ಪುಟ:ನಭಾ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 69 ನಿರಂಜನ:- ಹೇಗೆಂದರೆ, ನೋಡು, ಅವಳಿಗೆ ಮತ್ತೆ ವಿವಾಹವಾ ದರೆ ಆಗ ಅವಳು ವಿವಾಹವಾದವನ ಸ್ವತ್ತಾಗುವಳಷ್ಟೆ? ಅವಳಲ್ಲಿ ಹುಟ್ಟಿದ ಸಂತಾನವೂ ಅವಳ ಕೈ ಹಿಡಿದವನದೇ ಆಗುವುದು, ನಭಾ:- ಹೇಗೆ ? ನಿರಂಜನ:- ಮತ್ತೇನು? ನಭಾ:- ಅವಳ ಮೇಲಿನ ಅಧಿಕಾರವು ಆ ಉಪಪತಿಗೆಂದಿಗೂ ದೊರೆಯದು, ಹೇಗೆಂಬುದನ್ನು ನನ್ನ ಅಲ್ಪಮತಿಗೆ ತೋರಿದಂತೆ ಹೇಳುವೆನು ಕೇಳಿರಿ, ಒಬ್ಬ ಉದಾರಿಯಾದ ಜಮೀನುದಾರನು ಒಂದು ಕ್ಷೇತ್ರವನ್ನು ಒಬ್ಬ ಬ್ರಾಹ್ಮಣನಿಗೆ ದಾನಮಾಡುವನೆಂದು ಭಾವಿಸಿರಿ. ಹಾಗೆ ದಾನವಾದ ಸ್ವತ್ತಿನಮೇಲೆ ದಾನಕೊಟ್ಟ ವನ ಅಧಿಕಾರವೆನೂ ಇರದು. ಅದರ ಫಲವನ್ನು ದಾನ ತೆಗೆದುಕೊಂಡವನೇ ಅನುಭವಿಸಬೇಕು, ದಾನ ವನ್ನು ಅಂಗೀಕರಿಸಿದವನು ಮತ್ತೊಬ್ಬರಿಗೆ ದಾನಮಾಡದೆ ಮೃತನಾದರೆ, ಆ ಸ್ವತ್ತಿಗೂ ಆ ಸ್ವತ್ತಿನಲ್ಲಾಗುವಫಲಕ್ಕೂ ಅಧಿಕಾರಿ ಯಾರು? ಹಾಗೆಯೇ, ವಿಧಿವತ್ತಾಗಿ ತಾಯಿ ತಂದೆಗಳು ಆವಾತನ ಹಸ್ತದಲ್ಲಿ ತಮ್ಮ ತಮ್ಮ ಮಕ್ಕಳನ್ನು ಎಂದು ಒಪ್ಪಿಸುವರೋ ಅಂದೇ, ಅವರ ಮೇಲಿನ ಅಧಿಕಾರವು ಕಳೆದುಹೋಗುವುದು, ದಾನಪರಿಗ್ರಾಹಿಯಿಂದ ಅದನ್ನು ಮತ್ತಾರಾದ ರೂ ಪಡೆಯದೆ ತಾಯಿತಂದೆಗಳಿಂದ ಪಡೆಯಲಾಗದು, ದಾನವನ್ನು ಸ್ವೀಕರಿಸಿದವನು ಮೃತನಾದರೆ, ದಾನವಾದ ವಸ್ತುವು ಇಚ್ಚಿತವಸ್ತುವಿ ನೊಡನೆ ಸೇರಲರ್ಹವಾಗಲಾರದು. ದಾನವಾಗಿ ಹೋಗುವ ವಸ್ತುವಿಗೆ ದಾನಕ್ಕೆ ಹೋಗುವ ಅಧಿಕಾರವೆಷ್ಟೋ ಅಷ್ಟೇವಿನಾ, ಅರಿಗೆ, ಆವಾಗ, ಹೇಗೆ ದಾನವಾಗಬೇಕೆಂಬ ಅಧಿಕಾರವಾಗಲೀ, ಇಷ್ಟವಿಲ್ಲದವನಲ್ಲಿ ನಿಲ್ಲದೆ, ಇಷ್ಟವಿದ್ದೆಡೆಗೆ ಹೋಗುವ ಅಧಿಕಾರವಾಗಲೀ ಇಲ್ಲ. ನಿರಂಜನ:- ಸರಿ, ಸರಿ; ಹಾಗಾದರೆ, ನಿತಂತು ವಿವಾಹವಾಗಬಹು ದೆಂಬುವ ಶಾಸ್ತ್ರಾಧಾರವೆಲ್ಲ ಸುಳ್ಳೋ? ನಭಾ:- ಸುಳ್ಳು-ನಿಜವೆಂಬುದನ್ನು ನಾನು ಹೇಳುವವಳಲ್ಲ. ಆದರೆ, ಎಂತಹ ವಿತಂತುಗಳಿಗೆ ವಿವಾಹವಾಗಬಹುದೆಂಬುದನ್ನು ವಿಚಾರದಿಂದಲೇ ತಿಳಿಯಬೇಕಾಗಿದೆ, ಆವ ಕನ್ಯಯು ದಾನವಾಗದ ಸ್ಟೇಚ್ಛೆಯಿಂದ ವರನ