ಪುಟ:ನಭಾ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 63 ನಿರಂಜನನ ತಲೆತೂಗುತ್ಯ,ವ್ಯಂಗ್ಯಸ್ವರದಿಂದ ನಭಾ! ಕೂಗು. ಕೂಗು!! ನಾನೂ ಕೂಗುವೆನು” ಎಂದು ಹೇಳಿ (ಅಮ್ಮಾ! ರಾಜಶೇಖರ, ನಾನು ಹುಡುಗಾಟ!” ಎಂದು ಕೂಗಿದನು. ನಿರಂಜನನ ಸ್ವರವು ಕಿವಿಗೆ ಬಿದ್ದೊಡನೆಯೇ ಕಾರ್ಯತತ್ಪರಳಾಗಿದ್ದ ರಮಾಮಣಿ ಓಡಿಬಂದಳು; ಏನೇನೋ ಆಲೋಚನೆಗಳನ್ನು ಮಾಡುತ್ತಿ ದ್ದ ನಭೆಯ ಮನಸ್ಸು ಏನೋ ಒಂದು ವಿಧವಾಗಿ ಪರಿವರ್ತಿತವಾದುದು. ರಮಾಮಣಿಯು ವಿದ್ಯಮಾನವನ್ನ ವಲೋಕಿಸಿ ಕಿರುನಗೆಯಿಂದ " ರಾಜ ಶೇಖರ! ಬಿಟ್ಟು ಬಿಡಪ್ಪ! ” ಎಂದಳು. ನಿರಂಜನನು ನಗುತ್ತೆ ಕೈಯನ್ನು ತೆಗೆದು . ಇಗೋ: ರ ಜ ಶೇ ಖರ: " ಎಂದು ಹಾಸ್ಯ ಮಾಡಿದನು. - ನಭೆ, ಕಣ್ಣೆರದು ನೋಡಿದಳು. ಪ್ರಿಯಭಾತೃವಿನ ದಶ ನ ಬಹು ಎನಗಳ ಅನಂತರ ಆದ ಅಣ್ಣನ ದರ್ಶನದಿಂದ ಹರ್ಷಿ ತಳಾದರೂ ಅವ್ರ ದೋ ಮನೋವ್ಯಾಕುಲದಿಂದ ಕಣ್ಣಿನಲ್ಲಿ ನೀರು ಸುರಿಸುತ್ತ ಕ್ಷಣಕಾಲ ನಿಂತುಬಿಟ್ಟೆಳು. ಆಬಳಿಕ ಮನಸ್ಸನ್ನು ಸಮಾಧಾನಸ್ಥಿತಿಗೆ ತಂದುಕೊಂಡು « ಅಣ್ಣ! ಇದೇನು, ವರ್ತ ಮಾನವನ್ನು ಕೊಡದೆಯೇ ಬಂದುಬಿಟ್ಟೆ? ಆವಾಗ ಹೊರಟೆ?” ಎಂದು ಪ್ರಶ್ನೆ ಮಾಡಿದಳು, ನಿರಂಜನ:-ನನ್ನ ಆಗಮನಕ್ಕೆ ಸೂಚನೆಯ ಬೇಕೊ? ಬಿತ್ಸೆ! ನಭಾ:- ಏಕೆ ನಿಂತಿರುವೆ? ಕುಳಿತುಕೊಳ್ಳಬಾರದೆ? ಮನೆಯಲ್ಲಿ ಎಲ್ಲರೂ ಕ್ಷೇಮವೇ? ನಿರಂಜನ:- ಎಲ್ಲರೂ ಕ್ಷೇಮ. ರಮಾ:- “ ನಿರಂಜನ! ನಿನ್ನ ಧ್ವನಿಯನ್ನು ಕೇಳಿ ಆಶ್ಚರ್ಯ ಪಟ್ಟು ಓಡಿಬಂದುಬಿಟ್ಟೆ ! ನೀರಿಗೆ ಹಾಕಿದ ಚಹವನ್ನು ಶೋಧಿಸದೆಯೇ ಓಡಿ ಬಂದೆ, ಇಲ್ಲಿಯೇ ಇವಳೊಡನೆ ಮಾತನಾಡುತ್ತ ಕುಳಿತಿರ.. ನಾನೂ ಬರುವೆನು.” ಎಂದು ಹೇಳಿ ಒಳಗೆ ಹೊರಟುಹೋದಳು. ನಿರಂಜನನು :( ಆಗಬಹುದು, ನಾಳೆಯದಿನ ಸಾಯಂಕಾಲದವ ರೆಗೂ ಇಲ್ಲಿಯೇ ಇರುವೆನು, ಅಷ್ಟರೊಳಗಾಗಿ ಬಾ!” ಎಂದು ಹೇಳಿ ನಭೆಯ ಇದಿರಿಗಿದ್ದ ಒಂದು ವೇತ್ತಾಸನವನ್ನು ಅಲಂಕರಿಸಿದನು.