ಪುಟ:ನಭಾ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

tಳ'* ಸತೀಹಿತೈಷಿಣೇ. ಲೋಕದಲ್ಲಿ ಗಂಡಸರಿಗೆ ನತಾಪಿತೃ ಸೇವೆಗಿಂತ ಹೆಚ್ಚಿನದು ಮ ತವದೂ ಇಲ್ಲ. ಎಂದೆಂದಿಗೂ ತೀರಿಸಲಾಗದೆ ಮಾತೃಋಣವನ್ನು ಸ್ವಲ್ಪವಾದರೂ ತೀರಿಸಲು ನಾನು ಶಕ್ತನಾಗಲಿಲ್ಲ. ದೇವರಾಗಿರುವ ತಮ್ಮ ಸೇವೆಯೂ ಲಭ್ಯವಿಲ್ಲದಿರುವುದಕ್ಕಾಗಿ ಎಷ್ಟು ವಿಷಾದಿಸಲಿ' ಏನು ಮಾಡು ? ಭಾವೀಕರ್ತ ವ್ಯವನ್ನು ತಿಳಿದು ಹೇಳುವವರಾರು ? ಇನ್ನು ಮುಂದಾದರೂ ತಮ್ಮ ಸೇವೆ ದೊರೆತರೆ, ಸಂತೋಷದಿಂದ ಮಾಡಿ ಕೃತ ಕೃತ್ಯನಾದೇನು? - ಪೂಜ್ಯತಮ! ಆಗ್ರಹಗೊಳ್ಳದೆ, ಚಿರಕಾಲವೂ ನನ್ನ ಮನವು ಕರ್ತ ವ್ಯದಲ್ಲಿ ಕೆಟ್ಟು ಬಿದ್ದಿರುವಂತೆ ಪುತ್ರವಾತ್ಸಲ್ಯದಿಂದ ಕಟಾಕ್ಷಿಸಿ, ಅನುಗ್ರಹಿ ಸಬೇಕೆಂಬುದೇ ನನ್ನ ಮುಖ್ಯ ಪ್ರಾರ್ಥನೆ. ಇತಿ- ತಮ್ಮ ಪುತ್ರ, ನಿರಂಜನ” ನಭೆಯು ಪತ್ರ ವಾಚನವನ್ನು ಮುಗಿಸಿ ಮಡಿಸಿ ಕೆಳಗಿಟ್ಟಳು. ಶಂಕ ರನಾಥನು ದುಃಖವನ್ನು ತಡೆಯಲಾರದೆ ಮಗುವಂತೆ ಅತ್ತು ಬಿಟ್ಟನು. ಇದನ್ನೆಲ್ಲ ನೋಡುತ್ತಿದ್ದ ಶರಾವತಿಯು : ಇದೇಕೆ, ಹೀಗೆ ಅಳುವುದು? ಸತ್ತವರಿಗೆ ಅಳುವುದಕ್ಕಿಂತ ಹೆಚ್ಚಾಗಿದೆಯಲ್ಲ, ಗೋಳು ! ಏನು ಬಂದಿ ದೆಯೋ ಹಾಳುಸುದ್ದಿ?” ಎಂದು ಘರ್ಜಿಸಿದಳು. ಶಂಕರ:- ನಿನ್ನ ಮಾತು ಸಾಕು; ನಾನೇನೋ ಅಳುವೆನು. ಏನು ಮಾಡಲಿ? ಕೈಯ್ಯಲ್ಲಿರುವ ಹಣ್ಣು ಬಾಯಿಗೆ ಬಾರದು. - ಶರಾವತಿಯು ಬಹುಕೋಪದಿಂದ ಹೇಳಿದಳು:- ಹಾಗೋ ! ಕೈಯಲ್ಲಿ ರುವ ಫಲವನ್ನೇ ತಿನ್ನಿ, ಈಗಲೇ ನನ್ನ ನ್ನು ಕಳಿಸಿಕೊಟ್ಟು ಬಿಡಿ, ನಿಮ್ಮಭಾಗಕ್ಕೆ ನಾನು ಸತ್ತಂತೆಯೇ ತಿಳಿಯಬಹುದು.” ನಭೆಗೆ ಸಂಕಟವಾಯ್ತು, ಅವಳು ಹೇಳಿದಳು:- 14 ಅಮಾ, ನೀನು ಈಗ ಹೀಗೆ ಹೇಳಬಾರದು !” * ಶರಾವತಿಯು ಪುನಃ ಅದೇಕಂಠದಿಂದ ( ಸಾಕು, ಸಾಕು, ನಿಲ್ಲಿ ಸೆ! ನಿನ್ನ ನಾಲಗೆಯನ್ನು ಯಾರು ಕಾಣರು ? ನಿನ್ನ ವೇದಾಂತವನ್ನು ನಾನು