ಪುಟ:ನಭಾ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

62 64 ಸತೀಹಿತೈಷಿಣೀ ಅಷ್ಣ ಮ ಪ ರಿ ಚ್ಛೆ ದ. ( ಆನಂದಲಹರಿ. ) ಮಧ್ಯಾಹ್ನ ನಾಲ್ಕು ಘಂಟೆಯಸಮಯ; ಸೂರ್ಯನಾರಾಯಣನು ಪಶ್ಚಿಮದಿಯನ್ನು ಅಡರಲು ಉಪಕ್ರಮಿಸಿರುವನು. ನಭೆ ವಿದ್ಯಾ ವ್ಯಾ ಸಂಗದಲ್ಲಿ ಅನನ್ಯಮನಸ್ಕಳಾಗಿ ತನ್ನ ಕಿರುಮನೆಯಲ್ಲಿ ಕುರ್ಚಿಯಮೇಲೆ ಕುಳಿತಿರುವಳು, ಮನೆಯಲ್ಲಿದ್ದ ಉಳಿದವರೆಲ್ಲರೂ ತಮ್ಮ ತಮ್ಮ ಕಾವ್ಯದಲ್ಲಿ ನಿರತರಾಗಿದ್ದುದರಿಂದ ಆ ಚಿದಾನಂದನ ಗೃಹವು ವಿಶ್ರಾಂತಿ ಸಮಯದಲ್ಲಿ ದ್ದಂತೆ ಭಾಸವಾಗುತ್ತಿದ್ದಿತು. ನಭೆಯ ಪರವಶತೆಯು ಹಠಾತ್ ಲೋಪವಾಯಿತು, ಚಕಿತೆಯಾಗಿ ಏಳಲು ಪ್ರಯತ್ನಿ ಸಿದಳು; ಆದರೆ, ಆಗಲಿಲ್ಲ, ಏಕೆ? ಅಣ್ಣ ನಾದ ನಿರಂಜಿ ನನು ಹಿಂದುಗಡೆಯಿಂದ ಬಂದು ತಂಗಿಯ ಕಣ್ಣಗಳನ್ನು ತನ್ನೆ ರಡು ಕೈಗ ಳಿಂದಲೂ ಹಿಡದಿರುವನು. ಅವನ ಆನಂದಕ್ಕೆ ಪಾರವಿಲ್ಲ; ಅವನು ನಭೆಯೇನು, ಹೇಳುವಳೋ ಕೇಳಬೇಕೆಂದು” ಪರಿಚಯ ವನ್ನು ಕೊಡ ದೆಯೇ ನಿಂತಿದ್ದನು, ನಭೆ, ಕಣಗಳನ್ನು ಬಿಡಿಸಿಕೊಳ್ಳಲು ಬಹು ಪ್ರಯ ತಸಟ್ಟಳು; ಸಾಧ್ಯವಾಗಲಿಲ್ಲ. ಅವಳಿಗೆ ಮುಂದೆ ಸುಮ್ಮನಿರಲಾಗಲಿಲ್ಲ' ಕೋಧಾವೇಶದಿಂದ ಕೂಗಿದಳು:- ಚಿಃ! ಚಿಃ!! ರಾಜಶೇಖರ ಇದೇ ನಿದು? ಬಿಡು! ಬಿಡು!: ಇದೆಂತಹ ಹುಡುಗಾಟ!! ನೀನು ನನ್ನನ್ನು ಮುಟ್ಟಕೂಡದು! ಬಿಡು! ಬಿಡು!!” ನಿರಂಜನನು ಮತ್ತೂ ವಿನೋದದಿಂದ ಪ್ರತ್ಯುತ್ತರವನ್ನು ಕೊಡದೆ ಸುಮ್ಮನೆ ನಿಂತಿದ್ದನು. ನಭೆಗೆ ಕ್ರೋಧವ ಅತಿಯಾಯ್ತು; ಕಂಪಿತಸ್ವರದಿಂದ ಕೂಗಿದಳು:- « ಬಿಡುವುದಿಲ್ಲವೆ? ಇರಲಿ! ಅಮ್ಮಾ! ಅಮ್ಮಾ!!* ರಾಜಶೇಖರನು ನನ್ನ ಕಣ್ಣನ್ನು ಮುಚ್ಚಿರುವನು; ನೋಡೆ! ಅಮ್ಮಾ!! "