ಪುಟ:ನಭಾ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಸತೀಹಿತೈಷಿ. ಮಾರ್ಥಿಕವನ್ನು ೦ಟುಮಾಡುವುದೂ ಆದ ಉಪಾಯಸಾಧನವು ನಿನಗಾವು ದಾದರೂ ತಿಳಿದಿದ್ದರೆ ಹೇಳು. ನಿರಂಜನ:- ತಾಯಿ ! ಸದ್ರೋಧಾಮೃತವನ್ನು ೦ಟುಮಾಡುವ ಸದ್ದಂಥಸಮಾಲೋಚನೆಯೊಂದಲ್ಲದೆ, ನಿಮ್ಮಂತಹರಿಗೆ ಮತ್ತಾವುದೂ ಉಚಿತವಾದುದಿಲ್ಲವೆಂದು ತಿಳಿ. ನಭಾ:-ನನಗೆ ಹೇಗೆತಾನೇ ಸಾಧ್ಯವಾಗುವುದು? ನಿರಂಜನ:-ಎಲ್ಲವೂ ಸಾಧ್ಯವಾಗುವುದು, ನಭಾ ! ಈಗಣ ವ್ಯಾ ಸಂಗವೆಂಬುದು ಕೇವಲ ಭಯಂಕರವೇ ಆಗಿರುವುದಲ್ಲದೆ, ವಿದ್ಯಾವ್ಯಾಸಂ ಗವಾಗಿರುವುದಿಲ್ಲ, ಆ ವಿದ್ಯಾಭ್ಯಾಸವಾಗಲಿ ಅದರ ಫಲವಾಗಲಿ ನಿನಗೆ ಬೇಡ, ಅಂತಹ ವಿದ್ಯಾ ಪಾರಂಗತರಾದ ಅನೇಕ ಮಂದಿ ಸ್ತ್ರೀಯರು ಸಮಾಜಸುಧಾರಣೆ, ದೇಶೋದ್ಧಾರಕಾರ್ಯಗಳಿಗೆಂದು ಹೊರಹೊರಟು ನಾಗರಿಕತೆಯನ್ನೂ ದೇಶವನ್ನೂ ನಾಶಮಾಡುತಿರುವರೆನ್ನ ಬಹುದು. ಈಗ ಸುಶಿಕ್ಷಣವು ಮಲಿನವಾಗುತದೆ, ಬಾಲ್ಯದಲ್ಲಿ ಸುಶಿಕ್ಷೆಯಿಲ್ಲದೆ, ವಿದ್ಯಾ ಫ್ಯಾಸವು ವಿಪರೀತವಾಗಿ ಪರಿಣಮಿಸುತಿರುವುದು, ಮಾಡತಕ್ಕುದೇನು? ಆದರೂ ..೦೦೦೦೦೦೦••••••• ನಭೆಗೆ ಪ್ರಪಂಚದ ಸ್ಪಿತಿಯ, ಸ್ವಲ್ಪ ಮಟ್ಟಿಗೆ ಗೊತ್ತು; ಅವಳು ಸಂಕಟದಿಂದ ಹೇಳಿದಳು:- ಅಣ್ಣಾ! ನನಗಂತಹ ವಿದ್ಯೆ ಆವಶ್ಯಕವಿಲ್ಲ. ಈವರೆಗಿನ ಬಾಲ್ಯದ ಸುಶಿಕ್ಷಣವು ಹೃದಯದಲ್ಲಿ ದೃಢವಾಗಿರುವುದು. ಹಿಂದಿನ ವಿದ್ಯಾಭ್ಯಾಸವು ಮುಂದಿನ ಮಾರ್ಗಕ್ಕೆ ಸಹಕಾರಿಯಾಗಿದ್ದರೆ, ಸಾಕಾಗಿದೆ. ಸ್ತ್ರೀಜನಸಹಜವಾದ ಭಯ, ಚಾ ಪಲ್ಯ, ಅಭಿಮಾನ, ಅಸೊ ಯೆ, ದುಃಖಾದಿಗಳು ನಿಃಶೇಷವಾಗಿ; ಧೈರ್ಯ, ಸೈರ್ಯ, ಸ್ವಾರ್ಥ ತ್ಯಾಗ ದೃಢ ಸಂಕಲ್ಪ, ಮನಶ್ಯಾಂತಿ, ಸಂತೋಷಾದಿಗಳು ಮನದಲ್ಲಿ ಬೇರೂರಿ, ದೇಶಸೇವೆಯಲ್ಲಿ ಮುಂಬರಿದು ಬಂದು ನಿಲ್ಲುವಂತಾಗುವ ವರೆಗೂ ನಾನು ಜನಗಳ ದೃಗೌಪಥಕ್ಕೆ ವಿಶೇಷವಾಗಿ ಬೀಳಲಾರೆನು, ಸದ್ಯದಲ್ಲಿ ಅಂತಹ ಶಕ್ತಿ ನಿನ್ನ ಸತ್ ಸರಾ ಮರ್ಶದಿಂದಲ್ಲದೆ ಮತ್ತೇತರಿಂದಲೂ ಸಾಧ್ಯವಾಗ ಲಾರದೆಂದು ನಂಬಿರುವೆನು.” ನಿರಂಜನ:- ತಾಯಿ, ಹಾಗೆಯೇ ಮಾಡು, ನನ್ನ ಕೈಯಲ್ಲಾ