ಪುಟ:ನಭಾ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 55 ಸಭೆ ಔಷಧವನ್ನು ಕುಡಿದಳು. « ಇಂಗ್ಲಿಷ್ ಔಷಧ, ಅದರ ಲ್ಲಿಯ ಬೂಟನ್ನು ಹಾಕಿಕೊಂಡು ಚಿದಾನಂದನು ಗಾಜಿನಬುಡ್ಡಿಯಲಿ ಹಾಕಿಕೊ೦ಡುಬಂದ: ಕೊಟ್ಟ, ಶೂದ್ರನೋ ಹೊಲೆಯನೋ ಮುಟ್ಟಿದ ನೀರು, ಥ! ಹುಟ್ಟಿದವರು ಸಾಯಲೇಬೇಕು, ಗಂಡಸು ರಂಡೆಯರಿಗೆ ಔಷಧವೇಕೆ ? ಅದರಲ್ಲಿಯ ಜಾತಿಯಾದರೂ ಕೆಟ್ಟು, ಇಂಗ್ಲೀಷ್ ಔಷಧವೇ ? ಹಾಳು, ಇವನೊಬ್ಬ ಮೃತ್ಯು ಬಂದಂತೆ ಬಂದ!” ಎಂಬಿವೇ ಮೊದಲಾದ ಆಲೋ ಚನಾತರಂಗಗಳು ಶರಾವತಿಯ ಹೃದಯದಲ್ಲಿ ಚಲಿಸ ಲಾರಂಭವಾದುವ್ರ, ಔಷಧವನ್ನು ತೆಗೆದುಕೊಂಡ ಅರ್ಧ ಘಂಟೆಯಾಗುವು ದರೊಳಗಾಗಿಯೇ, ಚಿದಾನಂದನು ಸಭೆಗೆ ಸ್ವಲ್ಪ ಹಣ್ಣುಗಳನ್ನು ತಿನ್ನಲು ಕೊಟ್ಟನು, ಅವನ್ನು ತಿಂದು ಚೇತರಿಸಿಕೊಂಡು ಮೆಲ್ಲನೆ ಎದ್ದು ಕುಳಿತಳು. ಶರಾವತಿಯು ಕಿರುಮನೆಯ ಹೊರಗೆ ನಿಂತಿದ್ದುದನ್ನು ನೋಡಿ. ( ಅಮ್ಮಾ! ಅಲ್ಲೇಕೆ ನಿಂತಿರುವೆ : ಒಳಗೆ ಬಾರಮ್ಮಾ ! ಎಂದಳು. ಶರಾವತಿ: -ರ್ಥ ! ಆ ಎಂಜಲು-ಮೈಲಿಗೆ! ಒಳಗೆ ತಲೆ ಹಾಕಿದರೆ, ಪ್ರಾಯಶ್ಚಿತ್ತವಾಗಬೇಕು, ಅದಾರ ಕೈಯಲ್ಲಾಗುವುದಮ್ಮ ? ಶಂಕರನಾಥನಿಗೂ ಈಗ ಪ್ರಕೈಯಿರಲಿಲ್ಲ. ಏನು ಮಾಡಬಲ್ಲನು ? ಚಿದಾನಂದನ ಸ್ಥಿತಿಯನ್ನು ವರ್ಣಿಸಲು ಖಂಡಿತವಾಗಿಯೂ ನಮ್ಮ ಲೇಖ ನಿಗೆ ಶಕ್ತಿ ಸಾಲದು. ಚಿದಾನಂದನು ಕರುಣಾಸ್ವರದಿಂದ « ಅಮ್ಮಾ ! ನಭ !! ನಮ ರಿಗೆ ಬರುವೆಯಾ ? ” ಎಂದನು. ನಭಾ:-ಕರೆದುಕೊಂಡುಹೋದರೆ...... ಚಿದಾನಂದ:-ಅಮ್ಮ ! ಅದಕ್ಕಾಗಿಯೇ ಬಂದಿರುವೆನು. ನಭಾ:- ಅಮ್ಮ, ಅಪ್ಪನೊ ? ಚಿದಾನಂದ:- ನಾನವರನ್ನು ಬಲಾತ್ಕರಿಸುವುದೂ ಇಲ್ಲ ನಿನ್ನನ್ನು ಬಿಟ್ಟು ಹೋಗುವುದೂ ಇಲ್ಲ; ನಭಾ:-ನಿನ್ನ ಇಷ್ಟ ಬಂದಂತೆ ಮಾಡು, ಹಾಗಾದರೆ, ಅವನ್ನು ತಿನ್ನು.” ಎಂದು ಕೆಲವು ಶೇಬಿನಹಣ್ಣು