ಪುಟ:ನಭಾ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

39. ನಭಾ. ಶಂಕರ:- ಹಾಗೆಂದರೇನು ? ಅವನು ಹೇಳಿದುದನ್ನು ಸರಿಯಾಗಿ ಹೇಳಬಾರದೆ ? ಶರಾವತಿಯು ನಭೆಯ ಕಡೆಗೆ ತಿರುಗಿ “ ಏನೆ ! ಅವನೇನು ಹೇಳಿ ದನೆ ? ?” ಎಂದಳು. ನಭಾ:-- ಅವನಿಗೇನೋ ಕೆಲಸವಿದ್ದುದರಿಂದ ಸ್ನೇಹಿತರೊಡನೆ ಬಂದಿದ್ದನಂತೆ! ಅವರು ಕಾದಿದ್ದರಿಂದ ಹೊರಟುಹೋದನು. ಶಂಕರ:- ಊಟಕ್ಕೇನು ಮಾಡುವನಂತೆ ? ನಭಾ:- ಸ್ನೇಹಿತರೊಡನೆ ಇರುವಾಗ ಊಟಕ್ಕೇಕೆ ಚಿಂತೆ ? ಶಂಕರ:- ಹಿಂದಿರುಗಿ ಹೋದನೋ ? ನಭಾ:- ಸಾಯಂಕಾಲ ಹೊರಡುವನಂತೆ ! ಶಂಕರನಾಥನು ಹಸಿದಿದ್ದನು, ಹಸಿದ ಹಾರುವನ ಬುದ್ದಿ ಸ್ಪಿತಿಯ « ವರ್ಣಿಸಲಸಾಧ್ಯ ! ಅವನು ಸ್ವಭಾವತಃ ಕೋಪಿಷ್ಠನಾದರೂ ಪುತ್ರವ್ಯಾಮೋಹದ ಪ್ರೇರಣೆಯಿಂದ ಶಾಂತನಾಗಿ, “ ಈಗಲೇ ಎಲ್ಲಿರುವ ನೋ ನೋಡಿ ಕರತರುವೆನು. ಪಾಪ! ಇದೊಂದು ದಿನವಾದರೂ ನನ್ನ ಸಂಗಡ ಊಟಮಾಡಲಿ!” ಎಂದು ಮೇಲಕ್ಕೆದ್ದನು. ಶರಾವತಿಯು ಕಿಡಿಕಿಡಿಯಾಗಿ “ನೀವು ಬುದ್ಧಿಯನ್ನೆಲ್ಲ ಟ್ಟಿರುವಿರಿ? ಜ್ಞಾನವಿದೆಯೋ ಇಲ್ಲವೋ ? ಮಾನಮರ್ಯಾದೆಗಳೇ ತಿಳಿಯದ ಮೇಲೆ ಅವನು ಇದ್ದರೇನು ? ಸತ್ತರೇನು ? ಮನಸ್ಸಿಗೆ ಬಂದಂತೆಲ್ಲ ಬಗುಳಿ ಹೋದ ಆ ನಾಯಿಯನ್ನು ಹುಡುಕಿಕೊಂಡು ಹೋಗುವುದಂತೆ ! ನಾಚಿ ಕೆಯಿಲ್ಲವೇ? ” ಎಂದು ಆರ್ಭಟಿಸಿದಳು. - ನಭೆಗೆ ಸ್ವಲ್ಪ ಕೋಪಬಂದಿತು. ಆದರೂ ಸಮಾಧಾನ ಮಾಡಿ ಕೊಂಡು, 'ಅಮ್ಮ! ನೀನು ದೊಡ್ಡವಳು, ಅವನೆಷ್ಟೇ ಆದರೂ ಚಿಕ್ಕ ವನು, ಅವನು ತಿಳಿಯದೆ ಒಂದೆರಡು ಮಾತಾಡಿದ್ದರೂ ನೀನು ಕ್ಷಮಿಸ ಬೇಕು, ಏನೂ ಇಲ್ಲದೆ ಅವನನ್ನು ನಾಯಿ ಸರಿಯೆಂದು ಸುಮ್ಮನೆ ಅಪ್ಪ ನನ್ನೇಕೆ ಸಿಟ್ಟಿಗೆಬ್ಬಿಸುವೆ ? ” ಎಂದಳು. ಶರಾವತಿ:- ನಾಯಿಯಷ್ಟೇಅಲ್ಲವೇ ? ಅದು ಹುಚ್ಚ ನಾಯಿ. ನಭಾ:- ಹಾಗೆಯೇ ಆಗಲಿ, ನಾಯಿಯಲ್ಲಿರುವ ಸ್ವಾಮಿಭಕ್ತಿ, ಇ?'