನಭಾ ! ನಿನಗೆ ಹಿತವಾದುದಾ ವುದು ?” ಎಂದನು. ನಭಾ:- ಹೇಳುವೆನು; ಈಗ ಸುಮ್ಮನಿರು. ನಿರಂಜನನು ನಿರುತ್ತರನಾಗಿ ನಭೆಯ ಮುಖವನ್ನು ನೋಡಿದನು. ಅವಳಾಮುಖದ ಅನಿರ್ವಚನೀಯವಾದ ಅಮೋಘಕಾಂತಿಯೊಂದನ್ನು ನೋಡಿ, ಪ್ರೀತಿವ್ಯಂಜಕ ಸ್ವರದಿಂದ ಕೇಳಿದನು:- “ ನಭಾ, ಹೇಳು; ಯಾವ ಶಕ್ತಿಯಿಂದ ಇಷ್ಟು ಯಾತನೆಗಳನ್ನೂ ತಡೆಯುತಲಿರುವೆ ?? ನಭೆ : ಅಣ್ಣಾ! ಶಕ್ತಿ ಯಾವುದು ? ಪತಿಯ ಅಂತ್ಯಾಜ್ಞೆಯನ್ನು ಭದ್ರವಾಗಿಟ್ಟಿರುವೆನು, ನೋಡು !” ಎಂದು ಉಡಿಯಲ್ಲಿಟ್ಟಿದ್ದ ಭರಣಿ