ಪುಟ:ನಭಾ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿಣೀ. ಕೃತಜ್ಞತೆ, ಸಂತ್ಯಸಂಧತೆಗಳೇ ಮೊದಲಾದ ಸಬಣಗಳಾದರೂ ಅವನಲ್ಲ ದೆಯೊ ಇಲ್ಲವೊ ? ಶರಾವತಿಯು ಪುನಃ ಅದೇ ಕುಪಿತಸ್ಕರದಿಂದ, « ಸಾಕು, ಬಿದೆ! ನಿನ್ನ ಹರಟೆ, ನಿನ್ನನ್ನು ಮಧ್ಯಸ್ಥಕ್ಕೆ ಇಲ್ಲಿ ಕರೆಯಲಿಲ್ಲ. ಹಾಕಿದ್ದನ್ನು ತಿಂದುಕೊಂಡು ಬಿದ್ದಿರಬೇಕಾದ ರಂಡೆಗೇಕೇ, ಈ ಸುದ್ದಿಗಳು ?” ಎಂದಳು. ಶಂಕರ;-ಹೋಗಲಿ, ಬಿಡಿ; ಅವನು ನಾಯಿಯಾದರೂ ಆಗಲಿ, ಕತೆಯಾದರೂ ಆಗಲಿ, ಹೇಗಿದ್ದರೂ ನನಗೆ ಮಗನೇ, ನಿನ್ನ ಇಷ್ಟದಂ ತಯೇ ಆಗಲಿ, ಈಗ ಊಟಕ್ಕೆ ಬಡಿಸು. ಊಟವಾಯಿತು. ಶಂಕರನಾಥನಿಗೆ ಮನಸ್ಸು ನಿಲ್ಲಲಿಲ್ಲ. ಎಲೆಯ ಡಕೆ ಪಾಕಿಕೊಂಡು, ನಿರಂಜನನು ಇಳಿದಿದ್ದ ಮನೆಗೆ ಹೊರಟನು. ಆದರೆ, ಅವನು ಅಲ್ಲಿರಲಿಲ್ಲ. ಹತಾಶನಾಗಿ ಮನೆಗೆ ಹಿಂದಿರುಗಿದನು. ಅವನ ಆಗಮನವನ್ನೇ ನಿರೀಕ್ಷಿಸುತ್ತ ಶರಾವತಿಯು ಬೀದಿಯ ಬಾಗಿಲಿ ನಲ್ಲಿಯೇ ನಿಂತಿದ್ದಳು, ಅವನು ಹೊಸಲನ್ನು ಮೆಟ್ಟಿದೊಡನೆಯೇ ಏನು? ನಿಮಗೂ ಆಯಿತೋ ? ?” ಶಂಕರನಾಥನು ಅಸಮಾಧಾನದಿಂದ (ಅವನು ಮನೆಯಲ್ಲಿಲ್ಲ.” ಎಂದನು. ಶರಾವತಿ:- ಎಲ್ಲಿ ಹಾಳಾಗಿ ಹೋದ? ಶಂಕರ:- ಎಲ್ಲಿಯೋ ಯಾರು ಬಲ್ಲರು ? ಶರಾವತಿಯ ಮುಖವು ಪ್ರಫುಲ್ಲವಾಯಿತು, ಅವಳು ಸ್ವಲ್ಪ ನಕ್ಕು 21 ಹೆಗಲಿ, ಬಿಡಿ, ಅದಕ್ಕೇಕೆ ಆಲೋಚಿಸುವಿರಿ ? ಅವನು ನಿಮ್ಮನ್ನು ಎಂದು, ಕಸಕ್ಕಿಂತ ಕಡಿಮಾಡಿದನೋ ಅಂದೇ ಅವನು ನಿಮ್ಮ ಭಾಗಕ್ಕೆ ಸತ್ಯಂತಲ್ಲವೆ ?” ಎಂದಳು. ಶಂಕರ:-ನೀನು ಹೇಗೆ ಬೇಕಾದರೂ ಹೇಳು. ನನ್ನ ಮನಸ್ಸೇನೋ ಸಮಾಧಾನವಾಗಿಲ್ಲ. ಶಂಕರನಾಥನು ಬಹು ವ್ಯಾಕುಲಿತನಾಗಿ ಅಂಗಳದಲ್ಲಿಯೇ ಕುಳಿತಿ ದ್ದನು. ಒಬ್ಬ ಮನುಷ್ಯನು ಒಂದು ಪತ್ರವನ್ನು ತೆಗೆದುಕೊಂಡು ಬಂದು