ಪುಟ:ನಭಾ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 61 ಕೊಟ್ಟಳು. ಪವಿತ್ರಹೃದಯ, ಪವಿತ್ರ ಆಶಯ, ಪವಿತ್ರ ಕೃತ್ಯ, ಪವಿತ್ರ ವಾಕ್ಯಗಳಿಗೆ ನಭೆಯು ತವರ್ಮನೆಯಾಗಿದ್ದಳು. ನಭೆಯ ಮನೋ ಧರ್ಮ ಕ್ಕೂ-ರಮಾಮಣಿಯ ಮನೋಭಾವಕ್ಕೂ ಎಲ್ಲಾ ಭಾಗದಲ್ಲಿಯೂ ಸಾಮರಸ್ಯವಿದ್ದಿತು. ಆದರೆ, ಒಂದು ವಿಚಾರದಲ್ಲಿ ಮಾತ್ರ ರಮೆಯ ಮನೋಗತವು ಭಿನ್ನವಾಗಿದ್ದಿತು ! ಅದೇನು ? ಹೇಗಾದರೂ ಮಾಡಿ ನಭೆಯನ್ನು ಪುನಃ ಸಂನಾರಚಕ್ರದಲ್ಲಿ ಸಿಕ್ಕಿಸಬೇಕೆಂಬುದೊಂದು ರಮೆಯ ಆಶಯವು ! ಆ ಆಶೆಯನ್ನು ಪೂರ್ತಿಗೊಳಿಸಲು ಪ್ರತಿಯನ್ನು ಅನೇಕವೇಳೆ ಪ್ರಶ್ನೆ ಮಾಡಿದ್ದಳು. ಅದು ನಿರರ್ಥಕವೆಂಬುದು ದೃಢವಾಗಿದ್ದರೂ ಪುನಃ ಪುನಃ ಪ್ರಕಾರಾಂತರದಿಂದ ಅವಳನ್ನು ಪ್ರಶ್ನೆ ಮಾಡದೆ ಬಿಡುತಿರಲಿಲ್ಲ. ಈ ವಿಚಾರದಲ್ಲಿ ಚಿದಾನಂದನ ಮನೋಭಾವವೇ ಬೇರೆ ಅವನು ವಿಷ ಯೋಪಭೋಗವೇ ಚಿರಸುಖಪ್ರದವಾದುದೆಂದು ನಂಬದಿದ್ದ ಕಾರಣ ದಿಂದಲೂ ಮಗಳು ಪುನರ್ವಿವಾಹಕ್ಕೆ ಅವಕಾಶಕೊಡುವದಿಲ್ಲವೆಂಬ ಅಂಶವನ್ನು ಚೆನ್ನಾಗಿ ತಿಳಿದಿದ್ದುದರಿಂದಲೂ ಅವಳ ಚಿರಸುಖದಾಯಕ ಮಾರ್ಗವನ್ನು ಹುಡುಕುತ್ತಿದ್ದನು. ಪಾಠಕ ಪಾಠಕಿಯರೆ ! ಪ್ರಾಯಃ ಈ ನಮ್ಮ ನಾಡಿನಲ್ಲಿ ಶರಾವತಿ, ಶಂಕರನಾಥರಂತಹರೇ ಹೆಚ್ಚು ! ಪತಿಪತ್ನಿಪ್ರೇಮವು ಚೆನ್ನಾಗಿ ನೆಲಸಿ ಗೃಹ ಕಾರವನ್ನು ನೆರವೇರಿಸುವಂತಹ ರಾಮಮಂದಿರಗಳು ಕೇವಲ ವಿರಳ ! ಹೀಗೆ ಕೆಲವು ಗೃಹಗಳಾದರೂ ಚಿದಾನಂದನಂತಹ ಗೃಹಿಗಳನ್ನೂ ರಮಾಮಣಿಯಂತಹ ಗೃಹಿಣಿಯರನ್ನೂ ಹೊಂದಿದ್ದ ಪಕ್ಷದಲ್ಲಿ ನಮ್ಮ ಧರ್ಮಭಗಿನಿಯರಾದ ಏತಂತುಗಳು ಇಂತಹ ಕಠೋರಬಾಧೆಯನ್ನನುಭ ವಿಸಬೇಕಾಗಿರಲಿಲ್ಲ. ಹೀಗೆ ವೃಫಾಸವಾದ ನಿಷ್ಟುರಾದಿಗಳಿಗೆ ಗುರಿಯಾಗಿ ನಿರಂತರವೂ ದುಃಖಭಾಜನೆಯರೆನ್ನಿಸಿ ಹೇಳಲಳವಲ್ಲದ ಕಷ್ಟ ನಷ್ಟಗಳನ್ನ ನುಭವಿಸುವುದನ್ನು ನೋಡಿನೋಡಿ, ವಿಲಾಸಪ್ರಿಯರಾಗಿ ನಲಿಯುವಂತಹ ದುಸ್ಥಿತಿಗೆ ಬರುತ್ತಿರಲಿಲ್ಲ. ಮತ್ತೂ ನಮ್ಮ ದೇಶಮಾತೆಯ ಅಂತಸ್ಕಾ ಪಕ್ಕ ಎಡೆಯಿರುತ್ತಿರಲಿಲ್ಲ. ಆಗಲಿ; ವಾತ್ರಾ ಪಾತ್ರ ವಿಚಾರದಲ್ಲಿಯೇ ಈ ಪರಿಚ್ಛೇದವನ್ನು ಮುಗಿಸಿದುದಕ್ಕಾಗಿ ಕ್ಷಮೆ ಬೇಡುವೆವು, ಆದರೂ ಇದರಲ್ಲಿ ಯ ವಿಷಯಗಳು ಉಪಯೋಗಕ್ಕೆ ಬಾರದಿರವು.