ಪುಟ:ನಭಾ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ನಭಾ

71

ನಾದರೆ, ಆ ಹೆಂಗಸು ತನ್ನ ದಾರಿದ್ಯ್ರಾದಿ ದೋಷಗಳಿಂದ ಪೀಡಿತಳಾಗಿ,
ಅನೇಕಾನೇಕ ಆಂತರಂಗಿಕ ರೋಗಪೀಡಿತನಾದ ಪುರುಷನನ್ನೇ ಪುನಃ
ವಿವಾಹ ಮಾಡಿಕೊಳ್ಳಬೇಕಾದರೆ, ಏನು ಮಾಡಬಲ್ಲಳು? ಅನ್ಯಮಾರ್ಗವಿ
ಲ್ಲದೆ, ಅವನನ್ನೇ ವರಿಸಿ, ಅವನಿಂದಲೇ ಮಕ್ಕಳನ್ನು ಪಡೆದರೆ, ಆ ಮಕ್ಕ
ಳಿಂದ ದೇಶಕ್ಕೆ ಹಾನಿಯಲ್ಲವೊ? ಈ ವಿಧವಾದ ಐಹಿಕ ಕಷ್ಟ, ಆ ವಿಧವಾದ
ಪಾರಲೌಕಿಕ ಹಾನಿಯಿಂದ ತೊಂದರೆಪಡುತಿರುವ ಅನ್ಯದೇಶೀಯರನ್ನು ನೋಡಿ,
ನಾವು ಬುದ್ಧಿ ಕಲಿಯಲು ಯತ್ನಿಸದೆ, ಅವರು ಪೂರ್ವದಲ್ಲಿ ಹಳ್ಳ
ಕ್ಕೆಬಿದ್ದು ಈಗ ಕಷ್ಟಪಡುವುದನ್ನು ತಿಳಿದುತಿಳಿದೂ, ಈಗ ನಾವೂ ಹಳ್ಳಕ್ಕೆ
ಬೀಳಲು ಪ್ರಯತ್ನಿಸುವುದು ನಾಗರಿಕತೆಯ ಸುಳಿವೆ ? ಅಮ್ಮ! ಅಣ್ಣ!
ನೋಡಿ ಹೇಳಿರಿ, ಐರೋಪ್ಯರಲ್ಲಿ ಅನುದಿನವೂ ಎಷ್ಟು ಮಂದಿ, ಗಂಡಂದಿ
ರನ್ನು ಬಿಟ್ಟಿಡುವರು? ಎಷ್ಟು ಮಂದಿ ಹೆಂಡಿರನ್ನು ಬಿಟ್ಟು ಬಿಡುವರು?
ಎಷ್ಟು ಮಂದಿ ಅಂತರಂಗಿಕ ರೋಗಗಳಿಂದ ಪೀಡಿತರಾಗಿರುವರು?
ನಿರಂಜನ:- ನಭಾ, ಹಾಗಾದರೆ ಈಗ ಈ ಭರತಖಂಡದಲ್ಲಿ ವಿಧ
ವಾವಿವಾಹ ಪದ್ಧತಿಯನ್ನು ತರುತಿರುವವರು ಹುಚ್ಚರೊ?
ನಭಾ:- ನಾನು ಹಾಗೆ ಹೇಳಲಾರೆನು; ಅದು ಅವರ ಇಚ್ಛೆ.
ಮಾಡಿಕೊಳ್ಳು ವವರ ಅಪೇಕ್ಷೆ. ಈ ಪದ್ಧತಿಯು ಸದ್ಯಕ್ಕೆ ಹಿತಕರವಾ
ದುದಲ್ಲವೆಂದು ನಾನು ನಂಬಿರುವೆನು, ದೇಶದ ಅಭ್ಯುದಯವನ್ನೇ
ಬಯಸುತ್ತಿರುವ ನಾವು ಒಂದು ಧೈಯವನ್ನು ಮುಂದಿಟ್ಟೆ ಜನರನ್ನು
ಎಚ್ಚರಿಸಬೇಕು. ಆ ಧೈಯವು ಉಚ್ಚತರದುದಾಗಿರಬೇಕೇ ಹೊರತು,
ಹೀನತರದುದಾಗಿದ್ದರೆ ಜನರ ಮಾನಸಿಕ ಉನ್ನತಿಯಾಗಲೀ ಪ್ರಯತ್ನದ
ಸಾರ್ಥಕತೆಯಾಗಲೀ ಆಗಲಾರದು. ಹಾಗಿಲ್ಲದೆ ಇಂದು ವಿಧವಾವಿವಾಹ
ವನ್ನು ಅನುಮೋದಿಸುವವರು ಇನ್ನು ಹತ್ತಾರು ವರ್ಷಗಳಲ್ಲಿ ಯೇ ಸಧವಾ ವಿವಾಹವನ್ನು ಕೂಡ ಅನುಮೋದಿಸಬಹುದು. ಇದರಿಂದ ಇಹಸುಖ
ಪ್ರಾಪ್ತಿಯಿಲ್ಲದ ಸಧವೆಗೂ ವಿಧವೆಗೂ ತಾರತಮ್ಯವಿಲ್ಲದಂತಾಗುವದರಲ್ಲಿ
ಸಂಶಯವಿಲ್ಲ. ಹಾಗಾಗುವದರಿಂದ "ಸೋಡು ಚೀಟಿ" (Divorce)
ಪದ್ಧತಿಯೂ ಬರಬೇಕಾಗುವುದು. ಆಗ ಭರತವರ್ಷದ ಭಾರತೀಯರ
ಸ್ಥಿತಿಗತಿಗಳೇನಾಗುವುದೆಂಬುದನ್ನೂ ಈಗ ಹೇಗಿರುವುದೆಂಬುದನ್ನೂ ಸ್ವಲ್ಪ