ಪುಟ:ನಭಾ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈಷಿನೇ. ನರಕ ಬಾಧೆಗಳೂ ಇಹದಲ್ಲಿಯೇ ಆಗಬೇಕೆಂಬ ದೈವಸಂಕಲ್ಪವಿದೆಯೆಂದು ನಂಬಿ ಕಾಲಚಕ್ರವನ್ನು ತಳ್ಳುತಿದ್ದಳು. ನೆರೆಹೊರೆಯವರಲ್ಲಿ ಕೆಲವರು ಸಭೆಯನ್ನೂ ಮತ್ತೆ ಕೆಲವರು ಶರಾ ವತಿಯನ್ನೂ ನಿಂದಿಸುತಿದ್ದರು. ಸಭೆಯನ್ನು ನೋಡಲು ಅವಳ ಸಭೆಯ ರಾರಾದರೂ ಬಂದರೆ, ಅವರಿಗೆ ಚಂಡಾಲಸಹಸ್ರನಾಮವಾಗುತಿದ್ದಿತು. ಆದುದರಿಂದ ಯಾರೂ ಬರಲವಕಾಶವಿಲ್ಲ, ಮನೆಯಲ್ಲಾಗುವ ನಷ್ಟಗಳಿ ಗಲ್ಲಾ ನಭಯೇ ಕಾರಣ! ಎಲ್ಲ ಅಪವಾದಗಳಿಗೂ ನಭೆಯೇ ಗುರಿ! ಎಲ್ಲ ನಷ್ಟಕ್ಕೂ ನಭೆಯೇ ಮೂಲ! ಅನಿಷ್ಟಕ್ಕೆ ಶನೀಶ್ವರನೇ ಗುರಿಯಲ್ಲವೆ?” ನಭೆಗೆ ಕಾಲಹರಣಕ್ಕೂ ಮಾರ್ಗವಿಲ್ಲ. ನಿರಂಜನನು ಮಾತನಾ ಡಿಸಿ ಹೊರಟುಹೋದ ಇಪ್ಪತ್ತು ದಿನಗಳೊಳಗಾಗಿಯೇ ಈ ದುರವಸ್ಥೆ ಗಳೆಲ್ಲವೂ ಉಂಟಾದುವ, ನಭೆಯ ಈ ರೀತಿಯಾದ ದಾರುಣ ಮನೋ ರೋಗವು ಶಾರೀರಕರೋಗವಾಗಿ ಪರಿಣಮಿಸಿತು, ಜ್ವರಾದಿರೋಗ ಗಳು ಕಾಡಲುಪಕ್ರಮವಾದುವು ಹಾಸಿಗೆ ಹಿಡಿದು ಮಲಗಿಯೂ ಮಲ ಗಿದಳು, ಏನುಮಾಡಬಲ್ಲಳು? ಅಣ್ಣನಿಗೆ ಒಂದು ಕಾಗದವನ್ನು ಬರೆದು ಹಾಕಿದಳು ನಿರಂಜನನಿಗೆ ಕಾಗದವನ್ನು ಕಳುಹಿದ ದಿನವೇ ನಭೆಗೆ ಅತಿಶಯ ಜ್ವರ. ಜ್ಞಾನವಿಲ್ಲ. ಕೇಳುವವರಾರು? ಸಕೇಶಿ-ವಿಧವೆಪ್ರಪಂಚದಲ್ಲಿ ಇಂಥವರು ಇದ್ದು ಆಗುವ ಪ್ರಯೋಜನವಾದರೂ ಏನು? ಅಣುರೇಣುತೃಣಕಾಷ್ಟ ಪರಿಪೂರ್ಣನೂ ಅನಾಥನಾಥನೂ ದಯಾ. ಮಯನೂ ಆದ ಭಗವಂತನಲ್ಲದೆ ಇಂತಹರಿಗೆ ಬೇರೆ ದಿಕ್ಕಾರು? ಆತನೊ ಬ್ಲ್ಯನಲ್ಲದೆ ನಭೆಯನ್ನು ಕೇಳುವವರು ಮತ್ತಾರೂ ಇರಲಿಲ್ಲ.

  • ಮಹೋದಯರೆ! - ಎಷ್ಟಾದರೂ ಹೆಂಗರಳು.” ಎಂದಾಡುವರು ನೀವಾಗಿದ್ದರೆ, ಹೆಂಗಸಾದ ನಮ್ಮ ಶರಾವತಿಯನ್ನು ಜ್ಞಾಪಿಸಿಕೊಳ್ಳಿರಿ. ಅವಳಲ್ಲಿ ಎಷ್ಟು ಕೋಮಲಭಾವವಿದೆಯೆಂದು ನಿಮಗೆ ತೋರುವುದು. ಆದರೆ, ಶರಾವತಿಯನ್ನು ಮಾತ್ರವೇ ಹೀಗೇಕೆ ಕರೆಯಬೇಕು ? ಅಶಿಕ್ಷಿ ತರೂ ದುರಭಿಮಾನಪರರೂ ಆದ ಮಹಿಳೆಯರನ್ನೆಲ್ಲ ಹೀಗೆನ್ನ ಬಾರದೇಕೆ?

ವಿಧವೆ, ಸಕೇಶಿ, ಮೈಲಿಗೆಯ ಮಯ. ಸತ್ತರೆ ಅಳುವರಾ ದರೂ ಯಾರು ? ಇದ್ದರೆ, ಸಲವಾದರೂ ಏನು ? ಅವಳಿಗೆ ಸಾಯು