ಪುಟ:ನಭಾ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

44 ಸತೀಹಿತೈಷಿನೇ. ಶರಾವತಿ:- ಹೇಗಾದರೂ ಹಾಳಾಗಮ್ಮ !! ಯಾರಿಗೇನು ? ಹೇಳುವಂತೆ ಕೇಳುವುದಾದರೆ ಸರಿ; ಯಾವನಾದರೊಬ್ಬ ಬ್ರಾಹ್ಮಣನಿಗೆ ಒಂದು ಪಂಚಪಾತ್ರ ನೀರನ್ನಾದರೂ ಕೊಟ್ಟರೆ, ಜನ್ಮ ಸಾರ್ಥಕವಾದೀತು; ಅದಕ್ಷ ಅಧಿಕಾರವಿಲ್ಲದೆ, ಸಾಯುವೆ! ನಿನ್ನ ಹಣೆಯಬರಹ! ಆರೇನು ಮಾಡಿಯಾರು? ನಭಾ:--ಯುಕ್ತಾಯುಕ್ತ ವಿಚಾರವೂ ಪಾಪಾತ್ರ ತಾರತಮ್ಯವೂ ಇಲ್ಲದ ಕಸಟಾಚಾರನಿಸ್ಸಿಮನಾದ ಬ್ರಾಹ್ಮಣನಿಗೆ ನಾನು ನೀರು ಕೊಡು ವದೇ ಇಲ್ಲ. ಅಂತಹ ಬ್ರಾಹ್ಮಣನಿಗೆ ನೀರು ಕೊಡುವದಕ್ಕಿಂತ ಪವಿತ್ರ ವಾದ ಕಾರಗಳನ್ನು ಈ ಹಸ್ತವು ಮಾಡಬಲ್ಲುದು. ಶರಾವತಿಗೆ ಉತ್ತರಕೊಡಲಾಗಲಿಲ್ಲ. ಅವಳು ಗಂಡನ ಕಡೆಗೆ ತಿರುಗಿ ಹೇಳಿದಳು:- “ಏಕೆ ಮಾತೇ ಇಲ್ಲ. ಮಂಕುಬಡಿಯಿತೇನು? ನನಗೇನು ಹೇಳುವಿರಿ ? ?” ಶಂಕರ:- ಏಕೆ ? ಶರಾವತಿ:- ನಿಮ್ಮ ಮಗನನ್ನು ಕರೆಯಿಸಿಕೊಳ್ಳಿರಿ; ನನ್ನನ್ನು ಕಳಿಸಿ ಬಿಡಿರಿ. ಶಂಕರ:- ನಿನ್ನ ಮಾತಿನಂತೆ ನಡೆಯಲು ಮಗನನ್ನು ಎಂದೋ ತೊರೆದಾಗಿದೆ ನಿನ್ನನ್ನೂ ಕಳುಹಿ ನಾನು ಮಾಡಲೇನು ? ಶರಾವತಿ:- ಏನಾದರೂ ಮಾಡಿರಿ, ಯಾರಿಗೇನು? ಮಗಬೇಕೊ? -ನಾನುಬೇಕೆ ? ಶಂಕರನು ನಿಟ್ಟುಸಿರುಬಿಡುತ್ತೆ ನನಗೆ ನೀನೇ ಬೇಕು.” ಎಂದು ಮೆಲ್ಲಗೆ ಹೇಳಿ, ನಭೆಯನ್ನು ಕುರಿತು “ ನಭಾ ! ಮಶೀದತಿ, ಲೇಖಣಿ ಯನ್ನು ತೆಗೆದುಕೊ೦ಡು ಬಾರಮ್ಮ! ಅ ವನಿಗೊಂದು ಕಾಗದವನ್ನಾದರೂ ಬರೆಯುವೆನು?” ಎಂದನು, ನಭೆ ತಂದಿಟ್ಟಳು. ಶಂಕರನು ಲೇಖನಿಯನ್ನು ಹಿಡಿದು ಒಂದೆಡು ಪಂಜ್ಞೆಗಳನ್ನು ಬರೆದನು ಕಣ್ಣಿನಲ್ಲಿ ಧಾರಾಕಾರವಾಗಿ ನೀರು ಸುರಿ ಯಲಾರಂಭವಾಗಿ ಕೈನಡುಗಲಾರಂಭವಾಯ್ತು, ನಭೆಯು ಅವನ ಸ್ಥಿತಿ ಯನ್ನು ನೋಡಿ “ ಅಪ್ಪಾ! ಇದೇನು, ನೀನು ಹೀಗೆ ಅಳುವುದು ಸರಿ