ಪುಟ:ನಭಾ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 53 ಇದುವರೆಗೆ ಪೂರ್ವ ದಿಕ್ಕಿನ ಪಡಸಾಲೆಯಲ್ಲಿಯೇ ಚಿದಾನಂದನು ಕುಳಿತು ಮಾತನಾಡುತ್ತಿದ್ದನು; ಈಗ ಎದ್ದನು. ' ಶಂಕರನಾಥನು ಮುಂದೆಹೊರಟನು. ಚಿದಾನಂದನಿಗೆ ಆಶ್ಚರ್ಯ ವ್ಯಸನಗಳು ಒಮ್ಮೆಯೇ ಉತ್ಪನ್ನವಾದುವು. ಅವನು ಹಾಸಿಗೆಯ ಬಳಿಗೆ ಹೋಗಿ ನಭಾ! ನಭಾ!! ಮಗು!!” ಎಂದು ಮೆಲ್ಲನೆ ಕೂಗಿದನು. ನಭೆಯು, ಅರ್ಧೋತ್ಮೀಲಿತನಯನೆಯಾಗಿ ಮೆಲ್ಲನೆ ಅಸ್ಸುತಸ್ವರ ದಿಂದ ತಡೆವಸುತ್ತೆ ಏನು? ಯಾ ರು-” ಎಂದಳು. ಶಂಕರ:- ತಾರಾ! ನಿನ್ನ ಚಿಕ್ಕಪ್ಪ, ಚಿದಾನಂದನು ಬಂದಿರುವ “ನಮ್ಮಾ! ಚಿದಾನಂದ, ನಭೆ ಅದೇಸ್ವರದಿಂದ, “ ಎಲ್ಲಿ? ” ಎಂದಳು. ಚಿದಾನಂದನಿಗೆ ತಲೆತಿರುಗಿತು, ಕಣ್ಣುಗಳನ್ನು ಬಿಟ್ಟುಕೊಂಡಿ ದೃರೂ ಕಾಣಲಿಲ್ಲ. ಅವನಾ ಕಪೋಲಪ್ರಾಂತವು ಅಶ್ರುದ್ಧಿ ರೆಯಿಂದ ತೊಯು ದೇಹವಾದ್ಯಂತವೂ ನಡುಗಲಾರಂಭವಾಯಿತು, ತಲೆಯನ್ನು ಬಲಗೈಯಿಂದ ಬಲವಾಗಿ ಹಿಡಿದು ಕೆಳಗೆ ಕುಳಿತನು. ಶಂಕರನಾಥನು ( ಚಿದಾನಂದ! ಮಾತನಾಡಿಸು, ಜ್ಞಾನವಿದೆ.” ಎಂದು ಹೇಳಿ ಮರೆಯಲ್ಲಿ ನಿಂತಿದ್ದ ಹೆಂಡತಿಯ ಸಂಜ್ಞೆಯಂತೆ ಹೊರ ಹೊರಟನು. ಇದನ್ನು ತಿಳಿದ ಚಿದಾನಂದನಿಗೆ ದಿಮೆಯಾಯ್ತು, ಅವನು ನಿಷ್ಠುರ ಸ್ತ್ರೀಯರ ಸಾಮರ್ಥವನ್ನು ಚೆನ್ನಾಗಿ ತಿಳಿದನು. ಚಿದಾನಂದನು ಸಭೆಯ ತಲೆಯಬಳಿ ಕುಳಿತು (• ನಭಾ! ತಾಯಿ, ನಭಾ! ನಾನು, ಚಿದಾನಂದ; ನನ್ನೊಡನೆ ಮಾತನಾಡು.” ಎಂದು ಕಣ್ಣಿ `ರಿನಿಂದ ಹಾಸಿಗೆಯನ್ನು ನೆನೆಯಿಸುತ್ತ, ಎಡಗೈಯಿ೦ದ ತಲೆಯನ್ನು ಸವ `ರುತ್ತ, ಬಲಗೈಯಿಂದ ಕಣ್ಣು ಬಿಡಿಸಿದನು. ನಭೆಯು ನಿಜವಾಗಿಯೂ ಮಾತನಾಡಲು ಶಕ್ತಳಾಗಿರಲಿಲ್ಲ. ಹಾಸಿ ಗೆಹಿಡಿದ ದಿನದಿಂದಲೂ ಔಷಧವಿಲ್ಲ; ಅನ್ನವಿಲ್ಲ; ನೀರಿಲ್ಲ; ಆಹಾರವಿಲ್ಲ. ಆದುದರಿಂದ ದ್ರವಹೀನವಾದ ನಾಲಗೆಯನ್ನು ಮುಂದಕ್ಕೆ ಚಾಚಿದಳು. ಚಿದಾನಂದನು ರೋಗದ ಕಾಟಕ್ಕಿಂತ ಉದರದ ಕಾಟತೇ ಬಹಳವೆಂದು