ಪುಟ:ನಭಾ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸತೀಹಿತೈರ್ಷಿಣಿ ತಿಳಿದುಕೊಂಡನು. ಕೂಡಲೇ ಬುಟ್ಟಿಯಲ್ಲಿದ್ದ ಒಂದು ಗೊಂಚಲು ಚಪ್ಪರ ಪ್ರಾಕ್ಷಿಯ ಹಣ್ಣಿನ ರಸವನ್ನು ತೆಗೆದು ನಾಲಗೆಯ ಮೇಲೆ ಹಿಂಡಿದನು. ಪ್ರವಹೀನವಾಗಿ ಆ ನಾಲಗೆಯ ಅನ್ನನಾಳವೂ ರೆಸಾ ಸ್ವಾದನದಿಂದ ಶಕ್ತಿಯುತವಾದುವು, ಅವಳು ಸ್ವಲ್ಪ ಚೇತರಿಸಿಕೊಂಡು ಮುಖದಲ್ಲಿ ಆನಂದವನ್ನು ಪ್ರಕಾಶಪಡಿಸಿದಳು, ಈ ಭಾವವನ್ನು ಚಿದಾನಂದನು ತಿಳಿದ. ಮತ್ತೆ ಸ್ವಲ್ಪ ರಸವನ್ನು ಹಾಕಿ ಕೆಲವು ಹಣ್ಣುಗಳನ್ನು ತಿನ್ನಿ ಸಿದನು, ನಭೆ ಹರ್ಷ ದಿಂದ « ಕಕ್ಕ, ಆವಾಗ ಬಂದೆ? ” ಎಂದಳು. ಚಿದಾನಂದ:-ಅಮ್ಮಾ ! ಈಗತಾನೆ ಬಂದೆನೆ. ನಭಾ:- ನನ್ನ ಪತ್ರವು ಮುಟ್ಟಿದ ಕೂಡಲೆ, ಅಣ್ಣನು ವರ್ತಮಾನ ವನ್ನು ಕೊಟ್ಟಿರಬಹುದು. ಈ ಚಿದಾನಂದ;-ಅಹುದಮ್ಮ ! ಅವನ ಕಾಗದವು ಬಂದೊಡನೆಯೆ? ಒಂದು ದಿನ ರಜಾ ಬೇಕೆಂದು ಮೇಲ್ಪಟ್ಟ ಅಧಿಕಾರಿಗಳಿಗೆ ಬರೆದು ಹೊರಟು ಒ೦ದೆ. ಕಛೇರಿಯಿಂದ ಮನೆಗೆ ಕೂಡ ಹೋಗಲಿಲ್ಲ. ನಭಾ:-ನೀನು ಇಂದು ಬಾರದಿದ್ದರೆ, ಈ ವಮಾನದಲ್ಲಿಯೇ ನಿನ್ನ ನ್ನು ............ ಚಿದಾನಂದ:-ನಿಮ್ಮಣ್ಣನ ಪತ್ರವು ಬಾರದಿದ್ದರೆ, ನಿನ್ನ೦ತಹ ಪತ್ರೀರತ್ವ ವನ್ನು ಕಳೆದುಕೊಳ್ಳುತ್ತಿದ್ದೆನು. ದೇವರು ದೊಡ್ಡವನು. ಈ ಔಷಧನ್ನು ಕುಡಿ. ನಭಾ:- ಔಷಧವನ್ನೇಕೆ ಕುಡಿಯಲಿ ? ಚಿದಾನಂದ:-ದೇಹಧಾರಣೆಗಾಗಿ, ನಭಾ:- ಈ ದೇಹದಿಂದ ಸಾಧಿಸಬಹುದಾದ ಪುರುಷಾರ್ಥವೇನು? ಚಿದಾನಂದ:- ಹಾಗಲ್ಲ, ಕೇಳು; ಪ್ರಪಂಚದಲ್ಲಿ ಪರಮಾತ್ಮನಿಂದ ಸೃಷ್ಟಿಸಲ್ಪಟ್ಟಿರುವ ಅಣುರೇಣುತೃಣಕಾಷ್ಟವೂ ಉಪಯುಕ್ತವಾದುದೇ ಅದರಲ್ಲಿ ಪ್ರತಿಪ್ಪಾಣಿಯನ್ನೂ ಆವುದೋ ಒಂದು ಉದ್ದೇಶದಿಂದಲೇ ಸೃಷ್ಟಿಸಿರುವನೆಂದು ನಂಬು, ಆದುದರಿಂದಲೇ ಹಟಮಾಡಬೇಡ, ಕುಡಿ. - ನಭಾ:-ಅಪ್ಪ, ನಿನ್ನ ಮಾತನ್ನು ಮಾರಲಾರೆನು; ಆಗಲಿ,