ಪುಟ:ನಭಾ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

68 ಸತೀಹಿತೈರ್ಷಿಣಿ ನಭಾ:-ಈಗ ನಾನಾರಸ್ವತ್ತು ? ನಿರಂಜನನು ಮನಸ್ಸಿನಲ್ಲಿ ಯೇ “ ನಮ್ಮ ಸ್ವತ್ತು; ಹೇಗೆ? ಆಗಲೇ ದಾನಮಾಡಿದ್ದೇವೆ, ಅಧಿಕಾರಿಯೇ ಇಲ್ಲ, ಏನುಹೇಳಲಿ ?ಶಾಸ್ತಾನುಸಾರ ವಾಗಿ ಮಾತನಾಡದಿದ್ದರೆಯೇ ಅನುಕೂಲ. ಬೇಗ ಸಿಕ್ಕಿಸಿಕೊಳ್ಳ ಬಹುದು, ಆದುದರಿಂದ ಹೀಗೆ ಹೇಳುವೆನು.” ಎಂದುಕೊಂಡು C: ನಿನಗೆ ನಾವೇ ಅಧಿಕಾರಿಗಳು.” ಸಭಾ:- ದರ್ಪದಿಂದ ಹೇಗೆ? ಅದೆಂದಿಗೂ ಆಗಲಾರದು. ಆ ವಿಚಾರವಿರಲಿ, ನಿಮ್ಮ ಮನೋಗತದಂತಯೇ ಬರುತ್ತೇನೆ. ಒಬ್ಬ ವಿಧ ವೆಗೆ ದ್ವಿತೀಯಸಂಬಂಧದಲ್ಲಿ ಸಂತಾನವಾಗುವುದೆಂದು ಭಾವಿಸುವ! ಆ ಸಂತಾನಕ್ಕೆ ಅಧಿಕಾರಿಯು ಯಾರಾಗಬೇಕು? ಮೊದಲಗಂಡನೆ? ಎರಡ ನೆಯಗಂಡನೊ? ಅವನ ತಾಯ್ತಂದೆಗಳೊ? ಅಥವಾ ಆ ವಿಧವೆಯೋ ? ಯಾರು ? ನಿರಂಜನ-ರಮಾಮಣಿಯರು ಫಕ್ಕನೆ ನಕ್ಕು ಏನು? ನಿನ್ನ ಪ್ರಶ್ನೆ ಯೇ ವಿಜಾತೀಯವಾಗಿದೆ.” ಎಂದರು. ನಭೆಯು ಹೇಳಿದಳು:- ( ಪ್ರಶ್ನೆ ಮಾಡುವಾಗಲೇ ಇಷ್ಟು ನಗುವ ನೀವೂ, ಆ ವಿಧವೆಗೆ ಸಂತಾನವಾದಾಗ ಮತ್ತೇನುಮಾಡಬಹುದೆ? ವೃಥಾವಿವಾದದಿಂದ ನನಗೇಕೆ ಕಷ್ಟವನ್ನು ಕೊಡುವಿರಿ? ರಮಾ:- ಚರ್ಚಿಸಲೂ ಬಾರದೇನು ? ನಿರಂಜನ:- ಚರ್ಚೆ ಮಾಡಬಾರದೆಂದು ಹೇಳುವರಾರು? ನಭಾ! ನಭಾ:- ಅದು ತಪ್ಪಲ್ಲ. ಪ್ರತಿಯೊಂದು ಕಾರದಲ್ಲಿಯ ವಿಚಾರ ವಿಮರ್ಶೆಯು ಅತ್ಯಾವಶ್ಯಕವೇ ಸರಿ. ವಿಚಾರವಿಲ್ಲದೆ ಆವುದನ್ನೂ ಮಾಡ ಬಾರದು. ನಿರಂಜನ:- ಸರಿಯೆ, ಅದಕ್ಕೆಂದೇ ವಿಚಾರಕ್ಕೆ ಬಂದಿದ್ದೇವೆ. ನಭಾ:- ಹಾಗಾದರೆ, ಸುಮ್ಮನೆ ನಗುವುದೇಕೆ? ಹೇಳಿರಿ, ಆಸಂತಾ ನದ ಅಧಿಕಾರವಾರದು ? ನಿರಂಜನ:- ಎರಡನೆಯ ಗಂಡನಿಗೆ ಸೇರತಕ್ಕುದು. ನಭಾ:- ಹೇಗೆ ?