ಪುಟ:ನಭಾ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ. 43 ಬಲ್ಲೆ ! ನೀನು ಸರ್ವಜ್ಞಳು ಆದರೆ, ಆ ಪಾಳು ಮೈಲಿಗೆಯ ಕೂದಲನ್ನು ತೆಗೆಸಲು ಮಾತ್ರ ತಿಳಿಯದಲ್ಲವೆ ? " ನಭಾ:- ಸುಮ್ಮನೆ ಕೂಗಿದರೇನುಫಲ ? ಅಮ್ಮಾ: ವೈಲಿಗೆಯು ತಲೆಯ ಕೂದಲಿನಲ್ಲಿಲ್ಲ. ಅದಿರುವುದು ಮನಸ್ಸಿನಲ್ಲಿ. ಶರಾವತಿ:- ಅಹುದಹುದು ; ಶಾಸ್ತ್ರವೇ ಸುಳ್ಳು, ಶಾಸ್ತ್ರವನ್ನು ಬರೆದ ವರೂ ದಡ್ಡರು. ನಭಾ:- ಕಾಲ, ದೇಶ, ವರ್ತಮಾನಗಳಿಗನುಸಾರವಾಗಿ ಶಾಸ್ತ್ರವೂ ಪರಿವರ್ತಿಸುವುದು, ಆ ಕಾಲದವರಿಗೆ ಅದು ಅವಶ್ಯವಾಗಿದ್ದಿತು; ಈ ಕಾಲಕ್ಕೇಕೆ ? ಶರಾವತಿ:- ಈಗ ಶಾಸ್ತ್ರದಂತೆ ಆಚರಿಸುವರೆಲ್ಲ ಮೂಢರು. ಮುಠಾಳರು, ನೀನೇ ಬಹು ಬುದ್ಧಿವಂತೆ ! ನಭಾ:- ಈ ರೀತಿ ಮಾಡಬೇಕೆಂದು ಆವ ಶಾಸ್ತ್ರದಲ್ಲಿಯ ಇರು ವಂತೆ ಕಾಣೆ ! ಈ ಆಚಾರಗಳೆಲ್ಲವೂ ಸಂಪ್ರದಾಯಾನುಸಾರವಾಗಿ ಕೆಲ ವರು ತಮ್ಮ ಅನುಕೂಲಕ್ಕಾಗಿ ಆಚರಣೆಗೆ ತಂದಂತಹವ, ಅದರಿಂದ ಉಪಯೋಗವಾದರೂ ಏನೋ ? ಶರಾವತಿ: ಅಹುದಮ್ಯಾ- ಅಹುದು, ಆಚರಣೆಗೆ ತಂದವರು ಹುಟ್ಟರು, ನೀನು ಜಾಣೆ ! ನೀನೇಕೆ ಆಲೋಚನೆ ಮಾಡುವೆ ? ನೀನೇ ಬೇರೊಂದು ಧರ್ಮ ಶಾಸ್ತ್ರವನ್ನು ಬರೆದು ಆಚರಣೆಗೆ ತಂದುಬಿಡು. ನಭಾ:-ಅಮ್ಮಾ ! ತಲೆಯನ್ನು ಬೋಳಿಸಿಕೊಂಡ ಮಾತ್ರಕ್ಕೆ ಪವಿತ್ರ ರಾಗುವರೋ? ಶರಾವತಿ:- ಕೂದಲನ್ನು ತೆಗೆಸಲು ಇಷ್ಟವಿಲ್ಲೆಂದು ಹೇಳು ! ಅಷ್ಟನ್ನು ಹೇಳಲು ಎಷ್ಟು ತತ್ವಗಳನ್ನು ತಂದೊಡ್ಡವಿಯೆ? ಏನಾದರೂ ಮಾಡಿಕೊ ! ಹಾಳಾಗು !! ನಭಾ:- ಒಳ್ಳೇ ಹೆಂಗಸು ಒಳ್ಳೆಯವಳೇ! ಕೆಟ್ಟವಳು ಕೆಟ್ಟ ವಳೇ! ಒಳ್ಳೆಯವಳು ಮುಂಡನಾದಿಗಳಿಂದಲೇ ಸಭ್ಯಳಾಗಿರುವಳೆಂದು ಹೇಳು ವಂತಿಲ್ಲ, ಸತೀಧರ್ಮಪರಾಯಣೆಯರು ಸರ್ವದಾ ಪರಿಶುದ್ಧರೇ ಅಹುದು,