ಪುಟ:ನಭಾ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

60 ಸತೀಹಿತೈಷಿಣೀ ಈತನ ದಯೆ, ಔದಾರ್ಯ, ಸೌಜನ್ಯಗುಣಾಳೆಗಳು ಆರ್ತರನ್ನು ಸನ್ಮಾನಿಸು ತಿದ್ದಂತೆ ಅಧಿಕಾರಿಗಳನ್ನು ಆದರಿಸಲು ಅವಕಾಶಕೊಡುತ್ತಿರಲಿಲ್ಲ. ವಿಶೇಷ ವಿವರಣೆಯಿಂದೇನ.? ಒಂದೇಮಾತಿನಲ್ಲಿ ಹೇಳಬೇಕೆಂದರೆ, ಗೃಹಿಗಳಲ್ಲಿ ಆದರ್ಶಪುರುಷನೇ ಚಿದಾನಂದನೆ, ಗೃಹಿಣಿಯರಿಗೆ ಆದರ್ಶರಮಣಿಯೇ ರಮಾಮಣಿಯ ಆಗಿದ್ದರೆಂಬುವದರಲ್ಲಿ ತಿಲಾಂಶವೂ ಸಂಶಯವಿಲ್ಲ. ರಮಾಮಣಿಯ ಗೃಹರಾಜ್ಯ ಶಾಸನಕ್ರಮವೂ, ಅವಳಾ ಆಮೋಘ ತರ ಬಾಲ್ಯ ಶಿಕ್ಷಣ ವಿಚಕ್ಷಣೆಯ, ಗೃಹದಲ್ಲಿದ್ದ ಸಮಸ್ಯರೂ ಭಕ್ತಿ, ಪ್ರೀತಿ, ವಿನಯ, ಗೌರವಾದಿಗಳನ್ನು ಅಭ್ಯಾಸಿಸುವಂತೆ ಮಾಡಿದ್ದು ವು. ಇಂತಹ ಪವಿತ್ರಚರಿತೆಯಾದ ರಮಾಮಣಿಯ ಸಹಚರ್ಯೆಯು ತನ್ನ ವಿಚಾರಕ್ಕೊಳಪಟ್ಟವರು ಅಭದಯವನ್ನು ಹೊಂದುವಂತೆ ಮಾಡುವದ ರಲ್ಲಿ ಸಂಶಯವೇನು? ಈಕೆ, ನಭೆಯನ್ನು ತನ್ನ ಕಣ್ಣುಗಳಿಗೂ ಹೆಚ್ಚಾಗಿ ಪ್ರೀತಿಸಿ ಕಾಪಾಡುತ್ತಿದ್ದಳು. ನಭೆಯು ಪ್ರಾತಃ ಕಾಲ ಎದ್ದ ಕೂಡಲೆ, ಸ್ನಾನ'ದಿ ನಿತ್ಯ ಕೃತ್ಯಗಳನ್ನು ತೀರಿಸಿ, ಗೊತ್ತಾದ ಗೃಹಕಾರಗಳನ್ನು ಮಾಡಿ, ವಿದ್ಯಾಭ್ಯಾಸದಲ್ಲಿ ನಿರತ ಳಾಗುತ್ತಿದ್ದಳು, ಸಹೋದರರೊಡನೆ ಅವರವರಿಗೆ ನಿಯಮಿತವಾದ ಆಂಗ್ಲಭಾಷಾಭ್ಯಾಸದ ವಿದ್ಯೆಯನ್ನೂ ಅನಂತರ ಸಂಸ್ಕೃತ, ಕರ್ಣಾಟಕಾ ದಿ ಗ್ರಂಥಪತನವನ್ನೂ ಮುಗಿಸುತ್ತಿದ್ದಳು, ಆ ಬಳಿಕ ಗುರುಸನ್ನಿಧಿಯಲ್ಲಿ ತತ್ವಬೋಧಾಮೃತ, ಸೀತಾಮಾಹಾತ್ಮ, ಸಂತಚರಿತ್ರೆ, ವಿಷ್ಣು ಪುರಾಣಾದಿ ಗ್ರಂಥಶ್ರವಣ ಪಠನಾದಿಗಳು ನಡೆಯುತ್ತಿದ್ದುವು. ಅಲ್ಲದೆ, ರಮಾಮಣಿಯ ಬಲವದ್ಧಂಧನದಿಂದ ಅಲ್ಪಸ್ವಲ್ಪವಾಗಿ ಕಸೂತಿಯೇ ಮೊದಲಾದ ಕುಶಲ ಕಲೆಯನ್ನೂ ಕಲಿತಿದ್ದಳು. ಸಹೃದಯಪಾಠಕ ಮಹಾಶಯರೆ ! ಪ್ರಿಯಭಗಿನಿಯರೆ !! ಆವ ಅಭಗಿನಿಯು ಶಂಕರಪೇಟೆಯಲ್ಲಿ ಏಕಾಶನ, ಗುಪ್ತ ಗೃಹನಿವಸನ ಮಲಿನವಸ್ತಧಾರಣಾದಿಗಳಿಂದ ಮಾಲಿನ್ಯವನ್ನಾ೦ತಿದ್ದಳೋ-ಅವಳೇ ಈಗ ಶ್ಯಾಮನಗರದಲ್ಲಿ ಸೌಖ್ಯವಾಗಿರುವಳು. ಅವಳು, ಈಗ ಉಪವಾಸ, ಜುಗರ, ಕೇಶಾದಿಗಳೆಲ್ಲಕ್ಕೂ ಶಂಕರಪೇಟೆಯಲ್ಲಿಯೇ ಜಿಲಾಂಜಲಿಯನ್ನ ರ್ಪಸಿ, ಹೃದಯದಲ್ಲಿ ಸುಖಭೋಜನ, ನಿದ್ದೆ, ಸಂತೋಷಾದಿಗಳಿಗೆ ಎಡೆ