ಪುಟ:ನಭಾ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 31 ಶರಾವತಿ:-ಏನು, ತಂದೆತಾಯಿಗಳಲ್ಲಿ ಕೆಲಸವಿಲ್ಲವೊ ? ತಂಗಿ ಯಲ್ಲಿ ಬಹು ಕಾರ್ಯವೋ ? ನಿರಂಜನ:- ಎಲ್ಲವೂ ತಮ್ಮ ಪ್ರನಾದ! ಶರಾವತಿ:- ವಿದ್ಯಾವಂತನಾದುದರಿಂದಲೇ ಇಷ್ಟ ಅಹಂಕಾರವೆ? ನೀವೆಷ್ಟು ನೆಗೆದುಬಿದ್ದರೂ ಪೂರ್ವಿಕರ ಪಾಂಡಿತ್ಯ ನಿಮಗೆಲ್ಲಿ ಒರಬೇಕು? - ನಿರಂಜನ:- ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನು ಕಾಡುಪಾಲು ಮಾಡಲು ಅಂಜದೆ, ಸಾಕಿ ಸಲಹಿದ ಹುಡುಗಿಯರನ್ನು ದ್ರವ್ಯಾಖೆಯಿಂದ ಜೀವಶವಕ್ಕಾದರೂ ಕೊಡಲೊಪ್ಪನ ಪರಮಪಾಂಡಿತ್ಯವ- ಈಗಿನ ಪ್ರಪಂಚವನ್ನೆಲ್ಲ ಭ್ರಾತೃಭಾ ನದಿಂದ ನೋಡಬೇಕೆಂಬುವ ನಾಗರಿಕರ ಪಾಂಡಿತ್ಯಕ್ಕೆ ಸಮವಾಗುವುದೆ? ಶರಾವತಿ:- ನಿಮ್ಮ ವಿದ್ಯೆ ಹಾಳಾಗಲಿ! ಹಾಳು ಸುದ್ದಿಯಿಂದ ನನ ಗಾಗುವುದೇನು ? ಬಂದವನು ನಿನ್ನ ತಂದೆಯನ್ನು ನೋಡುವೆಯೊ? ನೋಡುವುದಿಲ್ಲವೊ? ನಿರಂಜನ:-ಹೊತ್ತಾಯಿತು; ಕೆಲಸವಿದೆ. • ಶರಾವತಿ:-ಊಟವನ್ನಾದರೂ ಮಾಡಿಕೊಂಡು ಹೋಗು. ನಿರಂಜನನು:-(ನನಗಾಗಿ ವೃಥಾ ಕಷ್ಟ ಪಡಬೇಕಾಗಿಲ್ಲ. ನಾನು ಮತ್ತೊಮ್ಮೆ ಬಂದಾಗ ಊಟಮಾಡಿಯೇ ಮಾಡುವೆನು. ಈಗ ಹೊರಡು ವೆನು.” ಎಂದು ಹೇಳುತ್ತ ಹೊರಟುಹೋದನು. ಶರಾವತಿಯು ಕ್ರೋಧಾನಲಮಧ್ಯದಲ್ಲಿ ನಿಂತು ಸಂತಪಿಸುತ್ತ, ಮೈ ಮುರಿದು, ಏನು ಕೇಡಗಾಲದ ಹುಡುಗರು? ಎಷ್ಟು ದುರಹಂಕಾರ? ಮುಖವನ್ನು ನೋಡಿದರೆ, ದೇಹವೆಲ್ಲ ಉರಿದುಹೋಗುವುದು ಹಡೆದ ತಂದೆ ಹುಲ್ಲುಕಡ್ಡಿಗಿಂತ ಕಡೆ !” ಎಂದು ಮುಂತಾಗಿ ಹೇಳಿಕೊಳ್ಳುತ್ತೆ ಪಾಕಶಾಲಾಭಿಮುಖಳಾದಳು.