ಪುಟ:ನಭಾ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

50 ಸತೀಹಿತೈಷಿಣೀ ಮಗನಿಗಾಗಲೀ ತಿಳಿಸೀರಿ! ಜೋಕ, ಜೋಕೆ! ತಿಳಿಸಿದರೆ, ನನ್ನ ಮೇಲೆ ಆಣೆಯಿದೆ.?” ಎಂದಳು. ಇವರ ಸಂಭಾಷಣೆಯು ಮುಗಿವುದರೊಳಗಾಗಿಯೇ ಬೀದಿಯಲ್ಲಿ ಒಂದು ಗಾಡಿಯು ಬಂದು ಮನೆಯ ಬಾಗಿಲಿನಲ್ಲಿಯೇ ನಿಂತ ಶಬ್ದವಾ ಯಿತು, ಶರಾವತಿಯು ಓಡಿ ಹೋಗಿ ಹೊರಗೆ ನೋಡಿದಳು. ಗಾಡಿ ಯಿಂದ ಒಬ್ಬ ನಾಲ್ವತ್ತು ವರ್ಷ ವಯಸ್ಸುಳ್ಳ ಶ್ಯಾಮಲಾಂಗನು ಇಳೆದು ಮನೆಯೊಳಗೆ ಪ್ರವೇಶಿಸಲು ಸಿದ್ದ ನಾ ದನು. ಶರಾವತಿಯು ಒಳಗೆ ಓಡಿ ಬಂದು ಗಂಡನನ್ನು ಕುರಿತು < ಏನು ಮಾಡಿದಿರಿ? ಒಳಗೊಂದು ಹೊರ ಗೊಂದೋ? ಬಾಯಲ್ಲಿ ಹೇಳುವುದೊ೦ದಾದರೆ ಕೈಯಲ್ಲಿ ಮಾಡುವು ದೊ೦ದೋ? ನಿಮ್ಮ ಬುದ್ದಿಗೆ ಅಳಬೇಕು, ಕಾಗದವನ್ನು ಬರೆದಮೇಲೆ ಕಾ-ಗ-ದ ಬರೆಯಲೆ?” ಎಂದು ನನ್ನನ್ನು ಕೇಳಲು ನಾಚಿಕೆಬರಲಿಲ್ಲವೇ? ನೋಡಿ, ಅವನೇ ಬಂದ ಅನುಭವಿಸಿ.” ಎಂದಳು. ಶಂಕರನಿಗೆ ಆಶ್ಚರ್ಯವಾಯಿತು, ಅವನು ಏನು, ಚಿದಾನಂದನು ಬಂದನೆ? ಅವನು ತನ್ನ ಅತ್ತಿಗೆಯ ಸಂದಿನಿಂದ ಬರೆದ ಕಾಗದಗಳಿಗೆಲ್ಲಾ ನಾನು ಉತ್ತರ ಕೊಡದಿದ್ದುದಕ್ಕೂ, ಮನಿಯಾರ್ಡರುಗಳು ತಲ್ಪಿದುದಕ್ಕೆ ವರ್ತಮಾನ ಕೊಡದಿದ್ದದಕ್ಕೂ ಆಗ್ರಹಗೊಂಡು ಬಂದಿರಬಹುದು! ನಾನೇನೋ ನಿನ್ನಾಣೆಗೂ ಕಾಗದವನ್ನು ಬರೆಯಲಿಲ್ಲ ” ಎಂದನು, ಶರಾ ವತಿಯು ನಾನು ಸತ್ತರೆ, ನಿಮಗೇನು? ಆಣೆಯಂತೆ, ರೂಪಾಯಿಗೆ ಹದಿ ನಾರಾಣೆ!” ಎಂದಳು. ಇವಳಮಾತು ಪೂರೈಸುವುದರೊಳಗಾಗಿ ಚಿದಾ ನಂದನು ಒಂದು ಹಣ್ಣು ಔಷಧಿಗಳ ಬುಟ್ಟಿಯನ್ನು ಕೈಯಲ್ಲಿ ಹಿಡಿದು ಒಳ ಹೊಕ್ಕನು. ಶಂಕರನು ( ಒಳಗೆ ಬಾರಪ್ಪಾ! ಎಲ್ಲರೂ ಕುಶಲವಷ್ಟೆ ! ೫ ಎಂದನು, ಚಿದಾನಂದ:- ಒಂದೇ ಇದ್ದೇನೆ, ನೀವೆಲ್ಲರೂ ಕುಶಲಿಗಳಷ್ಟೆ? ಶರಾವತಿ-: 1: ನಮ್ಮ ಕುಶಲವೇನು? ನೀವಾದರೆ ಮಕ್ಕಳೊಂದಿ ಗರು, ನಿಮ್ಮ ಕ್ಷೇಮವೇ ಮುಖ್ಯ.” ಎಂದಳು. ಚಿದಾನಂದ:- “ ಎಲ್ಲರೂ ಕ್ಷೇಮ ” ಎಂದನು. ಶಂಕರ: -ಇದೇಕೆ ಹೀಗಿರುವೆ? ದೇಹಸ್ಥಿತಿಯು ಸರಿಯಾಗಿದೆಯಷ್ಟೆ?