ಪುಟ:ನಭಾ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಭ. 35 ಗುವ ವರೆಗೂ ನಾನು ನಿನಗೆ ಸರಿಯಾದ ಉತ್ತೇಜನವನ್ನು ಕಲ್ಪಿಸಿಕೊಡು ತಿರುವೆನು, ಆದರೆ, ನೀನು ಎಲ್ಲಿಯವರೆಗೆ ಈ ಕೊಲೆಪಾತಕರ, ಕೈಯ ಇರುವೆಯೋ ಅಲ್ಲಿಯವರೆಗೂ ನನಗೆ ಸಂತೋಷವಿಲ್ಲ. - ನಭಾ:- ಹೇಗಾದರೂ ಆಗಲಿ; ನೀನು ನನಗೆ ಪದೇ ಪದೇ ಸದ್ಧಂಥಗಳನ್ನು ಕಳುಹಿ ಕೊಡುತ್ತಿರಬೇಕೆಂಬುದೇ ನನ್ನ ಮುಖ್ಯ ಪ್ರಾರ್ಥನೆ. - ನಿರಂಜನ:- ಹಾಗೆಯೇ ಆಗಲಿ! ದೇವರು ನಿನಗೆ ಒಳ್ಳೆಯದನ್ನು ಮಾಡಲಿ! ಆದಷ್ಟು ಜಾಗ್ರತೆಯಾಗಿ ನಿನ್ನನ್ನು ಚಿಕ್ಕಪ್ಪನು ಕರೆಸಿಕೊಳ್ಳು ವನು, ಅವನು ಕರಸಿಕೊಳ್ಳುವ ವರೆಗೂ ಹೇಗಾದರೂ ಮಾಡಿ ತಾಳಿ ಕೊಂಡಿರು. ನಿರಂಜನನು ಈ ರೀತಿ ಹೇಳಿ ಹೊರಟನು. ಶರಾವತಿಯು ನೀರು ತರಲು ಹೊರಗೆ ಹೋಗಿದ್ದವಳು, ಬಾಗಿಲಕಡೆಗೇ ನೀರು ತರುತ್ತಿದ್ದಳು, ನಿರಂಜನನು ಶರಾವತಿಯನ್ನು ನೋಡಿದರೂ ನೋಡದವನಂತೆ ಮುಂದೆ ಹೊರಟನು. ಶರಾವತಿಯು ಮನೆಯೊಳಗೆ ಕಾಲಿಟ್ಟು ನಿಟ್ಟುಸಿರುಬಿಟ್ಟು, LI ಅದಾವನೆ, ಈಗ ತಾನೇ ಹೊರಗೆ ಹೊರಟುಹೋದವನು?” ಎಂದಳು. ನಭಾ:-ಅಮ್ಮ! ಇದೇಕೆ, ಅವನು ನಿರಂಜನನಲ್ಲವೆ? ಶರಾವತಿ:-ಆವಾಗ ಬಂದನೋ, ನನಗೇನು ಗೊತ್ತು? ನಭಾ:- ಈಗತಾನೇ ಬಂದನಂತೆ! ಶರಾ:- ಅದೇಕೆ, ಹೊರಟುಹೋದ? ನಭಾ:-ಸ್ನೇಹಿತರು ಕಾದಿರುವರಂತ; ಅದಕ್ಕೆ ಹೊರಟು ಹೋದ! ಶರಾ:- ಅದೇನು? ನನ್ನನ್ನು ಕಂಡರೂ ಮಾತನಾಡಿಸದೆ ಹೋಗು ವಷ್ಟು ದ್ವೇಷ? ನಭಾ:- ನಾನೇನು ಬಲ್ಲೆ? ದ್ವೇಷವೆಂದರೇನು? ಏಕೆ? ಶರಾ:- ನಾನೇನುಬಲ್ಲೆ ! ನಿಮ್ಮ ಗುಣವನ್ನು ನಾನು ಚೆನ್ನಾಗಿ ಬಲ್ಲೆ ನೆ! ಅವನು ಹೇಗೆ ಬೇಕಾದರೂ ನಡೆಯಲಿ; ನನಗಿರುವ ಅಭಿಮಾ ನವು ಹೋಗುವುದೇನು? ಕರೆ, ಒಂದುಸಲ ನೋ ಡಿಯಾದರೂ ಸಂತೋಷ ಪಡುವೆನು.