ಪುಟ:ನಭಾ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 33 ಯೊಂದನ್ನು ಹೊರಗೆ ತೆಗೆದು ತೋರಿಸಿದಳು, ಅದರಲ್ಲಿ ಅವಳ ಗಂಡನ ಕಾಗದವಿದ್ದಿತು, ಹೇಳಿದಳು:- ( ಅಣ್ಣಾ! ನನ್ನ ಸ್ವಾಮಿಯ ಅಂತ್ಯಕಾ ಲದ ಆಜಾ ಬಲದಿಂದಲೇ ಇವುಗಳನ್ನು ಅಲ್ಪವೆಂದು ಎಣಿಸುವೆನು, ಅನು ಗ್ರಹದ ಪ್ರಭಾವದಿಂದಲೇ ಇನ್ನೂ ಮುಂದೆ ಬರಬಹುದಾದ ಅಗಾಧ ನಷ್ಟ ಕಷ್ಟಗಳೆಷ್ಟಿದ್ದರೂ ಸಹಿಸುವೆನು. ಭಗವದನುಗ್ರಹವೂ, ಸ್ವಾಮಿಸಹಾ ಯವೂ ಗುರುಜನರ ಹಿತೋಪದೇಶವೂ, ಭ್ರಾತೃವರ್ಗದ ಪ್ರೋತ್ಸಾಹವೂ ನೆರವಾಗಿದ್ದರೆ, ಅಧೀರತೆಯಿಂದ ಎಂದೂ ಕರ್ತವ್ಯವನ್ನು ಕೆಡಿಸಿಕೊಳ್ಳು ವುದಿಲ್ಲವೆಂಬ ನಂಬುಗೆ ಚೆನ್ನಾಗಿದೆ !” - ನಿರಂಜನನ ಕಣ್ಣುಗಳಿ೦ದ ನೀರುಹರಿಯುತ್ತಿದ್ದಿತು, ಬಹು ಕಷ್ಟ ದಿಂದ ನಭೆಯನ್ನು ಒಮ್ಮೆ ನೋಡಿದನು, ಮತ್ತಷ್ಟು ನೀರು ಹೆಚ್ಚಿತು, ನಭಾ:- ನಿರಂಜನನನ್ನು ನೋಡಿ ಅಣ್ಣಾ! ನೀನು ಸ್ತ್ರೀಯರಂತೆ ಶೋಕವನ್ನು ವಹಿಸಿ, ಹೀಗೇಕೆ ಕಣ್ಣೀರು ಸುರಿಸುವೆ ? ವಿದ್ಯಾವಂತನಾಗಿ ಪ್ರಾಪಂಚಿಕ ಸ್ಥಿತಿಗಳನ್ನು ತಿಳಿಯದ ಮೂಢರಂತೆ ಅಳುವೆಯಲ್ಲ? ಮೂಢ ಳಾದ ನಾನೇ ವಿದ್ಯಾವಂತನಾದ ನಿನಗಿಂತ ಬುದ್ಧಿಶಾಲಿಯಾದಂತಾಯಿತು. ನೋಡು, ನಾನು ಎಷ್ಟು ಸಮಾಧಾನದಿಂದಿರುವೆನು ?” ನಿರಂಜನ: ಕಷ್ಟ ದಿಂದ ಮನಸ್ಸನ್ನು ಸಮಾಧಾನಪಡಿಸಿಕೊಂಡು ತಾಯಿಾ! ಅಳುವುದನ್ನು ಬಿಟ್ಟೆನು, ನಾನಿನ್ನು ಹೊರಡಬೇಕು. ನನ ಗಾಗಿ ಸ್ನೇಹಿತರು ಕಾದಿರುವರು, ಮತ್ತೆ ಬರಲಾಗುವುದಿಲ್ಲ. ಏನಿದ್ದರೂ ಈಗಲೇ ಹೇಳಿಬಿಡು, ಚಿಕ್ಕಪ್ಪನು ನೀನು ಹೇಳುವುದನ್ನೆಲ್ಲ ಚೆನ್ನಾಗಿ ಕೇಳಿಕೊಂಡು ಬರುವಂತೆ ಹೇಳಿರುವನು.” ನಭಾ:-ನಾನೇನು ಹೇಳಲಿ? ನನಗೇನೋ ಸಹಿಸಲಾರದಕಷ್ಟವಿಲ್ಲ. ಅಂತಹ ಕಷ್ಟ ಬಂದರೆ, ನಾನೇ ಹೊರಟುಬರುವೆನು. ನಿರಂಜನ:- ಹಾಗಾಗಿದ್ದರೆ, ಸದ್ಯದಲ್ಲಿ ನನ್ನಿಂದ ಆಗಬೇಕಾದು ದೇನೂ ಇಲ್ಲವೆ? ನಭಾ:- ಮತ್ತೇನೂ ಇಲ್ಲ; ನಾನು ವೃಥಾ ಕಾಲಹರಣಮಾಡಲಾ ರೆನು, ನನ್ನಂತಹ ವಿಯೋಗಿನಿಯರಿಗೆ ಉಚಿತವೂ ಇಹಜನ್ಮ ಧಾರಣೆಗೆ