ಪುಟ:ನಭಾ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಭಾ ಚಿದಾನಂದ:-ನನಗೆ ರಜಾ ಇಲ್ಲ. ನಭೆಯನ್ನು ಕರೆದುಕೊಂಡು ಈಗಲೇ ಹೊರಡಬೇಕು. ಶಂಕರ:- ಅವಳನ್ನೂ ಕರೆದುಕೊಂಡು ಹೋಗುವೆಯಾ? ಚಿದಾನಂದ:- ಸಂತೋಷದಿಂದ ಕರೆದೊಯ್ಯುವೆನು. ಶಂಕರ:--- ಏಕೆ? ಚಿದಾನಂದ:- ಅಲ್ಲಿಯ ಸ್ವಲ್ಪ ದಿನಗಳಿರಲಿ! ಶರಾವತಿ:- ಮಧ್ಯದಲ್ಲಿ ಪ್ರವೇಶಿಸಿ “ ಈಗ ನೀವು ಕರೆದೊಯ್ಯಲು ಬಾಧ್ಯರಾಗಲಾರಿರಿ.” ಎಂದಳು. ಚಿವಾನಂದನು ಕೋಪದಿಂದ ಕಣ್ಣುಗಳನ್ನು ಕೆಂಪಗೆ ಮಾಡಿಕೊಂಡು • ಅಹುದು ! ಬಾಯಿಯವರೆ! ತಾವು ನ್ಯಾಯಾನ್ಯಾಯವನ್ನು ಬಲ್ಲವರು' ತಾವೇ ಬಾಧ್ಯರು, ನಾನೇನೋ ಈಗ ಕರೆದುಕೊಂಡು ಹೋಗುವೆನು. ಆಬಳಿಕ ಬೇಕಾದುದನ್ನು ಮಾಡಬಹುದು.” ಎಂದನು. ಶರಾವತಿ:- ಅಹುದು, ನಿಜ, ಆಪತ್ಕಾಲದಲ್ಲಿ ಬೆನ್ನು ಕೊಟ್ಟು, ಈವರೆಗೂ ಸಂರಕ್ಷಿಸಿದುದಕ್ಕೆ ಸರಿಯಾದ ಉಡುಗೊರೆ, ಆಗ ಈ ದಯೆ ಎಲ್ಲಿಯೋ? ಚಿದಾನಂದ:- ಅಮ್ಮನವರೆ! ನಿರಂಜನನನ್ನು ಮನೆಯಿಂದ ಹೊರ ಡಿಸಿದಾಗಲೇ ತಮ್ಮ ಧರ್ಮ, ದಯಾ, ದ್ರಾಕ್ಷಿಣ್ಯಗಳು ಪ್ರಕಾಶವಾಗಿವೆ. ಹೆಂಗಸರೊಡನೆ ನನಗೇಕೆ ಮಾತು? ಈವೇಳೆಗೆ ಆಳು ಎಲ್ಲ ನಾಮಗ್ರಿಗಳನ್ನೂ ಗಾಡಿಯೊಳಗೆ ಇಟ್ಟಿದೆ. ನು, ಚಿದಾನಂದನು, ಶಂಕರ-ಶರಾವತಿಯರನ್ನು ಕುರಿತು, " ಅಣ್ಣಾ! ಹೊರಡುವೆನು, ಅತ್ತಿಗೆ ಹೊರಡುವೆನು. ” ಎಂದು, ನಭೆಯೊಡನೆ ಹೊರ ಟನು, ನಭೆ, ಚಿಕ್ಕಪ್ಪ- ಚಿಕ್ಕಮ್ಮನವರಿಗೆ ನಮಸ್ಕರಿಸಿ ಅಲ್ಲಿಂದ ಹೊರ ಟಳು. ಶಂಕರನು : ಅಮ್ಮಾ! ಎಲ್ಲಿಯಾದರೂ ಬದುಕಿದ್ದು, ಕುಲಕ್ಕೆ ಕೀರ್ತಿಯನ್ನು ತರಲು ಪ್ರಯತ್ನ ಪಡು, ನಿನ್ನಿಂದ ಅಪವಾದವು ಬರಲಾ ರದೆಂಬ ನಂಬುಗೆ ನನಗಿದೆ.” ಎಂದನು. ಚಿದಾನಂದನು ಸಭೆಯೊಡನೆ ಹೊರಟುಹೋದನು.